Driving Licence: ಡಿಎಲ್ ಮಾಡಿಸುವ ಮುನ್ನ ಹುಷಾರ್! ಎಚ್ಚರ ತಪ್ಪಿದರೆ ನಷ್ಟ ಆದೀತು

Driving Licence Online Fraud:  ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ತಮ್ಮ ಸ್ವಂತ ವಾಹನದಲ್ಲಿ ಪ್ರಯಾಣಿಸಲು ಬಯಸುತ್ತಾರೆ, ಇದಕ್ಕಾಗಿ ಚಾಲನಾ ಪರವಾನಗಿ ಅಗತ್ಯವಿದೆ. ಚಾಲನಾ ಪರವಾನಗಿಗಾಗಿ ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆದರೆ ಕೆಲವು ದುರುಳರು ಇದರ ಲಾಭ ಪಡೆದು ಜನರನ್ನು ಮೋಸಗೊಳಿಸುತ್ತಿದ್ದಾರೆ. ವಾಸ್ತವವಾಗಿ,  ಚಾಲನಾ ಪರವಾನಗಿಯನ್ನು ಒದಗಿಸುವ್ ಅಧಿಕೃತ ವೆಬ್‌ಸೈಟ್ ಅನ್ನೇ ಹೋಲುವ ವೆಬ್‌ಸೈಟ್‌ಗಳು ಅಂತರ್ಜಾಲದಲ್ಲಿ ಸಕ್ರಿಯವಾಗಿವೆ. ಈ ನಕಲಿ ವೆಬ್‌ಸೈಟ್‌ಗಳು ಪರವಾನಗಿ ಮಾಡುವ ಹೆಸರಿನಲ್ಲಿ ಜನರನ್ನು ವಂಚಿಸುತ್ತವೆ.

3300 ಜನರು ಆನ್‌ಲೈನ್ ವಂಚನೆಗೆ ಬಲಿಯಾಗಿದ್ದಾರೆ:
ಕೇವಲ ಶಾಪಿಂಗ್, ಕ್ರೆಡಿಟ್ ಕಾರ್ಡ್ (Credit Card), ಡೆಬಿಟ್ ಕಾರ್ಡ್ ಮಾತ್ರವಲ್ಲದೇ ಚಾಲನಾ ಪರವಾನಗಿ ವಿಷಯದಲ್ಲೂ ಆನ್‌ಲೈನ್ ವಂಚನೆ ಪ್ರಕರಣಗಳು ಮುನ್ನಲೆಗೆ ಬಂದಿವೆ. ಗಾಜಿಯಾಬಾದ್‌ನ ರಾಜನಗರದಲ್ಲಿ ವಾಸಿಸುತ್ತಿರುವ 30 ವರ್ಷದ ಕಪಿಲ್ ತ್ಯಾಗಿ ಎಂಬ ವ್ಯಕ್ತಿ, 3300 ಜನರನ್ನು ತನ್ನ ವಂಚನೆಗೆ ಬಲಿಪಶುವಾಗಿ ಮಾಡಿದ್ದಾನೆ ಎಂದು ವರದಿಯಾಗಿದೆ. ರಸ್ತೆ ಮತ್ತು ಸಾರಿಗೆ ಸಚಿವಾಲಯವು ಅದರ ಬಗ್ಗೆ ಮಾಹಿತಿ ಪಡೆಯುವ ವೇಳೆಗೆ, ಕಪಿಲ್ ತ್ಯಾಗಿ ಸುಮಾರು 70 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಸಾರ್ವಜನಿಕರಿಂದ ವಂಚಿಸಿ  ಸಂಪಾದಿಸಿದ್ದರು ಎಂದು ತಿಳಿದುಬಂದಿದೆ.

 

ಸೈಬರ್ ಸೆಲ್‌ನಲ್ಲಿ ದೂರು ದಾಖಲಿಸಿರುವ  ಸಾರಿಗೆ ಸಚಿವಾಲಯ :
ಸಾರಿಗೆ ಸಚಿವಾಲಯದ ನಿರ್ದೇಶಕರಾದ ಪಿಯೂಷ್ ಜೈನ್ ಅವರು ದೆಹಲಿ ಪೊಲೀಸರ ವಿಶೇಷ ಸೆಲ್‌ ಸೈಬರ್ ಸೆಲ್‌ಗೆ ದೂರು ನೀಡಿದ್ದಾರೆ. ನಂತರ ತನಿಖೆಯಲ್ಲಿ ಹೆಚ್ಚಿನ ಜನರು ಗೂಗಲ್‌ನಲ್ಲಿ ಚಾಲನಾ ಪರವಾನಗಿಗಾಗಿ (Driving License) ಹುಡುಕಿದ್ದಾರೆ ಎಂದು ತಿಳಿದುಬಂದಿದೆ. E-parivahanindia.online, www.roadmax.in ಮತ್ತು Sarathiparivahan.com ಹೆಸರಿನ ವೆಬ್‌ಸೈಟ್‌ಗಳ ಲಿಂಕ್ ಸರ್ಚ್ ಇಂಜಿನ್‌ನ ಮೇಲ್ಭಾಗದಲ್ಲಿ ಬರುತ್ತಿತ್ತು, ನಿಜವಾದ ಸರ್ಕಾರಿ ವೆಬ್‌ಸೈಟ್ ಎಂದು ಭಾವಿಸಿ, ಬಲಿಪಶು ತನ್ನ ವಿವರಗಳನ್ನು ಅದರ ಮೇಲೆ ಭರ್ತಿ ಮಾಡಿ ಮತ್ತು ಹಣ ಪಾವತಿಸುತ್ತಿದ್ದರು. ಹಣ ಪಾವತಿಸಿದ ಬಳಿಕವೂ ಕೆಲಸ ಆಗದಿದ್ದಾಗ ಜನರು ಸಾರಿಗೆ ಸಚಿವಾಲಯಕ್ಕೆ ದೂರು ನೀಡಿದರು ಎಂದು ಹೇಳಲಾಗಿದೆ.

ಆನ್‌ಲೈನ್ ವಂಚಕನನ್ನು ಸೆರೆಹಿಡಿದ ಸೈಬರ್ ಸೆಲ್‌:
ಆನ್‌ಲೈನ್ ಚಾಲನಾ ಪರವಾನಗಿಗೆ ಸಂಬಂಧಿಸಿದಂತೆ ನಿರಂತರವಾಗಿ ದೂರುಗಳನ್ನು ಸ್ವೀಕರಿಸಿದ ನಂತರ, ಸೈಬರ್ ಸೆಲ್‌ನ ಡಿಸಿಪಿ ಕೆಪಿಎಸ್ ಮಲ್ಹೋತ್ರಾ ಎಸಿಪಿ ರಾಮನ್ ಮಲ್ಹೋತ್ರಾ ನೇತೃತ್ವದಲ್ಲಿ ಒಂದು ತಂಡವನ್ನು ರಚಿಸಿದರು. ಈ ತಂಡವು ಆನ್‌ಲೈನ್ ಚಾಲನಾ ಪರವಾನಗಿ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದ ಕಪಿಲ್ ತ್ಯಾಗಿ ಎಂಬಾತನನ್ನು ಸೆರೆಹಿಡಿದಿದೆ. ಪೊಲೀಸ್ ತನಿಖೆಯಲ್ಲಿ ಕಪಿಲ್ ತನ್ನ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಿದ್ದಾನೆ ಎಂದು ತಿಳಿದುಬಂದಿದೆ.

 

ಸೈಬರ್ ಸೆಲ್ ಆರೋಪಿ ಕಪಿಲ್ ನಿಂದ 10 ಚೆಕ್ ಬುಕ್, 15 ಸಿಮ್ ಕಾರ್ಡ್, 4 ಮೊಬೈಲ್ ಫೋನ್, 3 ಲ್ಯಾಪ್ ಟಾಪ್, 2 ಪೆನ್ ಡ್ರೈವ್, 2 ಹಾರ್ಡ್ ಡಿಸ್ಕ್, 15 ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಸೇರಿದಂತೆ ಸುಮಾರು ಎಂಟೂವರೆ ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *