Drugs case:ಶಾರುಖ್ ಪುತ್ರ ಆರ್ಯನ್ ಖಾನ್ ಸೇರಿದಂತೆ 8 ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತ
ಮುಂಬೈ : ಡ್ರಗ್ಸ್ ಪಾರ್ಟಿ (Drugs party) ಪ್ರಕರಣದಲ್ಲಿ ಬಂಧಿತರಾದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ (Aryan Khan) ಸೇರಿದಂತೆ 8 ಆರೋಪಿಗಳ ಜಾಮೀನು ಅರ್ಜಿಯನ್ನು ಎನ್‌ಡಿಪಿಎಸ್ ನ್ಯಾಯಾಲಯ, ವಿಚಾರಣೆಯ ನಂತರ ತಿರಸ್ಕರಿಸಿದೆ. ನ್ಯಾಯಾಲಯದ ನಿರ್ಧಾರದ ಮುಂಚೆಯೇ, NCB ಆರ್ಯನ್ ಖಾನ್ ಅವರನ್ನು ಆರ್ಥರ್ ರೋಡ್ ಜೈಲಿಗೆ ಕರೆದೊಯ್ದಿದೆ. ಗುರುವಾರ ನ್ಯಾಯಾಲಯ ಆರ್ಯನ್ ಖಾನ್ ಸೇರಿದಂತೆ ಎಂಟು ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
‘Maintainabilityಯೇ ಸಮಸ್ಯೆಯಾಗಿದೆʼ :
ಜಾಮೀನು ಪಡೆಯುವಲ್ಲಿ Maintainabilityಯೇ ಸಮಸ್ಯೆಯಾಗಿದೆ ಎಂದು ಅರ್ಬಾಜ್ ಮರ್ಚೆಂಟ್‌ನ ವಕೀಲರು, ಹೇಳಿದ್ದಾರೆ. Maintainability ಎಂದರೆ, ಈ ನ್ಯಾಯಾಲಯಕ್ಕೆ ಜಾಮೀನು ವಿಚಾರಗಳನ್ನು ಕೇಳುವ ಹಕ್ಕಿಲ್ಲ. ಸೆಷನ್ಸ್ ನ್ಯಾಯಾಲಯಕ್ಕೆ ಮಾತ್ರ ಈ ಹಕ್ಕಿರುವುದು. ಹಾಗಾಗಿ ನಾವು ಸೆಷನ್ಸ್ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.
ವಿವಿಧ ಪ್ರಕರಣಗಳ ಉಲ್ಲೇಖ:
ಅದೇ ಸಮಯದಲ್ಲಿ, ಆರ್ಯನ್ (Aryan Khan) ಪರ ವಕೀಲ ಸತೀಶ್ ಮಾನೆ ಶಿಂಧೆ, ವಿವಿಧ ಪ್ರಕರಣಗಳನ್ನು ಉಲ್ಲೇಖಿಸಿದ್ದಾರೆ. ನಮ್ಮ ವಿರುದ್ಧ ಯಾವುದೇ ಬಲವಾದ ಸಾಕ್ಷ್ಯಾಧಾರಗಳಿಲ್ಲದಿದ್ದರೆ, ಒಂದು ನಿಮಿಷವೂ ಇಲ್ಲಿ ಉಳಿಸುವಂತಿಲ್ಲ, ಎಂದು ಹೇಳಿದರು. ಜಾಮೀನು ಪರವಾಗಿ ಮಾತನಾದಿದ ನ್ಯಾಯವಾದಿ ಶಿಂಧೆ, ರಿಯಾ ಚಕ್ರವರ್ತಿ( Rhea chakraborty) , ಸೌಬಿಕ್ ಚಕ್ರವರ್ತಿ, ಫೈಜಾನ್ ಅಹ್ಮದ್ ಪ್ರಕರಣಗಳನ್ನು ಪ್ರತಿಪಾದಿಸಿದರು. ಎಲ್ಲಾ ವಿಚಾರಣೆ ಬಳಿಕ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ.
ನ್ಯಾಯಾಂಗ ಬಂಧನದಲ್ಲಿ 8 ಆರೋಪಿಗಳು :
ಡ್ರಗ್ಸ್ ಪಾರ್ಟಿ (Drug party) ಪ್ರಕರಣದಲ್ಲಿ ಬಂಧಿಸಲಾಗಿರುವ ಆರ್ಯನ್ ಖಾನ್ ಹೊರತಾಗಿ, ಅರ್ಬಾಜ್ ಮರ್ಚೆಂಟ್, ಮುನ್ಮುನ್ ಧಮಿಚಾ, ವಿಕ್ರಾಂತ್ ಚೋಕರ್, ಮೋಹಕ್ ಜೈಸ್ವಾಲ್, ಇಸ್ಮತ್ ಸಿಂಗ್ ಛೇಡಾ, ಗೋಮಿತ್ ಚೋಪ್ರಾ ಮತ್ತು ನೂಪುರ್ ಸತಿಜಾ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಇದೀಗ ಜಾಮೀನು ಅರ್ಜಿ ತಿರಸ್ಕಾರಗೊಂಡ ಕಾರಣ, ಎಲ್ಲರನ್ನೂ ಆರ್ಥರ್ ರೋಡ್ ಜೈಲಿನಲ್ಲಿ (arthur road jail) ಇರಿಸಲಾಗುವುದು.
ಅಕ್ಟೋಬರ್ 2 ರಂದು ನಡೆದಿದ್ದ ಘಟನೆ :
.ಒಂದು ಪಾರ್ಟಿಯಲ್ಲಿ ಕೆಲವು ಜನರು ಡ್ರಗ್ಸ್ ಪೂರೈಸಬಹುದು ಮತ್ತು ಡ್ರಗ್ಸ್ ಸೇವಿಸಬಹುದು ಎಂಬ ಮಾಹಿತಿ ಮುಂಬೈ ಪೋಲಿಸ್ ನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋಗೆ (NCB) ಇತ್ತು. ಇದರ ತನಿಖೆಗೆ ಸುಮಾರು 22 NCB ಅಧಿಕಾರಿಗಳು ಪಾರ್ಟಿ ತಲುಪಿದ್ದರು. ಅನುಮಾನದ ಆಧಾರದ ಮೇಲೆ, 8 ಜನರನ್ನು ಬಂಧಿಸಲಾಯಿತು. 8 ಜನರಲ್ಲಿ ಶಾರುಖ್ ಖಾನ್ (Sharukh Khan) ಪುತ್ರ ಆರ್ಯನ್ ಖಾನ್ ಕೂಡ ಸೇರಿದ್ದರು. ಇದರ ನಂತರ, ಈ ಜನರನ್ನು ದೀರ್ಘಕಾಲ ವಿಚಾರಣೆಗೆ ಒಳಪಡಿಸಲಾಯಿತು. ವಿಚಾರಣೆಯ ಆಧಾರದ ಮೇಲೆ, ಈ ಎಲ್ಲ ಜನರನ್ನು ಒಬ್ಬೊಬ್ಬರಾಗಿ ಬಂಧಿಸಲಾಯಿತು.