ಕಲಬುರಗಿ : ಅಪ್ಪನ ಕೆರೆಗೆ ಬಿದ್ದು ಪದವಿಧರನ ಆತ್ಮಹತ್ಯೆ
ಕಲಬುರಗಿ : ನಗರದ ಹೃದಯಭಾಗದಲ್ಲಿರುವ ಶ್ರೀ ಶರಣಬಸವೇಶ್ವರರ ಕೆರೆಗೆ ಬಿದ್ದು ಪದವೀಧರನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ವರದಿಯಾಗಿದೆ.
ಮೃತನಿಗೆ ನಗರದ ವಿಜಯನಗರ ಕಾಲೋನಿಯ ನಿವಾಸಿ ಪ್ರಕಾಶ್ ತಂದೆ ಬಂಡೆಪ್ಪ ಮಾಡ್ಯಾಳ್ (22) ಎಂದು ಗುರುತಿಸಲಾಗಿದೆ.
ಪದವಿ ಮುಗಿಸಿದ್ದು, ಆತ ಅನಾರೋಗ್ಯದಿಂದ ಬಳಲುತ್ತಿದ್ದ ಎನ್ನಲಾಗಿದೆ. ಇದರಿಂದಾಗಿಯೇ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಈ ಕುರಿತು ಬ್ರಹ್ಮಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.