Mysuru: ದಸರಾ ಸಂಭ್ರಮದಲ್ಲಿ ಧ್ವಂಸಗೊಂಡ ೧೦ನೇ ಜಯಚಾಮರಾಜ ಒಡೆಯರ್ ಕತ್ತಿ
ಮುಂದಿನ ದಿನಗಳಲ್ಲಿ ಸಿಎಂ ಮೈಸೂರಿಗೆ ಬಂದು ಪ್ರವಾಸೋದ್ಯಮವನ್ನ ಇನ್ನಷ್ಟು ಅಭಿವೃದ್ಧಿ ಪಡಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚೆರ್ಚಿಸಿ ದಸರಾ ಪ್ರಾಧಿಕಾರ ರಚನೆಯನ್ನ ಮಾಡವುದಾಗಿ ಭರವಸೆ ನೀಡಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara)ಯಶಸ್ವಿಯಾಗಿ ಸಂಪನ್ನಗೊಂಡಿದೆ. ದಸರಾ ಗಜಪಡೆಗಳು ಅರಮನೆಯ ಅಂಗಳದಲ್ಲಿ ರಿಲ್ಯಾಕ್ಸ್ ಮೂಡ್ ನಲ್ಲಿವೆ. ಅರಮನೆಯ ಆವರಣದಲ್ಲಿಯ ಜಂಬೂ ಸವಾರಿ(Jambu Savari) ವೀಕ್ಷಣೆ ನೋಡುವ ಬರದಲ್ಲಿ 10ನೇ ಜಯಚಾಮರಾಜೇಂದ್ರ ಒಡೆಯರ್(Jaya Chamaraja Wodeyar) ಅವರ ಅಮೃತ ಶಿಲೆಯ ಕತ್ತಿಯನ್ನೆ ಸಾರ್ವಜನಿಕರು ಧ್ವಂಸಗೊಳಿಸಿದ್ದಾರೆ. ಈ ಮಧ್ಯ ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲಾಡಳಿತ ವತಿಯಿಂದ ಸನ್ಮಾನ ಮಾಡಿ ಗೌರವಿಸಲಾಯಿತು. 2021ರ ದಸರಾಗೆ ಸರಳ ಮತ್ತು ಸಾಂಪ್ರದಾಯಕವಾಗಿ ಗುಡ್ ಬೈ ಹೇಳಲಾಗಿದೆ.
ಹೌದು, ಕರೊನಾ ಕಾರಣದಿಂದ ಈ ಬಾರಿಯೂ ಸಹ ವಿಶ್ವ ವಿಖ್ಯಾತ ಮೈಸೂರು ದಸರಾವನ್ನ ಸರಳ ಹಾಗೂ ಸಂಪ್ರದಾಯಕವಾಗಿ ನಡೆಸಲಾಯಿತು. ಎರಡನೇ ಬಾರಿಗೆ ಅಂಬಾರಿ ಹೊತ್ತ ಅಭಿಮನ್ಯು ಯಶಸ್ವಿಯಾಗಿ ಜಂಬೂ ಸವಾರಿಯನ್ನ ಮಾಡಿ ಮುಗಿಸಿ ರಾಜ ಗಾಂಭಿರ್ಯದಿಂದ ಬೀಗುತ್ತಿದ್ದಾನೆ. ಅಭಿಮನ್ಯುಗೆ, ಗೋಪಾಲಸ್ವಾಮಿ, ಕಾವೇರಿ, ಚೈತ್ರ, ಧನಂಜಯ ಹಾಗೂ ಅಶ್ವಥಾಮ ಆನೆಗಳು ಸಾಥ್ ನೀಡಿ ಸಂತೋಷವಾಗಿವೆ. ಇದೀಗ ಜಂಬೂ ಸವಾರಿ ಮುಗಿಸಿದ ನಂತರ ಗಜ ಪಡೆಗಳು ಅರಮನೆ ಅಂಗಳದಲ್ಲಿ
ಇವತ್ತು ರಿಲ್ಯಾಕ್ಸ್ ಮೂಡ್ ನಲ್ಲಿ ಆಯಾಗಿವೆ. ಇಂದು ಬೆಳಗ್ಗೆ ದಸರಾ ಗಜಪಡೆಗಳಿಗೆ ಸ್ನಾನ ಮಾಡಿಸಿ ಪೌಷ್ಟಿಕಾಹಾರ ನೀಡಲಾಯಿತು. ಈ ಮೂಲಕ ಆನೆಗಳು ಇವತ್ತು ಸಂಪೂರ್ಣವಾಗಿ ರಿಲ್ಯಾಕ್ಸ್ ಮೂಡಲಿದ್ವು. ಈ ಬಾರಿ ದಸರಾ ಜಂಬೂ ಸವಾರಿ ಯಶಸ್ವಿಯಾಗಿ ಮುಗಿದಿದ್ದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಮೈಸೂರಿನ ಜನತೆಗೆ ಧನ್ಯವಾದ ತಿಳಿಸಿದ್ರು.
ಇನ್ನೂ ನಿನ್ನೆ ದಸರಾ ವೀಕ್ಷಣೆಗೆ ಅರಮನೆ ಹೊರಭಾಗದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಅರಮನೆ ಮುಂಭಾಗ ಜಮಾಯಿಸಿದ್ರು. ಈ ವೇಳೆಯಲ್ಲಿ ಒಂದು ಅಚಾತುರ್ಯ ನಡೆದುಗೋಗಿದೆ. ಕೋಟೆ ಅಂಜನೇಯಸ್ವಾಮಿ ವೃತ್ತದ ಬಳಿಯಿರುವ 10ನೇ ಜಯಚಾಮರಾಜೇಂದ್ರ ಒಡೆಯರ್ ಅವರ ಅಮೃತ ಶಿಲೆ ಪ್ರತಿಮೆಗೆ ಹಾನಿ ಮಾಡಿದ್ದಾರೆ.
ಜಂಬೂ ಸವಾರಿಯನ್ನ ಕಣ್ತುಂಬಿಕೊಳ್ಳುವ ಬರದಲ್ಲಿ ಪ್ರತಿಮೆಯಲ್ಲಿದ್ದ ಕತ್ತಿಗೆ ಹಾನಿಯಾಗಿದ್ದು ಮುರಿದು ಹಾಕಿದ್ದಾರೆ. ಈ ಮೂಲಕ ೧೦ ನೇ ಜಯಚಾಮರಾಜೇಂದ್ರ ಒಡೆಯರ್ ಅವರ ಕತ್ತಿ ಎರಡನೇ ಬಾರಿ ಬಿದ್ದಿದೆ. ಇದೇ ವೇಳೆ ಪ್ರತಿಮೆಯ ಅಕ್ಕ ಪಕ್ಕದಲ್ಲಿದ್ದ ಅಲಂಕಾರಕ್ಕಾಗಿ ಇಡಲಾಗಿದ್ದ ಹೂವಿನಗಿಡಗಳನ್ನ ಸಹ ಧ್ವಂಸ ಮಾಡಲಾಗಿದೆ. ಇನ್ನೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ದಸರಾ ಯಶಸ್ವಿಯಾಗಿದ್ದಕ್ಕೆ ಸಂತಸ ವ್ಯಕ್ತ ಪಡಿಸಿದರು.
ಮುಂದಿನ ದಿನಗಳಲ್ಲಿ ಸಿಎಂ ಮೈಸೂರಿಗೆ ಬಂದು ಪ್ರವಾಸೋದ್ಯಮವನ್ನ ಇನ್ನಷ್ಟು ಅಭಿವೃದ್ಧಿ ಪಡಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚೆರ್ಚಿಸಿ ದಸರಾ ಪ್ರಾಧಿಕಾರ ರಚನೆಯನ್ನ ಮಾಡವುದಾಗಿ ಭರವಸೆ ನೀಡಿದ್ದಾರೆ. ಇದೇ ವೇಳೆ ಮೈಸೂರು ಜಿಲ್ಲಾಡಳಿತದ ವತಿಯಿಂದ ದಸರಾ ಯಶಸ್ವಿಗೆ ಕಾರಣರಾದ ಜಿಲ್ಲಾ ಉಸ್ತುವಾರಿ ಸಚಿವರನ್ನ ಸನ್ಮಾಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಒಟ್ಟಾರೆ, 2021ರ ದಸರಾ ಕರೊನಾ ಕಾರಣದಿಂದ ಸರಳ ಹಾಗೂ ಸಂಪ್ರದಾಯಕವಾಗಿ ಮುಕ್ತಯಗೊಂಡಿದೆ. ಮುಂದಿನ ವರ್ಷ ದಸರಾ ಹಬ್ಬವನ್ನ ಅದ್ದೂರಿಯಾಗಿ ಅಚರಿಸುವುದಾಗಿ ಸಿಎಂ ಭರವಸೆ ನೀಡಿರುವುದು ಸಾಂಸ್ಕೃತಿಕ ನಗರಿ ಜನರಲ್ಲಿ ಸಂತಸ ತರಿಸಿದೆ.