ಮೋದಿ ಚಿಲ್ಲರೆ ಮನುಷ್ಯ ಅಲ್ಲ, ಚಿನ್ನದ ಗಟ್ಟಿ: ಖರ್ಗೆ ಅವರೇ ಈ ಕೂಡಲೇ ಕ್ಷಮೆಯಾಚಿಸಿ, ಈಶ್ವರಪ್ಪ

*  ಪ್ರಧಾನಿ ಮೋದಿ ಚಿಲ್ಲರೆ ಮನುಷ್ಯ ಎಂದ ಖರ್ಗೆ
*  ಕಾಂಗ್ರೆಸ್ ಮೊದಲು ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಕೆಲಸ ಮಾಡಲಿ
*  ದೇಶದಲ್ಲಿ ಕಾಂಗ್ರೆಸ್ ಪಕ್ಷ ಪಿಸ್ ಪಿಸ್ ಆಗಿದೆ

 

ಕಲಬುರಗಿ(ಅ.04):  ಇಡೀ ವಿಶ್ವವೇ ಮೋದಿಯನ್ನ ಮೆಚ್ಚಿಕೊಂಡಿದೆ, ಮಲ್ಲಿಕಾರ್ಜುನ ಖರ್ಗೆಯವರು(Mallikarjun Kharge) ಹೇಳಿದ್ರೆ ಇಡೀ ವಿಶ್ವ ಮೆಚ್ಚುತ್ತಾ? ನರೇಂದ್ರ ಮೋದಿ ಚಿನ್ನದ ಗಟ್ಟಿ ಇದ್ದಂಗೆ, ಚಿಲ್ಲರೆ ಮನುಷ್ಯ ಅಂದ್ರೆ ಯಾರಾದ್ರೂ ಒಪ್ಪುತ್ತಾರಾ, ಬಾಯಿ ತಪ್ಪಿ ಹೇಳಿದ್ರೆ ಖರ್ಗೆ ಕ್ಷಮೆ ಕೇಳಲಿ. ಈ ಮಾತಿಂದ ನನಗಂತೂ ಬಹಳ ಬೇಜಾರಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ತುಂಬಾ ಗೌರವ ಇದೆ ಅಂತ ಸಚಿವ ಕೆ.ಎಸ್.ಈಶ್ವರಪ್ಪ(KS Eshwarappa) ಹೇಳಿದ್ದಾರೆ.

ಇಂದು(ಸೋಮವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಖರ್ಗೆ ಅಂದ್ರೆ ಸುಮ್ ಸುಮ್ಮನೆ ಏನೊ ಮಾತಾಡೋರಲ್ಲ. ಆದರೆ ನಿನ್ನೆ ವಿಶ್ವವೇ ಮೆಚ್ಚಿದ ನಾಯಕ ಮೋದಿ(Narendra Modi) ಬಗ್ಗೆ ಚಿಲ್ಲರೆ ವ್ಯಕ್ತಿ ಅಂತಾ ಮಾತಾಡಿದ್ದಾರೆ. ವಿಶ್ವನಾಯಕನ ಬಗ್ಗೆ ಚಿಲ್ಲರೇ ಎಂದರೆ ವಿಶ್ವದ ಜನ ಏನಂತಾರೆ. ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಖಾಯಂ ಭದ್ರತಾ ಸದಸ್ಯತ್ವ ಸಿಕ್ಕಿದೆ. ಕೇಂದ್ರ ಸಂಪುಟದಲ್ಲಿ 27 ಜನ ದಲಿತರಿಗೆ ಸಚಿವ ಸ್ಥಾನ ಮೋದಿ ನೀಡಿದ್ದಾರೆ. ಈ ಹಿಂದಿನ ಪ್ರಧಾನಿಗಳು ವಿದೇಶಕ್ಕೆ ಹೋದಾಗ ಸಾಲ ಕೇಳಲು ಭಾರತ ಪ್ರಧಾನಿ ಬಂದಿದ್ದರು ಅಂತಿದ್ದರು. ಪ್ರಧಾನಿ ಮೋದಿ ಚಿಲ್ಲರೆ ಮನುಷ್ಯ ಅಲ್ಲ, ಮೋದಿ ಚಿನ್ನದ ಗಟ್ಟಿ, ರಾಜ್ಯದಲ್ಲಿ 27 ಸಂಸದರನ್ನ ಆಯ್ಕೆ ಮಾಡಿದ ಜನರು ಚಿಲ್ಲರೆನಾ? ಎಂದು ಖರ್ಗೆ ವಿರುದ್ಧ ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ.

 

ಬಿಜೆಪಿಯ ಶಾಸಕರು ಸಿಂಹ ಇದ್ದಂಗೆ..

ಯಾರೊಬ್ಬರೂ ಕಾಂಗ್ರೆಸ್(Congress) ಪಕ್ಷಕ್ಕೆ ಹೋಗೋದೇ ಇಲ್ಲ, ದೇಶದಲ್ಲಿ ಕಾಂಗ್ರೆಸ್ ಪೀಸ್ ಪೀಸ್ ಆಗಿದೆ. ನಮ್ಮ ಶಾಸಕರೆಲ್ಲ ಚಿನ್ನದ ಗಟ್ಟಿ ತರ ಇದಾರೆ. ಚುನಾವಣೆ ಬಂದ್ರೆ ಬಿಜೆಪಿಗೆ(BJP) ಖುಷಿ, ಕಾಂಗ್ರೆಸ್‌ಗೆ ನಡುಕ ಶುರುವಾಗುತ್ತದೆ. ಚುನಾವಣೆ ಅಂದ್ರೆ ಗೆಲುವು ಬಿಜೆಪಿಗೆ ಫಿಕ್ಸ್. ಸಾಯೋ ಪಾರ್ಟಿ ಅಂದ್ರೆ ಅದು ಕಾಂಗ್ರೆಸ್. ಹೀಗಾಗಿ ಎರಡೂ ಬೈ ಎಲೆಕ್ಷನ್‌ ನಾವೇ ಗೆಲ್ತೇವೆ ಅಂತ ತಿಳಿಸಿದ್ದಾರೆ.

ಬಿಜೆಪಿಯ ಶಾಸಕರು ಸಿಂಹ ಇದ್ದ ಹಾಗೇ, ನಮ್ಮ ಶಾಸಕರು ಮಾರಾಟದ ವಸ್ತುಗಳಲ್ಲ, ಬಿಜೆಪಿಯ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಮಾತೇ ಇಲ್ಲ. 40 ಅಲ್ಲ, 4 ಜನ ಶಾಸಕರನ್ನ ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಲಿ ನೋಡೊಣ, ಸಾಯುವ ಪಕ್ಷಕ್ಕೆ ಯಾರಾದರೂ ಹೋಗ್ತಾರೇನ್ರಿ. ಪಂಜಾನ್‌ನಲ್ಲಿ ಕಾಂಗ್ರೆಸ್ ಪಕ್ಷ ಒಡೆದುಹೋದ್ರೆ, ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಪಿಸ್ ಪಿಸ್ ಆಗಿದೆ ಅಂತ ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ಮೊದಲು ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಕೆಲಸ ಮಾಡಲಿ.ಕಾಂಗ್ರೆಸ್ ಈ ಹಿಂದೆ ಮಾಡಿದ ಕೆಲಸಗಳ ಬಗ್ಗೆ ಪಟ್ಟಿ ಕೊಡಲಿ, ನಂತರ ನಾವು ಕೊಡಿತ್ತೇವೆ. ಅನೇಕ ರಾಷ್ಟ್ರಗಳ ಮುಸ್ಲಿಂರು ಬಿಜೆಪಿ ಬೆಂಬಲ ಘೋಷಿಸಿದ್ದೆರೆ, ಜೆಡಿಎಸ್ ಮುಸ್ಲಿಂರನ್ನ ಚುನಾವಣೆಗೆ ನಿಲ್ಲಿಸಿದ್ರೆ ಕಾಂಗ್ರೆಸ್‌ಗೆ ಭಯವಾಗುತ್ತದೆ ಅಂತ ಹೇಳಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *