ಕನ್ನಡದ ಹಿರಿಯ ನಟ ಸತ್ಯಜೀತ್ ಇನ್ನಿಲ್ಲ

600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಸತ್ಯಜೀತ್ (Sathyajith) ಅಕ್ಟೋಬರ್ 9, 2021ರಂದು ಇಹಲೋಕ ತ್ಯಜಿಸಿದ್ದಾರೆ. ಹಲವು ದಿನಗಳಿಂದ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಗ್ಯಾಂಗ್ರಿನ್ (Gangrene) ಮತ್ತು ಹಾರ್ಟ್‌ ಸ್ಟ್ರೋಕ್‌ಗೆಂದು (Heart stroke) ಚಿಕಿತ್ಸೆ ಪಡೆಯುತ್ತಿದ್ದರು.

ನಾಲ್ಕು ವರ್ಷಗಳ ಹಿಂದೆ ಸತ್ಯಜೀತ್‌ ಅವರಿಗೆ ಗ್ಯಾಂಗ್ರಿನ್ ಆಗಿ ಒಂದು ಕಾಲು ಕಳೆದುಕೊಂಡಿದ್ದರು. ಇದಾದ ನಂತರ ಅವರು ಆರೋಗ್ಯ ಸಂಪೂರ್ಣ ಹದಗೆಟ್ಟಿದ ಕಾರಣ ಹಾಸಿಗೆ ಹಿಡಿದರು. ಒಂದು ವಾರದ ಹಿಂದೆ ಹಾರ್ಟ್‌ ಸ್ಟ್ರೋಕ್ ಆಗಿ, ಬೌರಿಂಗ್ ಆಸ್ಪತ್ರೆಯಲ್ಲಿ (Bowring Hospital) ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಸ್ಥಿತಿ ತುಂಬಾನೇ ಗಂಭೀರವಾಗಿತ್ತು. ಅದರೆ ವಿಧಿಯ ಆಟವೇ ಬೇರೆ ಆಗಿದ್ದು. ಹಿರಿಯ ನಟ ಇನ್ನಿಲ್ಲ ಎಂದು ತಿಳಿದು ಕನ್ನಡ ಚಿತ್ರರಂಗ (Sandalwood) ಕಂಬನಿ ಮಿಡಿದಿದೆ.

ಸತ್ಯಜೀತ್ ಅವರ ಮೂಲಕ ಹೆಸರು ಸೈಯದ್ ನಿಜಾಮುದ್ದೀನ್. ಸತ್ಯಜೀತ್ ಅವರ ಪತ್ನಿ ಸೋಫಿಯಾ ಬೇಗಮ್ (Sophia Begum). ಇವರಿಗೆ ಮೂವರು ಮಕ್ಕಳಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟ, ವಿಲನ್ ಹಾಗೂ ಪೋಷಕ ಕಲಾವಿದನ ಪಾತ್ರಗಳಲ್ಲಿ ಮಿಂಚುವ ಮೂಲಕ ಉತ್ತರ ಕರ್ನಾಟಕದ (North Karnataka) ಕೀರ್ತಿ ಪತಾಕೆ ಹಾರಿಸಿದ್ದರು. ಸತ್ಯಜೀತ್ ಓದಿದ್ದು 10ನೇ ಕ್ಲಾಸ್, ಸಂಪೂರ್ಣ ಆಸಕ್ತಿ ಬಣ್ಣದ ಲೋಕದ ಮೇಲಿತ್ತು. ಒಂದು ಕಾಲದಲ್ಲಿ ಲಕ್ಷ ಲಕ್ಷ ಸಂಭಾವನೆ ಪಡೆಯುತ್ತಿದ್ದ ಬಹು ಬೇಡಿಕೆಯ ಕಲಾವಿದರಾಗಿ ಗುರುತಿಸಿಕೊಂಡಿದ್ದರು.

1986ರ ಅರುಣ ರಾಗ (Aruna Raga), ನ್ಯಾಯಕ್ಕೆ ಶಿಕ್ಷೆ, ಮಿಸ್ಟರ್ ರಾಜ (Mr Raja) ಸೇರಿದಂತೆ 600 ಚಿತ್ರಗಳಲ್ಲಿ ನಟಿಸಿದ್ದಾರೆ.  ಆದರೆ ಒಂದು ಸಮಯದಲ್ಲಿ ಆರೋಗ್ಯ ಹದಗೆಟ್ಟಿದ ಕಾರಣ ಆರ್ಥಿಕವಾಗಿ ಸಂಕಷ್ಟದಲ್ಲಿ ಸಿಲುಕಿಕೊಂಡರು. ಗ್ಯಾಂಗ್ರಿನ್‌ನಿಂದ ಎಡಗಾಲನ್ನು ಕಳೆದುಕೊಂಡರು. ಕೊನೇ ಕ್ಷಣದವರೆಗೂ ನಟಿಸಬೇಕೆನ್ನುವ ಆಸೆ ಹೊತ್ತಿದ್ದ ಸತ್ಯಜೀತ್ ಕೃತಕ ಕಾಲನ್ನೇ ಜೋಡಿಸಿಕೊಂಡು ಮತ್ತೆ ಇಂಡಸ್ಟ್ರೀಯಲ್ಲಿ ಮಿಂಚುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರ.  ಈ ಹಿಂದೆ ಆಪರೇಷನ್‌ಗಳಿಗೆಂದು ನಟ ಶಿವರಾಜ್‌ಕುಮಾರ್ (Shivarajkumar), ಉಪೇಂದ್ರ (Upendra), ಪುನೀತ್ ರಾಜ್‌ಕುಮಾರ್ (Puneeth Rajkumar) ಸೇರಿದಂತೆ ಹಲವು ನಟರು ಅರ್ಥಿಕ ಸಹಾಯ ಮಾಡಿದ್ದರು. ಕರ್ನಾಟಕ ಸರ್ಕಾರವೂ ಸುಮಾರು 4 ಲಕ್ಷ ರೂ.ನಷ್ಟು ದನ ಸಹಾಯ ಮಾಡಿತ್ತು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *