ಆರ್ ಎಸ್ ಎಸ್ ಇಲ್ಲಾಂದ್ರೆ ಪಾಕಿಸ್ತಾನ ಸೃಷ್ಟಿಯಾಗುತ್ತಿತ್ತು; ಸಚಿವ ಪ್ರಭು ಚವ್ಹಾಣ್

ಹೈಲೈಟ್ಸ್‌:

  • ಆರ್.ಎಸ್.ಎಸ್ ಇಲ್ಲಾಂದ್ರೆ ದೇಶದಲ್ಲಿ ಪಾಕಿಸ್ತಾನ ಸೃಷ್ಟಿಯಾಗುತ್ತಿತ್ತು ಎಂದು ಪ್ರಭು ಚೌಹ್ಹಾಣ್ ಅಭಿಪ್ರಾಯ
  • ಆರ್ ಎಸ್ ಎಸ್ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಗೆ ತಿರುಗೇಟು
  • ಕೇಂದ್ರದಲ್ಲಿ ರಾಜ್ಯದಲ್ಲಿ ನಮ್ಮ ಸರ್ಕಾರ ಇದೆ. ಹತಾಶೆಯಿಂದ ಈ‌ ಹೇಳಿಕೆ ನೀಡುತ್ತಿದ್ದಾರೆ. ಇದು ಖಂಡನೀಯವೆಂದ ಶುಸಂಗೋಪನಾ ಸಚಿವ

ಬೆಂಗಳೂರು: ಆರ್.ಎಸ್.ಎಸ್ ಇಲ್ಲಾಂದ್ರೆ ದೇಶದಲ್ಲಿ ಪಾಕಿಸ್ತಾನ ಸೃಷ್ಟಿಯಾಗುತ್ತಿತ್ತು ಎಂದು ಪ್ರಭು ಚೌಹ್ಹಾಣ್ ಅಭಿಪ್ರಾಯಪಟ್ಟಿದ್ದಾರೆ. ವಿಕಾಸಸೌಧದಲ್ಲಿ ಬುಧವಾರ ಮಾತನಾಡಿದ ಅವರು, ಆರ್ ಎಸ್ ಎಸ್ ಇದ್ದ ಕಾರಣ ದೇಶ ಗಟ್ಟಿ ಇದೆ, ಇಲ್ಲಾಂದ್ರೆ ಪಾಕಿಸ್ತಾನ ಸೃಷ್ಟಿಯಾಗುತ್ತಿತ್ತು ಎಂದರು

ಆರ್ ಎಸ್ ಎಸ್ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿಕೆಯನ್ನು ಖಂಡಿಸಿದ ಅವರು, ಕೇಂದ್ರದಲ್ಲಿ ರಾಜ್ಯದಲ್ಲಿ ನಮ್ಮ ಸರ್ಕಾರ ಇದೆ. ಹತಾಶೆಯಿಂದ ಈ‌ ಹೇಳಿಕೆ ನೀಡುತ್ತಿದ್ದಾರೆ. ಇದು ಖಂಡನೀಯ ಎಂದರು.

ಗೋ ಸಂರಕ್ಷಣೆಗೆ ಸಂಚಾರಿ ಚಿಕಿತ್ಸಾಲಯಗಳ
ಗೋ ಸಂರಕ್ಷಣೆಗಾಗಿ ಸಂಚಾರಿ ಚಿಕಿತ್ಸಾಲಯಗಳನ್ನು ಆರಂಭಿಸಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹ್ಹಾಣ್ ತಿಳಿಸಿದರು.

ರಾಷ್ಟ್ರೀಯ ರೋಗ ನಿಯಂತ್ರಣ ಯೋಜನೆ ಅಡಿಯಲ್ಲಿ ಸಂಚಾರಿ ಪಶು ಚಿಕಿತ್ಸಾಲಯಗಳು ಕೇಂದ್ರದಿಂದ ಮಂಜೂರಾಗಿವೆ. ರಾಜ್ಯದ ಎಲ್ಲಾ ತಾಲೂಕಿಗೆ 275 ಸಂಚಾರಿ ಪಶು ಚಿಕಿತ್ಸಾಲಯಗಳು ಮಂಜೂರು ಆಗಿದ್ದು
ಸಂಚಾರಿ ಚಿಕಿತ್ಸಾಲಯ ವಾಹನ ನಿರ್ವಹಣೆಗೆ ಕೇಂದ್ರದಿಂದ 60% ರಾಜ್ಯದಿಂದ 40% ವೆಚ್ಚ ಭರಿಸಲಾಗುತ್ತದೆ. ರೈತರು 1962 ಗೆ ಕರೆ ಮಾಡಿದರೆ ಮನೆಗೆ ವಾಹನ ಬರುತ್ತದೆ. ಪಶುಸಂಜೀವಿನಿ ಸಂಚಾರಿ ಚಿಕಿತ್ಸಾಲಯವನ್ನು ಇಡೀ ದೇಶದಲ್ಲಿ ಆರಂಭಿಸುವ ಭರವಸೆಯನ್ನು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಪ್ರಾಣಿ ಸಹಾಯವಾಣಿ ಕೇಂದ್ರಕ್ಕೆ 25,000 ಕರೆ ಬಂದಿದೆ. ಕಾಲುಬಾಯಿ ರೋಗಕ್ಕೆ 50 ಲಕ್ಷ ಲಸಿಕೆ ಡೋಸ್ ನೀಡಲಾಗಿದೆ. ಗೋಹತ್ಯೆ ಕಾನೂನು‌ ಬಂದ ಬಳಿಕ 400 ಎಫ್ ಐ ಆರ್ ದಾಖಲಾಗಿದೆ. ಕಾಯ್ದೆ ಜಾರಿ ಬಳಿಕ ಗೋವುಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂದು ಮಾಹಿತಿ ನೀಡಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *