ಕೇದಾರನಾಥಕ್ಕೆ ಹೋಗುವ ಮುನ್ನ ಸಿಎಂ ಭೇಟಿ ಮಾಡಿದ ಜಾರಕಿಹೊಳಿ

*  ಸಚಿವ ಸ್ಥಾನ ಮರಳಿ ಪಡೆಯಲು ಪ್ರಯತ್ನಿಸುತ್ತಿರುವ ರಮೇಶ್‌ ಜಾರಕಿಹೊಳಿ 
*  ಸಿಎಂ ಭೇಟಿಯಾಗಿ ಖುಷಿ ಖುಷಿಯಿಂದ ಹೊರ ಬಂದ ಸಾಹುಕಾರ್‌
*  ಟೆಂಪಲ್‌ ರನ್‌ಗಾಗಿಯೇ ದೆಹಲಿಗೆ ಆಗಮಿಸಿದ್ದ ಜಾರಕಿಹೊಳಿ 

ನವದೆಹಲಿ(ಅ.09):   ಸಚಿವ ಸ್ಥಾನ ಮರಳಿ ಪಡೆಯಲು ಪ್ರಯತ್ನಿಸುತ್ತಿರುವ ಗೋಕಾಕ್‌(Gokak) ಶಾಸಕ ರಮೇಶ್‌ ಜಾರಕಿಹೊಳಿ ಅವರು ಇದೀಗ ಕೇದಾರನಾಥ(Kedarnath)ಯಾತ್ರೆಗೆ ಹೊರಟಿದ್ದಾರೆ.

ಸಾಮಾನ್ಯವಾಗಿ ಕನಿಷ್ಠ 2 ವರ್ಷಕ್ಕೊಮ್ಮೆ ಕೇದಾರನಾಥಕ್ಕೆ ಹೋಗುವ ಅವರು ಶನಿವಾರ 16ನೇ ಬಾರಿಗೆ ಭೇಟಿ ನೀಡುತ್ತಿದ್ದಾರೆ. ಬಿ.ಎಸ್‌.ಯಡಿಯೂರಪ್ಪ(BS Yediyurappa) ನೇತೃತ್ವದ ಈ ಹಿಂದಿನ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ(Resign) ನೀಡಿದ ಬಳಿಕ ತಿಂಗಳಿಗೊಮ್ಮೆಯಾದರೂ ರಮೇಶ್‌ ಜಾರಕಿಹೊಳಿಯವರು(Ramesh Jarkiholi) ದೆಹಲಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಜಕೀಯ(Politics), ಸಚಿವ ಸ್ಥಾನ(Minister), ಕೋರ್ಟ್‌ ಕೆಲಸ ಹೀಗೆ ನಾನಾ ಕಾರಣಗಳಿಗೆ ದೆಹಲಿಗೆ ಎಡತಾಕುತ್ತಿದ್ದ ಜಾರಕಿಹೊಳಿ, ಈ ಬಾರಿ ದೇವರ ದರ್ಶನ ಮಾಡಲಿದ್ದಾರೆ. ಟೆಂಪಲ್‌ ರನ್‌ಗಾಗಿಯೇ(Temple Run) ದೆಹಲಿಗೆ ಆಗಮಿಸಿರುವ ಅವರು ಶುಕ್ರವಾರ ದೆಹಲಿಯಲ್ಲಿರುವ(Delhi) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು(Basavaraj Bommai) ಭೇಟಿಯಾಗಿ ಸುಮಾರು ಒಂದು ಗಂಟೆ ಮಾತುಕತೆ ನಡೆಸಿದರು.

 

ರಮೇಶ್‌ ಜಾರಕಿಹೊಳಿ ದೆಹಲಿಗೆ ಬಂದರೆ ಮಾಲ್ಚಾ ಮಾರ್ಗದಲ್ಲಿರುವ (ಕರ್ನಾಟಕ ಭವನ-2) ಬಳಿ ಇರುವ ಹನುಮಾನ್‌ ಮಂದಿರಕ್ಕೆ ಭೇಟಿ ನೀಡುತ್ತಾರೆ. ಹನುಮನಿಗೆ ಕೈ ಮುಗಿದ ಬಳಿಕ ಕರ್ನಾಟಕ ಭವನದಲ್ಲಿ(Karnataka Bhavan)  ತಿಂಡಿ ತಿನ್ನುವುದು ಅವರ ವಾಡಿಕೆ. ಸುಪ್ರೀಂ ಕೋರ್ಟ್‌ನಲ್ಲಿ(Supreme Court) ಶಾಸಕರ ಪಕ್ಷಾಂತರ ಕೇಸ್‌ ನಡೆಯುತ್ತಿದ್ದಾಗಲೂ ಅವರು ಎರಡು ಮೂರು ಬಾರಿ ವೈಷ್ಣೋ ದೇವಿಯ(Vaishno Devi) ದರ್ಶನ ಕೂಡ ಪಡೆದಿದ್ದರು. ಇನ್ನು ಕೇದಾರನಾಥ, ಬದರಿನಾಥ(Badrinath) ಭೇಟಿಯೂ ಅಷ್ಟೆ. ಅಧಿಕಾರ ಇರಲಿ ಇಲ್ಲದಿರಲಿ ಎರಡು ವರ್ಷಕ್ಕೊಮ್ಮೆ ಕೇದಾರನಾಥನ ದರ್ಶನ ಪಡೆದೇ ತಿರುತ್ತಾರೆ. ಈಗಾಗಲೇ 15 ಬಾರಿ ಕೇದಾರನಾಥ, ಬದರಿನಾಥಕ್ಕೆ ಅವರು ಭೇಟಿ ನೀಡುತ್ತಿದ್ದಾರೆ.

ಸಿಎಂ ಭೇಟಿಯಾಗಿ ಖುಷಿ ಖುಷಿಯಿಂದ ಹೊರ ಬಂದ ರಮೇಶ್‌ ಜಾರಕಿಹೊಳಿ, ನಾನೇನು ಕೇಳುವುದಿಲ್ಲ. ಅವರು ಏನು ಮಾಡುತ್ತಾರೋ ಮಾಡಲಿ ಎಂದರು. ಸಮಾಧಾನಕ್ಕಾಗಿ ನಾನು ಕೇದಾರನಾಥನ ದರ್ಶನಕ್ಕೆ ಹೊರಟಿದ್ದೇನೆ ಎಂದು ತಿಳಿಸಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *