ಮೆಗಾ ವರ್ಚುವಲ್ ಉದ್ಯೋಗ ಮೇಳ ಜುಲೈ 23ಕ್ಕೆ: ನೀವಿರುವ ಸ್ಥಳದಿಂದಲೇ ಪಾಲ್ಗೊಳ್ಳಿ

ಬೆಂಗಳೂರು: ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮವು ಮೆರಿಟ್ಯೂಡ್ ಸ್ಕಿಲ್ ಡೆವಲಪ್​ಮೆಂಟ್ ಸಹಯೋಗದಲ್ಲಿ ಜುಲೈ 23ರಂದು (ಶುಕ್ರವಾರ) ಮೆಗಾ ವರ್ಚುವಲ್ ಉದ್ಯೋಗ ಮೇಳವನ್ನು ಆಯೋಜಿಸಿದೆ. ಆಸಕ್ತರು ಈ ಲೇಖನದ ಕೊನೆಯಲ್ಲಿ ನೀಡಿರುವ ಲಿಂಕ್ ಮೂಲಕ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ನೋಂದಣಿ ಮಾಡಿಕೊಳ್ಳಬಹುದು. ಅರ್ಹ ಅಭ್ಯರ್ಥಿಗಳನ್ನು ಮೇಳದ ಅವಧಿಯಲ್ಲಿ ಸಂದರ್ಶನಕ್ಕೆ ಆಹ್ವಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಕರ್ನಾಟಕದ ಎಲ್ಲ ನಿರುದ್ಯೋಗಿ ಯುವಕ, ಯುವತಿಯರು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದು ಎಂದು ಕೌಶಲ ಅಭಿವೃದ್ಧಿ ನಿಗಮವು ತಿಳಿಸಿದೆ. ಮೇಳದಲ್ಲಿ 20 ಕಂಪನಿಗಳು ಪಾಲ್ಗೊಳ್ಳುತ್ತಿದ್ದು, 1000 ಮಂದಿಗೆ ಉದ್ಯೋಗಾವಕಾಶಗಳಿವೆ. ಜುಲೈ 23ರ ಮಧ್ಯಾಹ್ನ 12.30ಕ್ಕೆ ವರ್ಚುವಲ್ ಸಂದರ್ಶನಗಳು ನಡೆಯಲಿವೆ.

8ನೇ ತರಗತಿ, ಎಸ್​ಎಸ್​ಎಲ್​ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ ಪದವೀಧರರು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಆಸಕ್ತರು ನೋಂದಣಿಗೆ ಬಳಸಬಹುದಾದ ಲಿಂಕ್: https://tinyurl.com/ksdcmegavjf

ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶ
ಭಾರತೀಯ ಸೇನೆಯು ಇಲಾಖಾ ರಹಿತ ಅಧಿಕಾರಿಗಳ ಹುದ್ದೆಗಾಗಿ ಆನ್​ಲೈನ್​ (Online) ಮೂಲಕ ಅರ್ಜಿ ಆಹ್ವಾನ ಮಾಡಿವೆ. ಆಸಕ್ತರು ಇಂದಿನಿಂದಲೇ ಅರ್ಜಿ ಸಲ್ಲಿಸಬಹುದಾಗಿದ್ದು, ಆಗಸ್ಟ್​ 20ರವರೆಗೆ ಅವಕಾಶವಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಲೆಫ್ಟಿನೆಂಟ್​ ಶ್ರೇಣಿ (Lieutenant Rank)ಯಲ್ಲಿ ನೇಮಕ ಮಾಡಲಾಗುತ್ತದೆ ಮತ್ತು ಇವರಿಗೆ ನೀಡಲಾಗುವ ವೇತನ, ಭತ್ಯೆಗಳು, ಸವಲತ್ತುಗಳೆಲ್ಲ ಸಾಮಾನ್ಯ ಸೇನಾ ಅಧಿಕಾರಿಗಳಿಗೆ ಇರುವಂತೆ ಇರುತ್ತದೆ. ಹಾಗಿದ್ದಾಗ್ಯೂ ಈ ಪ್ರಾದೇಶಿಕ ಸೇನೆ ಪಾರ್ಟ್ ಟೈಂ ಆಗಿದ್ದು, ವರ್ಷದಲ್ಲಿ ಎರಡು ತಿಂಗಳು ತರಬೇತಿ ಇರುತ್ತದೆ.

ಹುದ್ದೆ ನೇಮಕಾತಿಗೆ ಆಯ್ಕೆ ಆಗಬೇಕಾದರೆ ಪರೀಕ್ಷೆ ಲಿಖಿತವಾಗಿ ಬರೆಯಬೇಕು. ಸೆಪ್ಟೆಂಬರ್​ 26ರಂದು ಆಫ್​ಲೈನ್​ ಪರೀಕ್ಷೆ ನಡೆಯಲಿದ್ದು, ಕೊನೆಯಲ್ಲಿ ನೇಮಕಗೊಂಡ ಅಭ್ಯರ್ಥಿಗಳಿಗೆ 56, 100 ರಿಂದ 1,77,500 ರೂ .ನೀಡಲಾಗುತ್ತದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *