ಕುರುಬ ಸಮಾಜಕ್ಕೆ ಸಿಎಂ ಸ್ಥಾನ ನೀಡಿ..
ವಿಜಯಪುರ: ಬಿಜೆಪಿ ಹೈಕಮಾಂಡ ಸಿಎಂ ಬಿಎಸ್ವೈ ಅವರನ್ನು ಬದಲಾವಣೆ ಮಾಡಿದರೆ ರಾಜಾಹುಲಿ ಸ್ಥಾನಕ್ಕೆ ಸಚಿವ ಈಶ್ವರಪ್ಪಗೆ ಅವಕಾಶ ನೀಡಬೇಕು ಎಂದು ಕುರುಬ ಸಮಾಜದ ಗುರುಪೀಠದ ಶ್ರೀ ಸೋಮೇಶ್ವರ ಸ್ಬಾಮೀಜಿ ಆಗ್ರಹಿಸಿದರು.ವಿಜಯಪುರದಲ್ಲಿ ಮಾತನಾಡಿದ ಅವರು, ಕುರುಬ ಸಂಘಟನೆಗಳು ಹಾಗೂ ವಿವಿಧ ಸ್ವಾಮಿಜಿಗಳು ಕೆ ಎಸ್ ಈಶ್ವರಪ್ಪ ಪರವಾಗಿ ಇದ್ದಾರೆಂದು ಬ್ಯಾಟಿಂಗ್ ಮಾಡಿದರು. ಇನ್ನು ರಾಜಾಹುಲಿ ಸ್ಥಾನ ಅನಿವಾರ್ಯದಿಂದ ತೆರುವಾದ್ರೇ ಈಶ್ವರಪ್ಪ ಅವರನ್ನು ಸಿಎಂ ಮಾಡಬೇಕೆಂದು ಒತ್ತಾಯಿಸಿದರು.