ಬೆಂಗಳೂರು-ಧಾರವಾಡ ನಡುವೆ ‘ವಂದೇ ಭಾರತ್’ ರೈಲು ಸಂಚಾರ
ಹುಬ್ಬಳ್ಳಿ,ಸೆ.30-ಭಾರತೀಯ ರೈಲ್ವೆ 2024ರ ಹೊತ್ತಿಗೆ ಒಟ್ಟು 102 ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲುಗಳನ್ನು ಓಡಿಸಲು ತೀರ್ಮಾನಿಸಿದೆ. ಬೆಂಗಳೂರು-ಧಾರವಾಡ ನಡುವೆ ಸಹ ಈ ರೈಲು ಸಂಚಾರ ನಡೆಸಲು ಮಾಡಿದ ಮನವಿಗೆ ಇಲಾಖೆ ಸ್ಪಂದಿಸಿದೆ.
ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲು ಓಡಿಸುವ ಕುರಿತು ಮನವಿ ಸಲ್ಲಿಸಿದ್ದಾರೆ. ಮೊದಲ ದೇಶಿಯ ರೈಲು ವಂದೇ ಭಾರತ್ ಎಕ್ಸ್‍ಪ್ರೆಸ್ ಸಂಚಾರ ಆರಂಭಿಸಿ ಒಂದು ವರ್ಷ ಕಳೆದಿದೆ. ಶೇ.100ರಷ್ಟು ದೇಶಿಯವಾಗಿ ನಿರ್ಮಾಣ ಮಾಡಲಾದ ರೈಲು ಇದಾಗಿದೆ. ಪ್ರಧಾನಿ ನರೇಂದ್ರ ಮೋದಿ ಕನಸಿನ ಆತ್ಮ ನಿರ್ಭರ ಭಾರತ ಪರಿಕಲ್ಪನೆ ಗಮನದಲ್ಲಿಟ್ಟುಕೊಂಡು ರೈಲು ತಯಾರಿಸಲಾಗಿದೆ.
ಮತ್ತೆ ಪುಣೆ-ಎರ್ನಾಕುಲಂ ರೈಲು ಸಂಚಾರ; ಕರ್ನಾಟಕಕ್ಕೆ ಉಪಯೋಗ: ಸದ್ಯ ದೇಶದ ಅತಿ ವೇಗದ ರೈಲು ಇದಾಗಿದೆ. ಬೆಂಗಳೂರು-ಧಾರವಾಡ ನಡುವೆ ವಂದೇ ಭಾರರ್ ಎಕ್ಸ್‍ಪ್ರೆಸ್ ರೈಲು ಸಂಚಾರ ಆರಂಭ ವಾದರೆ ರಾಜಧಾನಿಯಿಂದ ಉತ್ತರ ಕರ್ನಾಟಕ ವನ್ನು ಕೆಲವೇ ಗಂಟೆಗಳಲ್ಲಿ ತಲುಪ ಬಹುದಾಗಿದೆ. ರೈಲು ಸಂಚಾರ ಯಾವಾಗ ಆರಂಭವಾಗಲಿದೆ ಎಂಬುದು ಇನ್ನೂ ಅಂತಿಮವಾಗಿಲ್ಲ.
ಹಲವು ಜಿಲ್ಲಾಗಳಿಗೆ ಅನುಕೂಲ: ಬೆಂಗಳೂರು – ಧಾರವಾಡ ನಡುವೆ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲು ಸಂಚಾರ ಆರಂಭವಾದರೆ ಹಲವು ಜಲ್ಲಾಗಳಿಗೆ ಅನುಕೂಳವಾಗಲಿದೆ. ಬೆಂಗಳೂರಿನಿಂದ ಹೊರಡುವ ರೈಲು ತುಮಕೂರು, ದಾವಣಗೆರೆ, ಹಾವೇರಿ ಮಾರ್ಗವಾಗಿ ಸಂಚಾರ ನಡೆಸಲಿದೆ.
ಹುಬ್ಬಳ್ಳಿ-ಧಾರವಾಡದಲ್ಲಿ ನೈಋತ್ಯ ರೈಲ್ವೆ ವಲಯ ಕಚೇರಿ ಇದೆ. ಮೆಡಿಕಲï ಕಾಲೇಜು, ಐಐಟಿ ಸೇರಿದಂತೆ ಶೈಕ್ಷಣಿಕ, ವಾಣಿಜ್ಯೋದ್ಯಮಕ್ಕೆ ಅವಳಿ ನಗರ ಪ್ರಸಿದ್ಧಿಯಾಗಿದೆ. ರೈಲು ಸಂಚಾರ ಆರಂಭವಾದರೆ ಸಹಾಯಕವಾಗಲಿದೆ.
ಈಗಾಗಲೇ ಭಾರತೀಯ ರೈಲ್ವೆ 58 ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲುಗಳ ನಿರ್ಮಾಣಕ್ಕೆ ಟೆಂಡರ್ ಕರೆದಿದೆ. 2022ರ ಆಗಸ್ಟ್ 23ರೊಳಗೆ ಇನ್ನೂ 75 ಹೊಸ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲುಗಳನ್ನು ಓಡಿಸುವ ಗುರಿಯನ್ನು ಇಲಾಖೆ ಹೊಂದಿದೆ. 2024ರ ಹೊತ್ತಿಗೆ 102 ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲು ಸಂಚಾರ ನಡೆಸಬೇಕು ಎಂಬುದು ಗುರಿಯಾಗಿದೆ.
ಆಗಸ್ಟ್ 15ರಂದು ದೆಹಲಿಯ ಕೆಂಪುಕೋಟೆ ಮೇಲೆ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ 75 ಹೊಸ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲುಗಳನ್ನು ಓಡಿಸುವುದಾಗಿ ಘೋಷಣೆ ಮಾಡಿದ್ದರು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾದ ಹಿನ್ನಲೆಯಲ್ಲಿ 75 ರೈಲುಗಳನ್ನು ಘೋಷಣೆ ಮಾಡಲಾಗಿತ್ತು
# ದೇಶದಲ್ಲೇ ರೈಲು ತಯಾರಿಕೆ:
ವಂದೇ ಭಾರತ್ ರೈಲುಗಳನ್ನು ದೇಶದಲ್ಲಿಯೇ ತಯಾರು ಮiÁಡಲಾಗುತ್ತದೆ. ಚೆನ್ನೆ ೈನಲ್ಲಿರುವ ಇಂಟಿಗ್ರಲï ಕೋಚ್ ಫ್ಯಾಕ್ಟರಿ, ಚೆನ್ನೆ ೈನ ಮಾಡರ್ನ್ ಕೋಚ್ ಫ್ಯಾಕ್ಟರಿ, ರಾಯ್‍ಬರೇಲಿ ಮತ್ತು ಕಪುರ್ತಲಾದ ರೈಲು ಕೋಚ್ ಫ್ಯಾಕ್ಟರಿಗಳಲ್ಲಿ ಈ ರೈಲು ನಿರ್ಮಾಣವಾಗಲಿದೆ. ವಂದೇ ಭಾರತ್ ರೈಲಿನ ವಿನ್ಯಾಸ ಸಹ ಆಕರ್ಷಕವಾಗಿದೆ. ನರೇಂದ್ರ ಮೋದಿ ಕನಸಿನ ಆತ್ಮನಿರ್ಭತ್ ಭಾರರ್ ಪರಿಕಲ್ಪನೆಯಲ್ಲಿ ಈ ರೈಲನ್ನು ತಯಾರು ಮಾಡಲಾಗಿದೆ. ನರೇಂದ್ರ ಮೋದಿ ಕ್ಷೇತ್ರವಾದ ವಾರಣಾಸಿ-ದೆಹಲಿ ನಡುವೆ ಈಗಾಗಲೇ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲು ಸಂಚಾರ ನಡೆಸುತ್ತಿದೆ. ಈ ರೈಲಿನ ವೇಗ 160 ಕಿ. ಮೀ.ಗಳು.
# ಶತಾಬ್ದಿ ರೈಲುಗಳಿಗಿಂತ ವೇಗವಾಗಿ ಸಂಚಾರ:
2019ರ ಫೆಬ್ರವರಿಯಲ್ಲಿ ದೆಹಲಿ-ವಾರಣಾಸಿ ನಡುವೆ ಮತ್ತು 2019ರ ಅಕ್ಟೋಬರ್‍ನಲ್ಲಿ ದೆಹಲಿ-ಶ್ರೀ ಮಾತಾ ವೈಷ್ಣೋದೇವಿ ಕಟ್ರಾ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲು ಸಂಚಾರಕ್ಕೆ ಚಾಲನೆ ನೀಡಲಾಗಿದೆ. ಶತಾಬ್ದಿ ರೈಲಿಗಿಂತ ವೇಗದಲ್ಲಿ ಈ ರೈಲು ಸಂಚಾರ ನಡೆಸಲಿವೆ. ರೈಲಿನ ವಿನ್ಯಾಸವನ್ನು ಬದಲಾವಣೆ ಮಾಡಲಾಗುತ್ತಿದ್ದು, 2022ರಲ್ಲಿ ಹೊಸ ವಿನ್ಯಾಸದ ರೈಲು ಹಳಿಯ ಮೇಲೆ ಇರಲಿದೆ. ಕರ್ನಾಟಕದಲ್ಲಿಯೂ ವಂದೇ ಭಾರತ್ ರೈಲು ಸಂಚಾರಕ್ಕೆ ಇಲಾಖೆ ಯಾವಾಗ ದಿನಾಂಕ ನಿಗದಿ ಮಾಡಲಿದೆ ಎಂದು ಕಾದು ನೋಡಬೇಕಿದೆ.