ಸಂಜಯ್ ದತ್ ಗೆ ಕ್ಯಾನ್ಸರ್: ಕೆಜಿಎಫ್ 2 ಚಿತ್ರೀಕರಣದ ಕತೆಯೇನು?

ಬೆಂಗಳೂರು: ಕೆಜಿಎಫ್ 2 ಸಿನಿಮಾದಲ್ಲಿ ಅಧೀರ ಪಾತ್ರ ಮಾಡುತ್ತಿರುವ ಬಾಲಿವುಡ್ ನಟ ಸಂಜಯ್ ದತ್ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಕಾರಣದಿಂದ ಕೆಲವು ದಿನಗಳವರೆಗೆ ಶೂಟಿಂಗ್ ನಿಂದ ಬ್ರೇಕ್ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಇದು ಕೆಜಿಎಫ್ 2 ಚಿತ್ರೀಕರಣದ ಮೇಲೆ ಪ್ರಭಾವ ಬೀರಬಹುದೇ ಎಂಬ ಅನುಮಾನ ಶುರುವಾಗಿದೆ.

ಸಂಜಯ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಕೆಲವು ವೈದ್ಯಕೀಯ ಚಿಕಿತ್ಸೆಗಾಗಿ ಬ್ರೇಕ್ ತೆಗೆದುಕೊಳ್ಳುತ್ತಿದ್ದೇನೆ ಎಂದಿದ್ದಾರೆ. ಆದರೆ ಎಷ್ಟು ದಿನ, ಕೆಜಿಎಫ್ 2 ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಬಗ್ಗೆ ಏನನ್ನೂ ಹೇಳಿಲ್ಲ. ಆದರೆ ಮೂಲಗಳ ಪ್ರಕಾರ ಸಂಜು ಬಾಬಗೆ ಮೂರನೇ ಹಂತದ ಕ್ಯಾನ್ಸರ್ ಇದೆ ಎನ್ನಲಾಗಿದೆ. ಹೀಗಾಗಿ ಅವರ ಆರೋಗ್ಯ ಸ್ಥಿತಿ ಬಗ್ಗೆ ಏನನ್ನೂ ಹೇಳುವ ಸ್ಥಿತಿಯಲ್ಲಿಲ್ಲ.

ಈ ನಡುವೆ ಕೆಜಿಎಫ್ 2 ಸಿನಿಮಾದ ಅಂತಿಮ ಹಂತದ ಚಿತ್ರೀಕರಣ ಬಾಕಿಯಿದ್ದು, ಮುಂದಿನ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ. ಕೊನೆಯ ಹಂತದ ಚಿತ್ರೀಕರಣಕ್ಕೆ ಸಂಜಯ್ ಲಭ್ಯರಿರುತ್ತಾರೋ ಎಂದು ಇನ್ನಷ್ಟೇ ತಿಳಿದುಬರಬೇಕಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *