Viral video : IPL ಪಂದ್ಯ ಮುಗಿಯುತ್ತಿದ್ದಂತೆಯೇ ಎಲ್ಲರೆದುರೇ ಯುವತಿಗೆ ಪ್ರೊಪೋಸ್ ಮಾಡಿದ ಧೋನಿ ತಂಡದ ಆಟಗಾರ
ನವದೆಹಲಿ : ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಪಂಜಾಬ್ ಕಿಂಗ್ಸ್ (PBKS) ನಡುವೆ ನಡೆದ ಐಪಿಎಲ್ ನ 53 ನೇ ಪಂದ್ಯದಲ್ಲಿ, ಪಂಜಾಬ್ ಸಿಎಸ್ ಕೆ ಅನ್ನು 6 ವಿಕೆಟ್ ಗಳಿಂದ ಸೋಲಿಸಿತು. ಆದರೆ, ಈ ಪಂದ್ಯದ ಬಳಿಕ ಎಲ್ಲರ ಗಮನ ಸೆಳೆದದ್ದು ಮಾತ್ರ ದೀಪಕ್ ಚಹಾರ್ (Deepak Chahar). ಈ ಪಂದ್ಯದ ನಂತರ ದೀಪಕ್ ಚಹಾರ್ ತನ್ನ ಗೆಳತಿಗೆ ಪ್ರೋಪೋಸ್ ಮಾಡಿದ್ದಾರೆ. ದೀಪಕ್ ಚಹಾರ್ ಪ್ರೋಪೋಸ್ ಗೆ (DeepakChaharproposal) ಈ ಯುವತಿ ಕೂಡಾ ಒಪ್ಪಿಗೆ ಸೂಚಿಸಿದ್ದು ವಿಶೇಷವಾಗಿತ್ತು.
ಪ್ರೋಪೋಸ್ ಮಾಡಿದ ದೀಪಕ್ ಚಹಾರ್ :
ದೀಪಕ್ ಚಹರ್ (Deepak Chahar) ಪಂದ್ಯದ ನಂತರ ಯುವತಿಗೆ ಪ್ರೋಪೋಸ್ ಮಾಡಿದ್ದಾರೆ. ಕೈಯಲ್ಲಿ ಉಂಗುರ ಹಿಡಿದು, ಯುವತಿ ಮುಂದೆ ಮಂಡಿಯೂರಿ ಕುಳಿತು ತನ್ನ ಮನಸ್ಸಿನ ಮಾತನ್ನು ಹೇಳಿದ್ದಾರೆ. ಈ ಕ್ಷಣವನ್ನು ಇಡೀ ಜಗತ್ತು ಲೈವ್ ವೀಕ್ಷಿಸಿದೆ. ಈ ಕ್ಷಣ ಬಹಳ ವಿಶೇಷವಾಗಿತ್ತು. ಏಕೆಂದರೆ ಈ ಅಪರಿಚಿತ ಹುಡುಗಿ ಕೂಡಾ ದೀಪಕ್ ನ ಪ್ರೋಪೋಸಲ್ ಅನ್ನು (Deepak Chahar proposal) ತಿರಸ್ಕರಿಸಲಿಲ್ಲ. ದೀಪಕ್ ಸಂಬಂಧದ ಸುದ್ದಿ ಈ ಹಿಂದೆ ಹಲವು ಬಾರಿ ಕೇಳಿ ಬಂದಿತ್ತು. ಆದರೆ ಈ ಹುಡುಗಿ ಯಾರು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ದೀಪಕ್ ಪ್ರೋಪೋಸ್ ಮಾಡಿದ ಹುಡುಗಿ ಕಪ್ಪು ಉಡುಪನ್ನು ಧರಿಸಿದ್ದಳು.
Deepak Chahar proposed to his partner after the match. Congratulations guys pic.twitter.com/OFdq33yUIv
— Kanav Bali(@Concussion__Sub) October 7, 2021
ಸಾಮಾಜಿಕ ಮಾಧ್ಯಮದಲ್ಲಿ ಇದೇ ಸುದ್ದಿ :
ದೀಪಕ್ ಚಹಾರ್ ಈ ಹುಡುಗಿಯನ್ನು ಸಾರ್ವಜನಿಕವಾಗಿ ಪ್ರೋಪೋಸ್ ಮಾಡಿದ ವೇಳೆ, ಅಲ್ಲಿ ನೆರೆದಿದ್ದ ಪ್ರತಿಯೊಬ್ಬರೂ ದೀಪಕ್ ಗೆ ಬೆಂಬಲ ಸೂಚಿಸಿದರು. ಈಗ ಸಾಮಾಜಿಕ ಜಾಲತಾಣಗಳಲ್ಲಿಯೂ (Social media) ಇದೇ ರೀತಿಯ ಬೆಂಬಲ ಕಂಡುಬಂದಿದೆ. ಜನರು ದೀಪಕ್ ಚಹರ್ ಗೆ ಅಭಿನಂದನೆಯ ಮಹಾಪೂರವೇ ಹರಿದು ಬಂದಿದೆ. ಈ ವಿಡಿಯೋ (Video) ಇದೀಗ ವೈರಲ್ ಆಗುತ್ತಿದೆ.