ಕೃಷಿ ಇಲಾಖೆ ಅಧಿಕಾರಿಗಳ ಎಡವಟ್ಟು, ರಾಜ್ಯದಲ್ಲಿ ಗೊಬ್ಬರದ ಕೊರತೆ
ಬೆಂಗಳೂರು, ಸೆ.30- ರೈತರಿಗೆ ಸಾಕಷ್ಟು ರಸಗೊಬ್ಬರ ಪೂರೈಕೆಯಾಗಬೇಕಾದ ಸಮಯದಲ್ಲಿ ರಾಜ್ಯದ ಹಲವು ಜಿಲ್ಲಾಗಳಲ್ಲಿ ಗೊಬ್ಬರಕ್ಕೆ ಕೊರತೆಯುಂಟಾಗಿದೆ. ಡಯಮೊನಿಯಮ್ ಫಾಸೇಟ್(ಡಿಎಪಿ)ಗೆ ಮುಖ್ಯವಾಗಿ ಕೊರತೆ ಉಂಟಾಗಿದ್ದು, ಇದರಲ್ಲಿ ನೈಟ್ರೋಜನ್ ಮತ್ತು ಫಾಸ್ಪರಸ್ ಇರುವುದರಿಂದ ಬೆಳೆಗಳಿಗೆ ಅತ್ಯುತ್ತಮ ಮತ್ತು ಅಗತ್ಯವಾದ ಗೊಬ್ಬರವಾಗಿದೆ.
ಸಹಕಾರಿ ಸೊಸೈಟಿಗಳು ಮತ್ತು ಡೀಲರ್‍ಗಳ ಬಳಿ ಡಿಎಪಿ ಕೊರತೆ ಬಹಳಷ್ಟಿದೆ ಎಂದು ರೈತರು ಮತ್ತು ಅvಕಾರಿಗಳು ಹೇಳುತ್ತಿದ್ದಾರೆ. ಆದರೆ, ಕೃಷಿ ಸಚಿವ ಬಿ. ಸಿ.ಪಾಟೀಲ್ ಹೇಳುವುದೇ ಬೇರೆ. ರಾಜ್ಯದಲ್ಲಿ ರಸಗೊಬ್ಬರ ಕೊರತೆಯಿಲ್ಲ, ಸಾಗಾಣಿಕೆಯಿಂದಾಗಿ ಪೂರೈಕೆ ಒಂದೆರಡು ದಿನ ತಡವಾಗಬಹುದು. ಯಾರಾದರೂ ಬೇಕೆಂದೇ ಗೊಬ್ಬರಕ್ಕೆ ಕೊರತೆ ಸೃಷ್ಟಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಲಾಗುವುದು ಎನ್ನುತ್ತಾರೆ..
ಬೆಳಗಾವಿ ಜಿಲ್ಲಾಯಲ್ಲಿ ಕಳೆದ ಆರು ತಿಂಗಳಿನಿಂದ ರೈತರು ರಸಗೊಬ್ಬರ ಕೊರತೆಯನ್ನು ಎದುರಿಸುತ್ತಿದ್ದು, ಖಾಸಗಿ ಕಂಪೆನಿಗಳಿಂದಲೂ ಸರಬರಾಜು ಕಡಿಮೆಯಾಗಿದೆ. ಸಿದ್ದಗೌಡ ಮೋದಗಿ ಎಂಬ ರೈತ, ಅನೇಕ ಪ್ರದೇಶಗಳಲ್ಲಿ ಮಾರಾಟದ ಹಂತದಲ್ಲಿ ಅಕಾರಿಗಳು ಲಭ್ಯವಿರುವ ದಾಸ್ತಾನುಗಳ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡುವುದಿಲ್ಲ. ಪ್ರಮಾಣದ ರಸಗೊಬ್ಬರಗಳನ್ನು ಪಡೆಯಲು ರೈತರು ಕಷ್ಟಪಡುತ್ತಾರೆ ಎಂದು ವಾಸ್ತವಿಕತೆಯನ್ನು ಬಚ್ಚಿಟ್ಟಿದ್ದಾರೆ.
ಹಲವಾರು ತಾಲೂಕುಗಳಲ್ಲಿ ರೈತರು ಡಿಎಪಿ ಕೊರತೆಯನ್ನು ಎದುರಿಸುತ್ತಿದ್ದಾರೆ. ರೈತರು ಹೆಸರು ಕಾಳು, ಜೋಳ, ಸೂರ್ಯಕಾಂತಿ ಮತ್ತು ನೆಲಗಡಲೆಯನ್ನು ಬೆಳೆಯುತ್ತಾರೆ, ರಸಗೊಬ್ಬರ ಬೇಕಾಗುತ್ತದೆ ಎಂದು ಹೇಳುತ್ತಾರೆ.
ಜಿಲ್ಲಾಯಲ್ಲಿ ಈಗ ಸಾಕಷ್ಟು ಡಿಎಪಿ ಮತ್ತು ಯೂರಿಯಾ ದಾಸ್ತಾನು ಇದೆ. ಆದರೂ ಜೂನ್-ಜುಲೈನಲ್ಲಿ ಕೊರತೆಯಿತ್ತು ಎಂದು ಒಪ್ಪಿಕೊಳ್ಳುತ್ತಾರೆ. ಉಡುಪಿಯೂ ಕೆಲವು ವಾರಗಳ ಹಿಂದೆ ಕೊರತೆಯನ್ನು ಎದುರಿಸುತ್ತಿತ್ತು. ಆದರೆ ಈಗ ಸಮಸ್ಯೆಯನ್ನು ಪರಿಹರಿಸಲಾಗಿದೆ. ಹಾಸನದಲ್ಲಿ, ಪೊಟ್ಯಾಷ್ ಸ್ವಲ್ಪ ಕೊರತೆಯನ್ನು ಹೊರತುಪಡಿಸಿ, ಯಾವುದೇ ಪ್ರಮುಖ ಸಮಸ್ಯೆ ಇಲ್ಲ ಮತ್ತು ಇಲಾಖೆಯು ವ್ಯವಸ್ಥೆಯನ್ನು ಸುಗಮಗೊಳಿಸಿದೆ. ಕೃಷಿ ಇಲಾಖೆಯು ಸರಾಸರಿ 1.41 ಲಕ್ಷ ಟನ್‍ಗಳ ಬೇಡಿಕೆಯಲ್ಲಿ 1.54 ಲಕ್ಷ ಟನ್ ರಸಗೊಬ್ಬರಗಳನ್ನು ವಿತರಿಸಿದೆ.
ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲಾಯಲ್ಲಿ ರೈತರು ಡಿಎಪಿ ಮತ್ತು ಯೂರಿಯಾವನ್ನು ತೊಗರಿಬೇಳೆ, ಕಡಲೆ, ಗೋ, ಜೋಳ ಮತ್ತು ಕಬ್ಬು ಬೆಳೆಗಳಿಗೆ ಬಳಸುತ್ತಾರೆ. ಅಕಾರಿಗಳು ಕೂಡ ಕೊರತೆ ಇದೆ ಎಂದು ಒಪ್ಪಿಕೊಂಡಿದ್ದಾರೆ.
ತಾಂತ್ರಿಕ ಸಮಸ್ಯೆಗಳಿಂದಾಗಿ ವಿತರಕರು ಮಾರಾಟದ ಸ್ಥಳದಲ್ಲಿ ಬೇಡಿಕೆಗಳನ್ನು ಪೂರೈಸಲು ವಿಫಲರಾಗುತ್ತಿರುವುದರಿಂದ ನಮಗೆ ಸಂಗ್ರಹ ಪಡೆಯಲು ಸಾಧ್ಯವಾಗಲಿಲ್ಲ. ಒಂದು ಅಥವಾ ಎರಡು ವಾರಗಳಲ್ಲಿ ಸಾಕಷ್ಟು ರಸಗೊಬ್ಬರ ಸಂಗ್ರಹ ಬರುವ ಸಾಧ್ಯತೆಯಿದೆ. ರಸಗೊಬ್ಬರಗಳನ್ನು ಮುಖ್ಯವಾಗಿ ರಬಿ ಋತುವಿನಲ್ಲಿ ಬಳಸಲಾಗುತ್ತದೆ. ವಿಜಯಪುರ ಜಿಲ್ಲಾಯು ಇನ್ನೂ ಡಿಎಪಿಯ ಹೊಸ ದಾಸ್ತಾನುಗಾಗಿ ಕಾಯುತ್ತಿದೆ, ಅಕ್ಟೋಬರ್ ಮೊದಲ ವಾರದಿಂದ ಜಿಲ್ಲಾಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಗರಿಬೇಳೆ ಬಿತ್ತನೆಯಾದಾಗ ಬೇಡಿಕೆ ಹೆಚ್ಚಾಗುತ್ತದೆ ಎಂದು ಅಕಾರಿ ಹೇಳಿದ್ದಾರೆ.