ನನಗೆ ಈಗ 74, ನಾನು ಇಲ್ಲೇ ಹ್ಯಾಪಿ, ಅಲ್ಲಿಗೆ ಹೋಗಲ್ಲ: ಸಿದ್ದು

  • ಆರ್‌ಎಸ್‌ಎಸ್‌ ಅಲ್ಪಸಂಖ್ಯಾತರು ಹಾಗೂ ಸಂವಿಧಾನದ ಆಶಯಗಳಿಗೆ ವಿರೋಧಿ
  • ರಾಷ್ಟ್ರ ರಾಜಕೀಯಕ್ಕೆ ಕರೆದರೂ ಹೋಗುವುದಿಲ್ಲ, ಆ ಚರ್ಚೆಯೂ ಆಗಿಲ್ಲ. ನನಗೆ ಅದರ ಬಗ್ಗೆ ಆಸಕ್ತಿಯೂ ಇಲ್ಲ

ಹುಬ್ಬಳ್ಳಿ (ಅ.18):  ಆರ್‌ಎಸ್‌ಎಸ್‌ (RSS) ಅಲ್ಪಸಂಖ್ಯಾತರು ಹಾಗೂ ಸಂವಿಧಾನದ ಆಶಯಗಳಿಗೆ ವಿರೋಧಿಯಾಗಿರುವುದರಿಂದ ನಾನು ವಿರೋಧ ಮಾಡುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (siddaramaiah) ತಿಳಿಸಿದ್ದಾರೆ. ರಾಷ್ಟ್ರ ರಾಜಕೀಯಕ್ಕೆ (Politics) ಕರೆದರೂ ಹೋಗುವುದಿಲ್ಲ, ಆ ಚರ್ಚೆಯೂ ಆಗಿಲ್ಲ. ನನಗೆ ಅದರ ಬಗ್ಗೆ ಆಸಕ್ತಿಯೂ ಇಲ್ಲ. ರಾಜ್ಯದಲ್ಲಿಯೇ ಮುಂದುವರಿಯುತ್ತೇನೆ. ನನಗೆ ಈಗ 74 ವರ್ಷ. ಸಾಕು ಕರ್ನಾಟಕದಲ್ಲಿಯೇ (Karnataka) ನಾನು ಹ್ಯಾಪಿ ಎಂದು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಆರ್‌ಎಸ್‌ಎಸ್‌ (RSS) ಒಂದು ಕೋಮುವಾದಿ ಸಂಘಟನೆ. ಇದು ಮನುಸ್ಮೃತಿ ಪರವಾಗಿ ಇರುವ ಸಂಘಟನೆ, ಶ್ರೇಣೀಕೃತ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿದೆ. ಅದಕ್ಕೆ ನಾನು ವಿರೋಧ ಮಾಡುತ್ತೇನೆ. ನಾನು 1971ರಲ್ಲಿ ರಾಜಕಾರಣಕ್ಕೆ ಬಂದಾಗಿನಿಂದಲೂ ಆರ್‌ಎಸ್‌ಎಸ್‌ ವಿರೋಧ ಮಾಡುತ್ತಿದ್ದೇನೆ ಎಂದು ತಿಳಿಸಿದರು.

 

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಪದೇ ಪದೇ ಸುಳ್ಳು ಹೇಳುತ್ತಾರೆ. ಅವರ ಮಾತಿಗೆ ಪ್ರತಿಕ್ರಿಯೆ ನೀಡಬಾರದು ಎಂದು ನಿರ್ಧರಿಸಿದ್ದೇನೆ. ಅವರದ್ದು ಯಾವಾಗಲೂ ಹಿಟ್‌ ಆ್ಯಂಡ್‌ ರನ್‌ ಕೇಸ್‌ (Hit And Run). ಅವರ ಹೇಳಿಕೆಯಿಂದ ನನಗೆ ಯಾವುದೇ ನೋವಾಗಿಲ್ಲ. ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಆರ್‌ಎಸ್‌ಎಸ್‌ ಚಟುವಟಿಕೆ ನೋಡಿದಾಗ ಅದು ದೇಶ ವಿಭಜಕ ಸಂಘಟನೆ ಎಂದು ಗೊತ್ತಾಗುತ್ತದೆ. ಸುಮ್ಮನೆ ತೋರಿಕೆಗೆ ಮಾತ್ರ ‘ಸಬ್‌ ಕಾ ಸಾಥ್‌- ಸಬ್‌ ಕಾ ವಿಕಾಸ್‌’ ಎನ್ನುತ್ತಾರೆ. ನಮ್ಮ ಕಚೇರಿಗೆ ಬಂದು ಕಸ ಹೊಡೆದರೆ ಮುಸಲ್ಮಾನರಿಗೆ (Muslim) ಟಿಕೆಟ್‌ ಕೊಡುತ್ತೇವೆ ಎಂದು ಈಶ್ವರಪ್ಪ (Eshwarappa) ಹೇಳುತ್ತಾರೆ. ಇನ್ನೊಬ್ಬರು ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುತ್ತಾರೆ. ಅವರದ್ದು ಸಾಮಾಜಿಕ ಸಂಘಟನೆ, ಆದರೆ ಅವರಲ್ಲಿ ಒಬ್ಬರೆ ಒಬ್ಬ ಮುಸಲ್ಮಾನ ಎಂಎಲ್‌ಎ (MLA) ಇದ್ದಾರಾ? ಕ್ರಿಶ್ಚಿಯನ್ನರು ಯಾಕೆ ಸದಸ್ಯರಾಗಿಲ್ಲ ಎಂದು ಪ್ರಶ್ನಿಸಿದರು.

 

ಎಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸೊಲ್ಲ: ಇನ್ನು ಸಿ.ಎಂ.ಇಬ್ರಾಹಿಂ ಜೆಡಿಎಸ್‌ ಸೇರುತ್ತಿದ್ದಾರೆ ಎಂದೆಲ್ಲ ನನ್ನ ವಿರುದ್ಧ ಮಾತನಾಡುತ್ತಿಲ್ಲ. ಅವರು ನನ್ನ ಆತ್ಮೀಯ ಸ್ನೇಹಿತರಲ್ಲವೆ? ಹೀಗಾಗಿ ಮಾತಾಡುತ್ತಿದ್ದಾರೆ. ಅವರಿಗೆ ಉಪಚುನಾವಣೆ ಪ್ರಚಾರಕ್ಕೆ ಬರಬೇಡಿ ಎಂದು ಹೇಳಿಲ್ಲ. ಇದು ಪಕ್ಷದ ಕಾರ್ಯಕ್ರಮ. ಅವರು ಬಂದರೂ ಬರಬಹುದು ಎಂದರು.

ರಾಷ್ಟ್ರ ರಾಜಕಾರಣಕ್ಕೆ ಹೋಗಲ್ಲ

ಸೋನಿಯಾ ಗಾಂಧಿ ಎಐಸಿಸಿ ಪೂರ್ಣಾವಧಿ ಅಧ್ಯಕ್ಷೆ ಆಗುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿ, ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಕಾರ್ಯಕಾರಿಣಿ ಸಭೆಯಲ್ಲಿ ರಾಹÜುಲ್‌ ಗಾಂಧಿ ಕೂಡ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅವರು ಅಧ್ಯಕ್ಷರಾಗಲಿ ಎಂದು ನಾನೂ ಸೇರಿ ಹಲವು ಸದಸ್ಯರು ಹೇಳಿದ್ದೇವೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *