Happy Birthday Chiranjeevi Sarja: ಚಿರಂಜೀವಿ ಸರ್ಜಾ ಹುಟ್ಟುಹಬ್ಬಕ್ಕೆ ಪತ್ನಿ, ಮಗು ಕಡೆಯಿಂದ ಸ್ಪೆಷಲ್ ಗಿಫ್ಟ್
ನಟ ಚಿರಂಜೀವಿ ಸರ್ಜಾ(Chiranjeevi Sarja) ಅವರ ಅಭಿಮಾನಿಗಳ ಪಾಲಿಗೆ ಈ ದಿನ ನಿಜಕ್ಕೂ ವಿಶೇಷ. ಕನ್ನಡ ಚಿತ್ರರಂಗದ ನಟ ಚಿರಂಜೀವಿ ಸರ್ಜಾ ನಮ್ಮೊಂದಿಗೆ ಇದ್ದಿದ್ದರೆ ಇಂದು ಸಂಭ್ರಮ ಕಳೆಕಟ್ಟುತ್ತಿತ್ತು. ಕನ್ನಡ ಚಿತ್ರರಂಗದ ‘ವಾಯುಪುತ್ರ’ನಿಗೆ ಇಂದು ಜನ್ಮದಿನ(Birthday). ಇಂದು ಅವರು ನಮ್ಮೊಂದಿಗೆ ಇದ್ದಿದ್ದರು ರಾತ್ರಿಯೇ ಮನೆ ಬಳಿ ಅಭಿಮಾನಿಗಳು ಆಗಮಿಸಿ, ಅವರನ್ನ ಭೇಟಿಯಾಗುತ್ತಿದ್ದರು. ಹಬ್ಬದ ರೀತಿಯಲ್ಲಿ ಅವರ ಜನ್ಮದಿನವನ್ನು ಆಚರಿಸಿ, ಕೇಕ್(Cake) ಕತ್ತರಿಸಿ ಸಂಭ್ರಮಿಸುತ್ತಿದ್ದರು. ಆದರೆ ಚಿರಂಜೀವಿ ಸರ್ಜಾ ಇಂದು ನಮ್ಮೊಂದಿಗೆ ಇಲ್ಲ. ಅವರು ನಮ್ಮನೆಲ್ಲ ಬಿಟ್ಟು ಒಂದು ವರ್ಷ ನಾಲ್ಕು ತಿಂಗಳು ಕಳೆದು ಹೋಗಿದೆ.
ಕಳೆದ ಬಾರಿಯ ಚಿರು ಹುಟ್ಟುಹಬ್ಬವನ್ನು ಅಭಿಮಾನಿಗಳು, ನೆಚ್ಚಿನ ನಟ ಅಗಲಿದೆ ನೋವಿನಲ್ಲೇ ಹುಟ್ಟುಹಬ್ಬ ಆಚರಿಸಿದ್ದರು. ಈ ಬಾರಿಯೂ ಚಿರು ಅವರನ್ನ ಅಭಿಮಾನಿಗಳು ಸಖತ್ ಮಿಸ್ (Miss)ಮಾಡಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಚಿತ್ರರಂಗದ ನಟ, ನಟಿಯರು ಸ್ನೇಹಿತರು, ಅಭಿಮಾನಿಗಳು, ಕುಟುಂಬದವರು ಶುಭಾಶಯ(Wishes) ಕೋರುತ್ತಿದ್ದಾರೆ. ಚಿರು ಬದುಕಿದ್ದಾಗ ಅವರ ಜೊತೆ ಕಳೆದ ಕ್ಷಣಗಳನ್ನ ನೆನಪಿಸಿಕೊಳ್ಳುತ್ತಿದ್ದಾರೆ.
ಇಂದು ಸೆಟ್ಟೇರಲಿದೆ ಮೇಘನಾ ರಾಜ್ ಹೊಸ ಸಿನಿಮಾ
ಚಿರು ಅಕಾಲಿಕ ನಿಧನ ಚಿತ್ರರಂಗಕ್ಕೆ ದೊಡ್ಡ ಆಘಾತ. ಚಿರು ನಿಧನದ ಬಳಿಕ ಮೇಘನಾ ರಾಜ್ ನಟನೆಯಿಂದ ಹಿಂದೆ ಸರಿದಿದ್ದರು. ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ ಪತಿ ಚಿರಂಜೀವಿ ಸರ್ಜಾ ಹುಟ್ಟುಹಬ್ಬದಂದೇ ನಟನೆಗೆ ಮೇಘನಾ ರಾಜ್ ಕಂಬ್ಯಾಕ್ ಮಾಡುತ್ತಿದ್ದಾರೆ. ಮೇಘನಾ ರಾಜ್ ಈಗ ಹೊಸ ಸಿನಿಮಾ ಒಪ್ಪಿಕೊಂಡಿದ್ದು,ಆ ಚಿತ್ರ ಇಂದು ಚಿರು ಹುಟ್ಟುಹಬ್ಬದ ಪ್ರಯುಕ್ತ ಸೆಟ್ಟೇರುತ್ತಿದೆ. ಚಿರು ಆಪ್ತ ಸ್ನೇಹಿತ ಪನ್ನಗ ಭರಣ, ಚಿರು ಜೊತೆ ಸಿನಿಮಾ ಮಾಡುವ ಆಸೆಯನ್ನ ಹೊಂದಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಆದರೆ ತಮ್ಮ ಆಸೆಯನ್ನ ಪನ್ನಗ ಮೇಘನಾ ರಾಜ್ ಜೊತೆ ಸಿನಿಮಾ ಮಾಡಿ ತೀರಿಸಿಕೊಳ್ಳುತ್ತಿದ್ದಾರೆ. ಮೇಘನಾ ರಾಜ್ ಕಂಬ್ಯಾಕ್ ಸಿನಿಮಾಗೆ ಪನ್ನಗ ಭರಣ ಹಣ ಹೂಡುತ್ತಿದ್ದಾರೆ. ಇನ್ನೂ ಹೊಸ ಪ್ರತಿಭೆ ವಿಶಾಲ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.
ಚಿರು ಪೇಂಟಿಂಗ್ ಜತೆ ಮೇಘನಾ ಫೋಟೋ ಶೂಟ್
ಇನ್ನೂ ಪತಿಯ ನೆನಪಿಗಾಗಿ ಮೇಘನಾ ರಾಜ್ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ. ರಾಜ, ರಾಣಿ ಥೀಮ್ನೊಂದಿಗೆ ತೆಗೆಸಿರುವ ಫೋಟೋಗಳು ವೈರಲ್ ಆಗುತ್ತಿವೆ. ರಾಜನ ಅವತಾರದಲ್ಲಿ ಚಿರಂಜೀವಿ ಪೇಂಟಿಂಗ್ ಮಾಡಲಾಗಿದೆ. ಬಳಿಕ ಚಿರು ಪೇಂಟಿಂಗ್ ಜತೆ ಮೇಘನಾ ರಾಣಿ ಅವತಾರದಲ್ಲಿ ನಿಂತು ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನ ಮೇಘನಾ ರಾಜ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನೂ ಚಿರು ಮಗ ರಾಯನ್ ರಾಯ್ ಕೂಡ ಅಪ್ಪನಿಗೆ ವಿಶ್ ಮಾಡಿರುವ ಬಿಡುಗಡೆಯಾಗಲಿದ್ಯಂತೆ. ಮೊನೆಯಷ್ಟೇ ರಾಯನ್ ರಾಯ್ ಹಬ್ಬದ ಹಿನ್ನೆಲೆ ಬೊಂಬೆಗಳ ಕೂತ ಪೋಟೋವೊಂದು ಸಖತ್ ವೈರಲ್ ಆಗಿತ್ತು. ಚಿರು ಸಹೋದರ ಧ್ರುವ ಸರ್ಜಾ ಹಾಗೂ ಕುಟುಂಬಸ್ಥರು ಚಿರು ಸಮಾಧಿಗೆ ಇರುವ ಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ಇಂದು ಚಿರು ಹುಟ್ಟಹಬ್ಬ ಹಿನ್ನೆಲೆ, ಅವರ ಅಭಿಮಾನಿಗಳು ಕೂಡ ಚಿರು ಸಮಾಧಿಗೆ ಬಳಿ ಆಗಮಿಸಲಿದ್ದಾರೆ. ಬೇರೆ ಬೇರೆ ಕಡೆ ಹಲವಾರು ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದಾರೆ. ಈ ಮೂಲಕ ಅಗಲಿದ ತಮ್ಮ ನೆಚ್ಚಿನ ನಟ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಆಚರಿಸಲಿದ್ದಾರೆ