ತ್ವರಿತ ಲಸಿಕೆ ಪೂರೈಸಿದ ಭಾರತಕ್ಕೆ ವಿಶ್ವಸಂಸ್ಥೆಯಲ್ಲಿ ಭಾರೀ ಮೆಚ್ಚುಗೆ!

ವಿಶ್ವಸಂಸ್ಥೆ(ಸೆ.30): ಕೋವಿಡ್‌ ಸಾಂಕ್ರಾಮಿಕ(Covid 19) ನಿಯಂತ್ರಣಕ್ಕಾಗಿ ಪರಿಣಾಮಕಾರಿ ಹೋರಾಟ ನಡೆಸುವುದರ ಜೊತೆಗೆ, ಸೋಂಕು ಮಣಿಸಲು ಇತರೆ ದೇಶಗಳಿಗೆ ನೆರವಾದ ಭಾರತಕ್ಕೆ ವಿಶ್ವಸಂಸ್ಥೆಯಲ್ಲಿ(United Nations) ಹಲವು ದೇಶಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಸೆ.21ರಿಂದ ಆರಂಭವಾದ ವಿಶ್ವಸಂಸ್ಥೆಯ 76ನೇ ಸಾಮಾನ್ಯ ಅಧಿವೇಶನದಲ್ಲಿ ಹಲವು ವಿಶ್ವ ನಾಯಕರು ಕೋವಿಡ್‌(Covid 19) ವಿರುದ್ಧದ ಹೋರಾಟಕ್ಕಾಗಿ ತ್ವರಿತವಾಗಿ ಲಸಿಕೆ, ವೈದ್ಯಕೀಯ ಉಪಕರಣಗಳನ್ನು ಪೂರೈಸಿದ ಭಾರತ ಹಾಗೂ ಇತರೆ ದೇಶಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ನೇಪಾಳ, ಭೂತಾನ್‌, ಆಸ್ಪ್ರೇಲಿಯಾ(Australia), ಸುರಿನಾಮ್‌, ನಯುರು, ನೈಜೀರಿಯಾ, ಸೇಂಟ್‌ ಲೂಸಿಯಾ, ಸೇಂಟ್‌ ವಿನ್ಸೆಂಟ್‌ ಮತ್ತು ಗ್ರೆನಾಡಿನೆಸ್‌, ಘಾನಾ, ಫಿಜಿ, ಡೊಮಿನಿಕಾ ಸೇರಿದಂತೆ ಹಲವು ರಾಷ್ಟ್ರಗಳು ಅಧಿವೇಶನದಲ್ಲಿ ಭಾರತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿವೆ.

‘ಕೋವಿಡ್‌ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ನಮ್ಮೊಂದಿಗೆ ಜೊತೆಯಾದ ಭಾರತ ಹಾಗೂ ವಿವಿಧ ರಾಷ್ಟ್ರಗಳಿಗೆ ಅಭಿನಂದನೆಗಳು. ಲಸಿಕೆ, ಆಮ್ಲಜನಕ, ವೈದ್ಯಕೀಯ ಉಪಕರಣಗಳನ್ನು ನೀಡುವ ಮೂಲಕ ನಮ್ಮೊಂದಿಗೆ ಒಗ್ಗಟ್ಟು ಪ್ರದರ್ಶಿಸಿದ್ದರಿಂದ ಕೋವಿಡ್‌ ವಿರುದ್ಧ ಹೋರಾಡಲು ಸಾಧ್ಯವಾಯಿತು’ಎಂದು ಶ್ಲಾಘಿಸಿದ್ದಾರೆ. ಕೋವಿಡ್‌ ಸಾಂಕ್ರಾಮಿಕದ ನಡುವೆ ಭಾರತ ಸುಮಾರು 100 ದೇಶಗಳಿಗೆ 6.6 ಕೋಟಿಗೂ ಅಧಿಕ ಡೋಸ್‌ ಲಸಿಕೆಗಳನ್ನು ಪೂರೈಸಿದೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *