ಮೈಸೂರು ದಸರಾಗೆ ದಿನಗಣನೆ ಆರಂಭ, ಅರಮನೆ ಆವರಣದಲ್ಲಿ ಕುಶಾಲತೋಪು ತಾಲೀಮು
ಮೈಸೂರು, ಸೆ.30- ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ಉತ್ಸವದಲ್ಲಿ ಪಾಲ್ಗೊಳ್ಳುವ ಆನೆಗಳು ಮತ್ತು ಕುದುರೆಗಳಿಗೆ ಸಿಡಿಮದ್ದಿನ ತಾಲೀಮು ನಡೆಸಲಾಯಿತು. ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ದಸರಾ ಆನೆಗಳಿಗೆ ಮಾರಮ್ಮ ದೇವಸ್ಥಾನದ ಬಳಿ ಕುಶಾಲತೋಪು ಸಿಡಿಸಿ ಸಿಡಿಮದ್ದಿನ ತಾಲೀಮು ನಡೆಸಲಾಯಿತು.
ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳು ಮತ್ತು ಕುದುರೆಗಳನ್ನು ಸಾಲಾಗಿ ನಿಲ್ಲಿಸಿ ಅವುಗಳ ಎದುರು ಫಿರಂಗಿಗಳನ್ನಿಟ್ಟು ಸಿಡಿಮದ್ದು ತುಂಬಿಸಿ ಅವುಗಳನ್ನು ಸಿಡಿಸುವ ಮೂಲಕ ಆನೆ ಮತ್ತು ಕುದುರೆಗಳು ಬೆದರದಂತೆ ನೋಡಿಕೊಳ್ಳಲಾಯಿತು. ಅಭಿಮನ್ಯು ನೇತೃತ್ವದ ಎಂಟು ದಸರಾ ಆನೆಗಳು ಹಾಗೂ ಹಲವಾರು ಕುದುರೆಗಳು ತಾಲೀಮಿನಲ್ಲಿ ಪಾಲ್ಗೊಂಡಿದ್ದವು.
ಈ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ, ಡಿಸಿಪಿಗಳಾದ ಪ್ರದೀಪ್ ಗುಂಟಿ, ಗೀತಾ ಪ್ರಸನ್ನ ಮತ್ತಿತರ ಹಿರಿಯ ಪೆÇಲೀಸ್ ಅಕಾರಿಗಳು ಉಪಸ್ಥಿತರಿದ್ದರು.