ದಸರಾವನ್ನು ‘ನಾಡಹಬ್ಬ’ ಎಂದು ಏಕೆ ಕರೆಯುತ್ತಾರೆ?

ಒಂದೊಂದು ಊರಿಗೆ ಒಂದೊಂದು ನಾಡಹಬ್ಬವಿದೆ. ಕೇರಳಿಗರಿಗೆ ಓಣಂ, ಮಹಾರಾಷ್ಟ್ರದವರಿಗೆ ಗಣೇಶ ಹಬ್ಬದಂತೆ ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ, ಹಾಗೆ ಕರ್ನಾಟಕದಲ್ಲಿ ಕನ್ನಡಿಗರಿಗೆ ಸಹ ವರ್ಷದಲ್ಲಿ ನವರಾತ್ರಿ ಪ್ರಮುಖ ನಾಡಹಬ್ಬವಾಗಿದೆ.

ಹಿಂದೆ ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ನಾಡಹಬ್ಬ ದಸರಾವನ್ನು ವೈಭವದಿಂದ ಆಚರಿಸುತ್ತಿದ್ದರು. ಮುಸಲ್ಮಾನರು ಬಂದು ಆಳ್ವಿಕೆ ನಡೆಸಲು ಆರಂಭಿಸಿದಾಗ ರಾಜರ ಕೈಕೆಳಗಿದ್ದ ಸಾಮಂತರು ಎಲ್ಲರೂ ಒಗ್ಗಟ್ಟಾಗಿದ್ದರು. ವಿಜಯನಗರದಲ್ಲಿ ದಸರಾ ಆಚರಿಸಲು ಸಾಧ್ಯವಾಗದಿದ್ದಾಗ ಈ ಸಾಮಂತರೆಲ್ಲರೂ ಸೇರಿ ಚಿನ್ನದ ಚಾಮುಂಡಿಯನ್ನು ಆನೆ ಮೇಲೆ ಎಚ್ಚರಿಕೆಯಿಂದ ಕದ್ದುಮುಚ್ಚಿ ಹೇಗೋ ತಂದು ಮೈಸೂರಿನ ಹತ್ತಿರ ಹಳ್ಳಿಯಲ್ಲಿ ಮುಚ್ಚಿಟ್ಟಿದ್ದರು.

ಸುಮಾರು 100 ವರ್ಷಗಳಷ್ಟು ಕಾಲ ಮೂರ್ತಿ ಅಲ್ಲಿಯೇ ಇದ್ದಿತು. ಯಾರಿಗೂ ಗೊತ್ತಾಗಿರಲಿಲ್ಲವಂತೆ. ಮೈಸೂರು ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತಾವಧಿಯಲ್ಲಿ ನಾಡಹಬ್ಬ ದಸರಾ ಆಚರಣೆಯನ್ನು ಮುಂದುವರಿಸಿದರು. ವಿಜಯನಗರದಲ್ಲಿ ನಡೆಯುತ್ತಿದ್ದ ವೈಭವಯುತ ಆಚರಣೆ ಮೈಸೂರಲ್ಲಿ ಮುಂದುವರಿಯಿತು. ಇಂದು ಅದೇ ಚಾಮುಂಡೇಶ್ವರಿಯನ್ನು ಅಂಬಾರಿಯಲ್ಲಿಟ್ಟು ಪೂಜೆ ಮಾಡಲಾಗುತ್ತದೆ ಎಂದು ವಿಭು ಅಕಾಡೆಮಿಯ ಸಂಸ್ಥಾಪಕ ನಿರ್ದೇಶಕಿ, ಸಂಸ್ಕೃತ ಮತ್ತು ಸಂಗೀತ ವಿದುಷಿ, ತರಬೇತಿ ತಜ್ಞರು, ಸಂಸ್ಕೃತಿ ಚಿಂತಕರಾದ ಡಾ ಆರತಿ ವಿ.ಬಿ ಹೇಳುತ್ತಾರೆ.

ಚಾಮುಂಡೇಶ್ವರಿ ವಿಗ್ರಹ ಮತ್ತು ಅಂಬಾರಿ ಮೈಸೂರಿಗೆ ಬಂದಿದ್ದು ವಿಜಯನಗರ ಸಾಮ್ರಾಜ್ಯದಿಂದ.ಕರ್ನಾಟಕದಲ್ಲಿ ದಸರಾ ಆಚರಣೆ ಆದಿ ವಿಜಯನಗರದಲ್ಲಾದರೆ ಅದನ್ನು ಮೈಸೂರಿನಲ್ಲಿ ಮುಂದುವರಿಸಲಾಯಿತು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *