ಬೆಳಗಾವಿಯಲ್ಲಿ ಯುವಕನನ್ನೇ ರೇಪ್ ಮಾಡಿದ ಕಾಮಾಂಧ!

ಬೆಳಗಾವಿ: ಡ್ರಾಪ್ ಕೊಡುವುದಾಗಿ 24 ವರ್ಷದ ಯುವಕನನ್ನ ಬೈಕ್ ನಲ್ಲಿ ಕರೆದೊಯ್ದ ವ್ಯಕ್ತಿಯೋರ್ವ ನಿರ್ಜನ ಪ್ರದೇಶದಲ್ಲಿ ಆತನ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಅಥಣಿ ತಾಲೂಕಿನಲ್ಲಿ ಅಕ್ಟೋಬರ್ 5 ರಂದು 24 ವರ್ಷದ ಯುವಕನ ಮೇಲೆ ಮತ್ತೊಬ್ಬ ವ್ಯಕ್ತಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಪೊಲೀಸರಿಗೆ ಮಾಹಿತಿ ನೀಡಿದರೆ ಕೊಲೆ ಮಾಡುವುದಾಗಿ ಆರೋಪಿ ಬೆದರಿಕೆ ಹಾಕಿದ್ದರಿಂದ ಘಟನೆ ತಡವಾಗಿ ಬಹಿರಂಗವಾಗಿದೆ. ಪ್ರಕರಣ ದಾಖಲಿಸಿದ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಪೊಲೀಸರ ಪ್ರಕಾರ, ಸಂತ್ರಸ್ತ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ ನಿವಾಸಿ, ಕಳೆದ ಎರಡು ವರ್ಷಗಳಿಂದ ಘಟ್ಟನಟ್ಟಿ ಗ್ರಾಮದಲ್ಲಿರುವ ತನ್ನ ಸಹೋದರಿಯ ಮನೆಯಲ್ಲಿ ಉಳಿದುಕೊಂಡಿದ್ದನು. ಅಥಣಿ ಬಸ್ ನಿಲ್ದಾಣದ ಬಳಿಯ ಹೋಟೆಲ್‌ನಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದನು.

ಅಕ್ಟೋಬರ್ 5ರಂದು ನಾನು ಅಥಣಿ ಬಸ್ ನಿಲ್ದಾಣದಲ್ಲಿ ಮನೆಗೆ ಹೋಗಲು ಖಾಸಗಿ ಪ್ರಯಾಣಿಕರ ವಾಹನಗಳಿಗಾಗಿ ಕಾಯುತ್ತಿದ್ದಾಗ, ಸಂಕೋನಟ್ಟಿ ಗ್ರಾಮದ ನಿವಾಸಿ ರಾಜು ಆಚರಟ್ಟಿ ಬೈಕ್ ನಲ್ಲಿ ಬಂದು ನನ್ನ ತಂಗಿ ಕೂಡಲೇ ಕರೆದುಕೊಂಡು ಬರುವಂತೆ ಹೇಳಿದ್ದಾಗಿ ಹೇಳಿ ನನ್ನನ್ನು ಮನಗೆ ಬಿಡಲು ಕರೆದುಕೊಂಡು ಹೋದನು.

ಮನೆಗೆ ಹೋಗುವ ಬದಲು ಆತ ನನ್ನನ್ನು ಕುದರ್ಯಗೋಳ್ ಹಳ್ಳಿಯ ಬಳಿ ಇರುವ ಏಕಾಂತ ಸ್ಥಳಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ ಎಂದು ಸಂತ್ರಸ್ತ ಯುವಕ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾನೆ.

ಏತನ್ಮಧ್ಯೆ, ಆರೋಪಿ ರವಿ ತನ್ನ ಕೆನ್ನೆಯನ್ನು ಕಚ್ಚಿ ದೇಹದ ಮೇಲೆ ಗಾಯಗಳನ್ನು ಮಾಡಿರುವುದಾಗಿ ಆರೋಪಿಸಿದ್ದಾನೆ. ದೂರು ಸ್ವೀಕರಿಸಿದ ನಂತರ ಅಥಣಿ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಆರೋಪಿ ರಾಜು ಆಚರಟ್ಟಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *