ಸ್ವಿಸ್‌ ಬ್ಯಾಂಕಿಂದ ಬಂತು 3ನೇ ಕಂತಿನ ಕಾಳಧನಿಕರ ಮಾಹಿತಿ!

* ಎನ್ನಾರೈ ಉದ್ಯಮಿಗಳ ಕುರಿತು ಸಂಪೂರ್ಣ ವಿವರ?

* ಸ್ವಿಸ್‌ ಬ್ಯಾಂಕಿಂದ ಬಂತು 3ನೇಕಂತಿನ ಕಾಳಧನಿಕರ ಮಾಹಿತಿ

ಬರ್ನ್‌(ಅ.12): ಕಾಳಧನಿಕರ ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರಕ್ಕೆ ಈಗ ಮಾಹಿತಿಯ ಮಹಾಪೂರವೇ ಹರಿದುಬರತೊಡಗಿದೆ. ಕಪ್ಪು ಕುಳಗಳ ಸ್ವರ್ಗ ಎನಿಸಿರುವ ಸ್ವಿಸ್‌ ಬ್ಯಾಂಕುಗಳಿಂದ(Swiss Bank) ಕೇಂದ್ರ ಸರ್ಕಾರಕ್ಕೆ 3ನೇ ಕಂತಿನ ಮಾಹಿತಿ ದೊರೆತಿದೆ. ಇದರಲ್ಲಿ ಭಾರತದ(India) ಯಾರೆಲ್ಲರ ಹೆಸರಿದೆ ಎಂಬುದು ಬಹಿರಂಗವಾಗಿಲ್ಲ. ಉನ್ನತ ಮೂಲಗಳ ಪ್ರಕಾರ, ಈ ಬಾರಿಯ ಮಾಹಿತಿ ಬಹುತೇಕ ಉದ್ಯಮಿಗಳಿಗೆ(Businessman) ಸಂಬಂಧಿಸಿದ್ದಾಗಿದೆ.

ಹೊಸ ಪಟ್ಟಿಯಲ್ಲಿ ಆಗ್ನೇಯ ಏಷ್ಯಾ ದೇಶಗಳು, ಅಮೆರಿಕ(USA), ಬ್ರಿಟನ್‌(Britain) ಹಾಗೂ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾ(South America) ಖಂಡದ ದೇಶಗಳ ಅನಿವಾಸಿ ಭಾರತೀಯ(NRI) ಉದ್ಯಮಿಗಳ ಹೆಸರು ಇದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

ಕಾಳಧನಿಕರ ಕುರಿತ ಮಾಹಿತಿಯ ಸ್ವಯಂಚಾಲಿತ ವರ್ಗಾವಣೆಗೆ ಕೇಂದ್ರ ಸರ್ಕಾರ ಸ್ವಿಸ್‌ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ಕಳೆದ ಮೂರು ವರ್ಷಗಳಿಂದ ಕೇಂದ್ರ ಸರ್ಕಾರಕ್ಕೆ ಸ್ವಿಸ್‌ನಿಂದ ಮಾಹಿತಿ ಲಭ್ಯವಾಗುತ್ತಿದೆ. 3ನೇ ಕಂತಿನಲ್ಲಿ 96 ದೇಶಗಳಿಗೆ ಸಂಬಂಧಿಸಿದ 33 ಲಕ್ಷ ಹಣಕಾಸು ಖಾತೆಗಳ ಕುರಿತ ಮಾಹಿತಿಯನ್ನು ಆಯಾ ದೇಶಗಳಿಗೆ ಸ್ವಿಸ್‌ ಬ್ಯಾಂಕ್‌ ಒದಗಿಸಿದೆ.

ಸ್ವಿಸ್‌ ಬ್ಯಾಂಕ್‌ ಒದಗಿಸಿರುವ ಮಾಹಿತಿಯನ್ನು ಆಧರಿಸಿ ಕಪ್ಪುಕುಳಗಳ ವಿರುದ್ಧ ತನಿಖೆಯನ್ನು ಕೇಂದ್ರ ಸರ್ಕಾರ ಆರಂಭಿಸಬಹುದು. ಸ್ವಿಸ್‌ ಬ್ಯಾಂಕಿನಲ್ಲಿ ಯಾವ ವ್ಯಕ್ತಿಯ ಖಾತೆ ಇದೆ, ಅದಕ್ಕೆ ಎಷ್ಟುಹಣ ವರ್ಗಾವಣೆಯಾಗಿದೆ ಎಂಬೆಲ್ಲಾ ಮಾಹಿತಿಯು ಸರ್ಕಾರಕ್ಕೆ ಲಭ್ಯವಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.

 

 ಸ್ವಿಸ್‌ ಬ್ಯಾಂಕಲ್ಲಿ ಭಾರತೀಯರ ಠೇವಣಿ ಹೆಚ್ಚಾಗಿಲ್ಲ, ಕುಸಿದಿದೆ: ಕೇಂದ್ರ

 

ಸ್ವಿಸ್‌ ಬ್ಯಾಂಕುಗಳಲ್ಲಿ 2019ರಿಂದ ಈಚೆಗೆ ಭಾರತೀಯರ ಠೇವಣಿ ಭಾರಿ ಪ್ರಮಾಣದಲ್ಲಿ ಹೆಚ್ಚಿದ್ದು, ಅದರ ಮೊತ್ತ 20,700 ಕೋಟಿ ರು.ಗೆ ತಲುಪಿದೆ. ಇದು ಕಳೆದ 13 ವರ್ಷಗಳಲ್ಲೇ ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರು ಇರಿಸಿದ್ದ ಗರಿಷ್ಠ ಠೇವಣಿಯಾಗಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ವಿತ್ತ ಸಚಿವಾಲಯ, ‘ವರದಿಗಳಲ್ಲಿ ಹೇಳಲಾದ ಅಂಕಿ ಅಂಶಗಳಲ್ಲಿ ಸ್ವಿಸ್‌ ಬ್ಯಾಂಕುಗಳಲ್ಲಿ ಭಾರತೀಯರು ಇರಿಸಿರುವ ಕಪ್ಪು ಹಣದ ಪ್ರಮಾಣ ಜಾಸ್ತಿಯಾಗಿದೆ ಎಂಬ ಅಂಶ ಎಲ್ಲೂ ಇಲ್ಲ. ಮೇಲಾಗಿ, ಈ ಅಂಕಿ ಅಂಶಗಳಲ್ಲಿ ಸ್ವಿಸ್‌ ಬ್ಯಾಂಕುಗಳಲ್ಲಿ ಭಾರತೀಯರು, ಎನ್‌ಆರ್‌ಐಗಳು ಹಾಗೂ ಇತರರು ಮೂರನೇ ದೇಶದ ಸಂಸ್ಥೆಗಳ ಮೂಲಕ ಇರಿಸಿರಬಹುದಾದ ಹಣದ ಮೊತ್ತದ ಉಲ್ಲೇಖವೂ ಇಲ್ಲ.

2019ರ ನಂತರ ಸ್ವಿಸ್‌ ಬ್ಯಾಂಕುಗಳಲ್ಲಿ ಭಾರತೀಯ ಗ್ರಾಹಕರ ಠೇವಣಿ ಪ್ರಮಾಣ ಕಡಿಮೆಯಾಗಿದೆ. ಬೇರೆ ಬೇರೆ ಹೂಡಿಕೆ ವಿಧಾನಗಳ ಮೂಲಕ ಇರಿಸಿರುವ ಹಣದ ಮೊತ್ತವೂ ಕಡಿಮೆಯಾಗಿದೆ. ಏರಿಕೆಯಾಗಿರುವುದು ಗ್ರಾಹಕರಿಂದ ಬ್ಯಾಂಕಿಗೆ ಬರಬೇಕಾದ ಬಾಂಡ್‌, ಷೇರು ಇತ್ಯಾದಿ ಇನ್ನಿತರ ಹಣಕಾಸು ಹೂಡಿಕೆಗಳ ಹಣವಾಗಿದೆ’ ಎಂದು ಸ್ಪಷ್ಟನೆ ನೀಡಿತ್ತು

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *