Petrol Price Today: ಮುಂಬೈನಲ್ಲಿ 108 ರೂ. ಸಮೀಪಿಸಿದ ಪೆಟ್ರೋಲ್​ ಬೆಲೆ; ವಿವಿಧ ನಗರಗಳಲ್ಲಿ ಇಂದಿನ ದರವೆಷ್ಟು?

ಬೆಂಗಳೂರು(ಜು.22): ಪೆಟ್ರೋಲ್​-ಡೀಸೆಲ್​ ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ರಸ್ತೆಗೆ ವಾಹನ ಇಳಿಸಲು ಯೋಚಿಸುವಂತಾಗಿದೆ. ಸದ್ಯ ಅಚ್ಚರಿ ಎಂಬಂತೆ ಕಳೆದ ನಾಲ್ಕು ದಿನಗಳಿಂದ ಪೆಟ್ರೋಲ್-ಡೀಸೆಲ್​​​ ಬೆಲೆಯಲ್ಲಿ ಏರಿಕೆಯಾಗಿಲ್ಲ. ಇಂದು ಭಾರತದಲ್ಲಿ ಪೆಟ್ರೋಲ್​ ಬೆಲೆ 101.84 ರೂ. ಇದ್ದರೆ ಡೀಸೆಲ್​ ಬೆಲೆ 89.87 ರೂ. ಇದೆ. ಮುಂಬೈನಲ್ಲಿ ಒಂದು ಲೀಟರ್​ ಪೆಟ್ರೋಲ್​ ಬೆಲೆ 107.83 ರೂ. ಆಗಿದ್ದರೆ, ಒಂದು ಲೀಟರ್​ ಡೀಸೆಲ್​ ಬೆಲೆ 97.45 ರೂ. ಆಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 105 ರೂ ದಾಟಿದೆ. ಸದ್ಯ 105.25 ರೂಪಾಯಿಗೆ ಬಂದು ಮುಟ್ಟಿದೆ. ಇನ್ನು, ಡೀಸೆಲ್ ಬೆಲೆ ಇಲ್ಲಿ ಲೀಟರ್​ಗೆ 95.26 ರೂ ಇದೆ. ಬೆಂಗಳೂರಿನಲ್ಲಿ ಕಳೆದ 10 ದಿನಗಳಿಂದ ಪೆಟ್ರೋಲ್ ಬೆಲೆ 1.49 ರೂಪಾಯಿಯಷ್ಟು ಏರಿಕೆ ಕಂಡಿದೆ. ಇದೇ ಅವಧಿಯಲ್ಲಿ ಡೀಸೆಲ್ ಬೆಲೆಯಲ್ಲಿ 37 ಪೈಸೆಯಷ್ಟು ಹೆಚ್ಚಳವಾಗಿದೆ. ದೇಶದ 20 ರಾಜ್ಯಗಳಲ್ಲಿ ಇದೀಗ ಪೆಟ್ರೋಲ್ ಬೆಲೆ ನೂರು ರೂ ಗಡಿ ದಾಟಿದೆ. ಮಧ್ಯಪ್ರದೇಶ ರಾಜಧಾನಿ ಭೋಪಾಲ್​ನಲ್ಲಿ ಪೆಟ್ರೋಲ್ ಬೆಲೆ 110 ರೂ ದಾಟಿದೆ. ಇನ್ನು, ರಾಜಸ್ಥಾನದಲ್ಲಿ ಪಾಕಿಸ್ತಾನದ ಗಡಿ ಸಮೀಪವೇ ಇರುವ ಶ್ರೀ ಗಂಗಾನಗರ್ ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ 113.21 ರೂ ಇದೆ. ಇದು ದೇಶದಲ್ಲೇ ಅತಿ ದುಬಾರಿ ಪೆಟ್ರೋಲ್ ಇರುವ ಜಿಲ್ಲೆ ಎನಿಸಿದೆ. ಈ ಜಿಲ್ಲೆಯಲ್ಲಿ ಡೀಸೆಲ್ ಬೆಲೆ ಕೂಡ ಕೆಲ ದಿನಗಳ ಹಿಂದೆಯೇ ಶತಕ ಬಾರಿಸಿದೆ. ಇಲ್ಲಿ ಡೀಸೆಲ್ ಬೆಲೆ ಲೀಟರ್​ಗೆ 103.15 ರೂ ಇದೆ. ರಾಜಸ್ಥಾನ, ಒಡಿಶಾ ಮತ್ತು ಮಧ್ಯ ಪ್ರದೇಶದ ಕೆಲ ಜಿಲ್ಲೆಗಳಲ್ಲಿ ಡೀಸೆಲ್ ಬೆಲೆ ಶತಕ ದಾಟಿ ಮುಂದೆ ಹೋಗಿದೆ.

ಮೇ 4ರಿಂದಲೂ ದೇಶದಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿದೆ. ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ತಮಿಳುನಾಡು ಮತ್ತು ಪಾಂಡಿಚೇರಿಯಲ್ಲಿ ವಿಧಾನಸಭಾ ಚುನಾವಣೆ ನಡೆದ ಬಳಿಕ ಬೆಲೆ ಏರಿಕೆಯ ಕಾವು ಹೆಚ್ಚಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ದೈನಂದಿನ ಬದಲಾವಣೆ ಬೆಳಿಗ್ಗೆ 6 ಗಂಟೆಗೆ ಸಂಭವಿಸುತ್ತದೆ. ಬೆಳಿಗ್ಗೆ 6 ರಿಂದ ಹೊಸ ದರಗಳು ಅನ್ವಯವಾಗುತ್ತವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕ, ವ್ಯಾಪಾರಿ ಆಯೋಗ ಮತ್ತು ಇತರ ವಸ್ತುಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ವಿದೇಶಿ ವಿನಿಮಯ ದರಗಳ ಜೊತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ಬೆಲೆಗಳು ಯಾವುವು ಎಂಬುದರ ಆಧಾರದ ಮೇಲೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿದಿನ ಬದಲಾಗುತ್ತವೆ.

ದೇಶದ ಪ್ರಮುಖ ನಗರಗಳಲ್ಲಿ ಇಂದು ಪೆಟ್ರೋಲ್ – ಡೀಸೆಲ್ ಬೆಲೆ ಹೀಗಿದೆ:
ಮುಂಬೈನಲ್ಲಿ ಪೆಟ್ರೋಲ್​ ಬೆಲೆ 107.83 ರೂ. ಡೀಸೆಲ್​ ಬೆಲೆ 97.45 ರೂ. ಇದೆ.ದೆಹಲಿಯಲ್ಲಿ ಪೆಟ್ರೋಲ್​ ಬೆಲೆ 101.84 ರೂ. ಡೀಸೆಲ್​ ​ ಬೆಲೆ 89.87 ರೂ. ಇದೆ.
ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 102.49 ರೂ. ಡೀಸೆಲ್​ ಬೆಲೆ 94.39 ರೂ. ಇದೆ.
ಕೊಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 102.08 ರೂ. ಡೀಸೆಲ್​ ಬೆಲೆ 93.02 ರೂ. ಇದೆ
ಭೂಪಾಲ್​​ನಲ್ಲಿ ಪೆಟ್ರೋಲ್ ಬೆಲೆ 110.20 ರೂ. ಡೀಸೆಲ್​ ಬೆಲೆ 98.67 ರೂ. ಇದೆ
ಹೈದಾರಾಬಾದ್​ನಲ್ಲಿ ಪೆಟ್ರೋಲ್​ ಬೆಲೆ 105.83 ರೂ. ಡೀಸೆಲ್​ ಬೆಲೆ 97.96 ರೂ.
ಬೆಂಗಳೂರಿನಲ್ಲಿ ಪೆಟ್ರೋಲ್​ ಬೆಲೆ 105.25 ರೂ. ಡೀಸೆಲ್​ ಬೆಲೆ 95.26 ರೂ. ಇದೆ.
ಗುಹಾವಟಿಯಲ್ಲಿ ಪೆಟ್ರೋಲ್​ ಬೆಲೆ 97.64 ರೂ. ಡೀಸೆಲ್​ ಬೆಲೆ 89.22 ರೂ. ಇದೆ.
ಲಕ್ನೋದಲ್ಲಿ ಪೆಟ್ರೋಲ್ ಬೆಲೆ 98.92 ರೂ. ಡೀಸೆಲ್ ಬೆಲೆ 90.26 ರೂ. ಇದೆ.
ಗಾಂಧಿನಗರದಲ್ಲಿ ಪೆಟ್ರೋಲ್​ ಬೆಲೆ 98.79 ರೂ. ಡೀಸೆಲ್​ ಬೆಲೆ 96.95 ರೂ. ಇದೆ.
ತಿರುವನಂತಪುರಂನಲ್ಲಿ ಪೆಟ್ರೋಲ್​ ಬೆಲೆ 103.82 ರೂ. ಡೀಸೆಲ್ ಬೆಲೆ 96.47 ರೂ. ಇದೆ.

ನಿಮ್ಮ ನಗರದ ತೈಲ ಬೆಲೆಯನ್ನು ಪರಿಶೀಲಿಸುವುದು ಹೇಗೆ?

ದೇಶದ ಮೂರು ತೈಲ ಮಾರುಕಟ್ಟೆ ಕಂಪನಿಗಳಾದ ಎಚ್‌ಪಿಸಿಎಲ್, ಬಿಪಿಸಿಎಲ್ ಮತ್ತು ಐಒಸಿ ಬೆಳಿಗ್ಗೆ 6 ಗಂಟೆಯ ನಂತರ ಹೊಸ ದರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಿತರಿಸುತ್ತವೆ. ಹೊಸ ದರಗಳಿಗಾಗಿ, ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಮಾಹಿತಿಯನ್ನು ಪಡೆಯಬಹುದು. ಅದೇ ಸಮಯದಲ್ಲಿ, ನೀವು ಮೊಬೈಲ್ ಫೋನ್‌ಗಳಲ್ಲಿ ಎಸ್‌ಎಂಎಸ್ ಮೂಲಕವೂ ದರವನ್ನು ಪರಿಶೀಲಿಸಬಹುದು.

92249 92249 ಗೆ ಎಸ್‌ಎಂಎಸ್ ಕಳುಹಿಸುವ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಬಗ್ಗೆಯೂ ನೀವು ತಿಳಿದುಕೊಳ್ಳಬಹುದು. ನೀವು ಆರ್​ಎಸ್​ಪಿ <ಸ್ಪೇಸ್> ಪೆಟ್ರೋಲ್ ಪಂಪ್ ಡೀಲರ್ ಕೋಡ್ ಅನ್ನು 92249 92249 ಗೆ ಕಳುಹಿಸಬೇಕು. ನೀವು ದೆಹಲಿಯಲ್ಲಿದ್ದರೆ ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಸಂದೇಶದ ಮೂಲಕ ತಿಳಿದುಕೊಳ್ಳಲು ಬಯಸಿದರೆ, ನೀವು ಆರ್​ಎಸ್​ಪಿ 102072 ಅನ್ನು 92249 92249 ಗೆ ಕಳುಹಿಸಬೇಕು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಳವಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವುದು, ಹಾಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆಯಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇಳಿಸುವುದು ಸಾಮಾನ್ಯವಾದ ಸಂಗತಿ.ಕೊರೋನಾ ಮಹಾಮಾರಿಯಿಂದ ಜನ ಸಾಯುತ್ತಿದ್ದಾರೆ. ಲಾಕ್ಡೌನ್ನಿಂದ ಕೋಟ್ಯಾಂತರ ಜನಕ್ಕೆ ನಿತ್ಯದ ಜೀವನ ನಿರ್ವಹಣೆಯೇ ದುಸ್ತರವಾಗಿದೆ. ದೇಶದ ಆರ್ಥಿಕ ಚಟುವಟಿಕೆಗೆ ಪಾರ್ಶ್ವವಾಯು ಬಡಿದಿದೆ. ಆದರೂ ಪೆಟ್ರೋಲ್ ಬೆಲೆ ಮಾತ್ರ ಕಡಿಮೆಯಾಗಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾದರೆ ಸಹಜವಾಗಿ ನಿತ್ಯ ಬಳಕೆಯ ಬೇರೆಲ್ಲಾ ವಸ್ತುಗಳ ಬೆಲೆ ಹೆಚ್ಚಳವಾಗುತ್ತದೆ. ಇದರಿಂದ ಜನಸಾಮಾನ್ಯರಿಗೆ ಮತ್ತಷ್ಟು ಹೊರೆಯಾದಂತಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *