ಹಿಂದಿ ಕಿರುತೆರೆಯ ಖ್ಯಾತ ನಟಿ, ‘ಬಿಗ್ ಬಾಸ್’ ವಿನ್ನರ್ ಶ್ವೇತಾ ತಿವಾರಿ ಆಸ್ಪತ್ರೆಗೆ ದಾಖಲು

ಹೈಲೈಟ್ಸ್‌:

  • ಹಿಂದಿ ಕಿರುತೆರೆಯ ಖ್ಯಾತ ನಟಿ ಶ್ವೇತಾ ತಿವಾರಿ ಆಸ್ಪತ್ರೆಗೆ ದಾಖಲು
  • ಅನಾರೋಗ್ಯದಿಂದ ಬಳಲುತ್ತಿರುವ ನಟಿ ಶ್ವೇತಾ ತಿವಾರಿ
  • ‘ಬಿಗ್ ಬಾಸ್ 4’ ಕಾರ್ಯಕ್ರಮ ಗೆದ್ದಿರುವ ನಟಿ ಶ್ವೇತಾ ತಿವಾರಿ
ಹಿಂದಿ ಕಿರುತೆರೆಯ ಜನಪ್ರಿಯ ನಟಿ ಶ್ವೇತಾ ತಿವಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ನಟಿ ಶ್ವೇತಾ ತಿವಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸತತವಾಗಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಶ್ವೇತಾ ತಿವಾರಿ ವೀಕ್ನೆಸ್ ಹಾಗೂ ಲೋ ಬಿಪಿಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಟಿ ಶ್ವೇತಾ ತಿವಾರಿ ಇನ್ಸ್ಟಾಗ್ರಾಮ್ ಪೋಸ್ಟ್
ನಟಿ ಶ್ವೇತಾ ತಿವಾರಿ ಇತ್ತೀಚೆಗಷ್ಟೇ ಇನ್ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದರು. ಆಸ್ಪತ್ರೆಯ ಬೆಡ್ ಮೇಲೆ ಪುಸ್ತಕ ಓದುತ್ತಿರುವ ಫೋಟೋವನ್ನು ನಟಿ ಶ್ವೇತಾ ತಿವಾರಿ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಇದನ್ನ ಕಂಡ ಅಭಿಮಾನಿಗಳು ಹಾಗೂ ತಾರೆಯರು ಆತಂಕ ವ್ಯಕ್ತಪಡಿಸಿದರು. ಬಳಿಕ ಶ್ವೇತಾ ತಿವಾರಿ ತಂಡ ಸ್ಪಷ್ಟನೆ ನೀಡಿದೆ.
ಗಾಬರಿ ಪಡುವಂಥದ್ದು ಏನೂ ಇಲ್ಲ!
‘’ನಟಿ ಶ್ವೇತಾ ತಿವಾರಿ ಚೇತರಿಸಿಕೊಳ್ಳುತ್ತಿದ್ದಾರೆ. ಗಾಬರಿ ಪಡುವಂಥದ್ದು ಏನೂ ಇಲ್ಲ’’ ಎಂದು ನಟಿ ಶ್ವೇತಾ ತಿವಾರಿ ತಂಡ ತಿಳಿಸಿದೆ. ‘’ಶ್ವೇತಾ ತಿವಾರಿ ಆರೋಗ್ಯದ ಬಗ್ಗೆ ಅನೇಕರು ಫೋನ್ ಹಾಗೂ ಮೆಸೇಜ್‌ಗಳನ್ನು ಮಾಡುತ್ತಿದ್ದಾರೆ. ವೀಕ್ನೆಸ್ ಹಾಗೂ ಲೋ ಬಿಪಿಯಿಂದಾಗಿ ಶ್ವೇತಾ ತಿವಾರಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೆಲವು ಕಾರ್ಯಕ್ರಮಗಳಿಗಾಗಿ ಶ್ವೇತಾ ತಿವಾರಿ ಹೆಚ್ಚು ಪ್ರಯಾಣ ಮಾಡಿದ್ದರು. ವಾತಾವರಣ ಬದಲಾಗಿದ್ದರಿಂದ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ನಿಮ್ಮೆಲ್ಲರ ಪ್ರೀತಿ ಹಾಗೂ ಸಪೋರ್ಟ್‌ಗೆ ಧನ್ಯವಾದಗಳು. ಶ್ವೇತಾ ತಿವಾರಿ ಚೇತರಿಸಿಕೊಳ್ಳುತ್ತಿದ್ದಾರೆ. ಆದಷ್ಟು ಬೇಗ ಮನೆಗೆ ವಾಪಸ್ ಆಗಲಿದ್ದಾರೆ’’ ಎಂದು ನಟಿ ಶ್ವೇತಾ ತಿವಾರಿ ತಂಡ ಹೇಳಿಕೆ ಬಿಡುಗಡೆ ಮಾಡಿದೆ.
ಶ್ವೇತಾ ತಿವಾರಿ ಕುರಿತು…
ಉತ್ತರ ಪ್ರದೇಶ ಮೂಲದ ಶ್ವೇತಾ ತಿವಾರಿ ವೃತ್ತಿ ಜೀವನ ಆರಂಭಿಸಿದ್ದು ದೂರದರ್ಶನದಿಂದ. ‘ಆನೇ ವಾಲಾ ಪಲ್’ ಸೇರಿದಂತೆ ದೂರದರ್ಶನದ ಕೆಲ ಧಾರಾವಾಹಿಗಳಲ್ಲಿ ಶ್ವೇತಾ ತಿವಾರಿ ನಟಿಸಿದರು. ಬಳಿಕ ‘ಕಸೌತಿ ಝಿಂದಗಿ ಕೇ’ ಸೀರಿಯಲ್‌ನಲ್ಲಿ ಶ್ವೇತಾ ತಿವಾರಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದರು. ಸುದೀರ್ಘವಾಗಿ ಪ್ರಸಾರ ಕಂಡ ಈ ಧಾರಾವಾಹಿ ಶ್ವೇತಾ ತಿವಾರಿಗೆ ಜನಪ್ರಿಯತೆ ತಂದುಕೊಡ್ತು. ನಂತರ ‘ಕುಮ್ ಕುಮ್’, ‘ಕಾವ್ಯಾಂಜಲಿ’ ಧಾರಾವಾಹಿಗಳಲ್ಲಿ ಅತಿಥಿಯಾಗಿ ಶ್ವೇತಾ ತಿವಾರಿ ಕಾಣಿಸಿಕೊಂಡರು.

‘ನಚ್ ಬಲಿಯೇ 2’ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಶ್ವೇತಾ ತಿವಾರಿ ಆರನೇ ಸ್ಥಾನ ಪಡೆದರು. ‘ಬಿಗ್ ಬಾಸ್ 4’ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ ಶ್ವೇತಾ ತಿವಾರಿ ವಿಜೇತರಾಗಿ ಹೊರಹೊಮ್ಮಿದರು. ‘ಫಿಯರ್ ಫ್ಯಾಕ್ಟರ್: ಖತರೋಂಕೆ ಖಿಲಾಡಿ 11’ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದ ಶ್ವೇತಾ ತಿವಾರಿ ನಾಲ್ಕನೇ ರನ್ನರ್ ಅಪ್ ಆಗಿದ್ದಾರೆ.

ಹಿಂದಿಯ ‘ಅಬ್ರ ಕಾ ಡಬ್ರ’, ‘ಮಿಲೇ ನಾ ಮಿಲೇ ಹಮ್’, ‘ಮ್ಯಾರೀಡ್ ಟು ಅಮೇರಿಕಾ’ ಮುಂತಾದ ಸಿನಿಮಾಗಳಲ್ಲೂ ಶ್ವೇತಾ ತಿವಾರಿ ಅಭಿನಯಿಸಿದ್ದಾರೆ.

ಕನ್ನಡ ಚಿತ್ರದಲ್ಲೂ ಕಾಣಿಸಿಕೊಂಡಿದ್ದ ಶ್ವೇತಾ ತಿವಾರಿ
ದಶಕದ ಹಿಂದೆ ತೆರೆಗೆ ಬಂದಿದ್ದ ದುನಿಯಾ ವಿಜಯ್ ನಟನೆಯ ‘ದೇವ್ರು’ ಚಿತ್ರದ ಐಟಂ ಸಾಂಗ್‌ನಲ್ಲಿ ಶ್ವೇತಾ ತಿವಾರಿ ಸೊಂಟ ಬಳುಕಿಸಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *