ಕತ್ರಿನಾ ಕೈಫ್‌ ಜತೆ ವಿಕ್ಕಿ ಕೌಶಲ್‌ ನಿಶ್ಚಿತಾರ್ಥ?

  • ಕತ್ರಿನಾ ಕೈಫ್‌ ಜತೆ ವಿಕ್ಕಿ ಕೌಶಲ್‌ ನಿಶ್ಚಿತಾರ್ಥ?
  • ‘ಶೀಘ್ರ ನನ್ನ ನಿಶ್ಚಿ​ತಾ​ರ್ಥ’ ಎಂಬ ವಿಕ್ಕಿ ಹೇಳಿಕೆ ಬೆನ್ನಲ್ಲೇ ಗುಸು​ಗು​ಸು
  • ಕಳೆದ ಆಗಸ್ಟ್‌ನಿಂದ ಭಾರಿ ಸುದ್ದಿಯಲ್ಲಿರುವ ಜೋಡಿ
I Will Get Engaged Soon Enough says Vicky Kaushal On Rumours About Roka With Katrina Kaif dpl

ಸಾಮಾಜಿಕ ಜಾಲತಾಣದಲ್ಲಿ ಬಾಲಿವುಡ್‌ ನಟ ವಿಕ್ಕಿ ಕೌಶಲ್‌ ಮತ್ತು ನಟಿ ಕತ್ರಿನಾ ಕೈಫ್‌ ಅವ​ರ ‘ರೋಕಾ ಸಮಾರಂಭ’ದ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿರುವ ಬೆನ್ನಲ್ಲೇ, ‘ನಾನು ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳುತ್ತೇನೆ’ ಎನ್ನುವ ಮೂಲಕ ಅಭಿಮಾನಿಗಳ ಕುತೂಹಲ ಮತ್ತಷ್ಟುಹೆಚ್ಚಿಸಿದ್ದಾರೆ.

I Will Get Engaged Soon Enough says Vicky Kaushal On Rumours About Roka With Katrina Kaif dpl

ಆದರೆ ಹುಡುಗಿ ಯಾರು ಎಂಬ ಗುಟ್ಟನ್ನು ಮಾತ್ರ ವಿಕ್ಕಿ ರಟ್ಟು ಮಾಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಕತ್ರಿನಾ ಕೈಫ್‌ ಜತೆಗೇ ವಿಕ್ಕಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾನೆ ಎಂಬ ವದಂತಿ ಹರಡಿದೆ.

I Will Get Engaged Soon Enough says Vicky Kaushal On Rumours About Roka With Katrina Kaif dpl

ಅಲ್ಲದೇ ಶನಿವಾರ ಬಿಡುಗಡೆಯಾದ ವಿಕ್ಕಿಯ ‘ಸರ್ದಾರ್‌ ಉಧಾಮ್‌’ ಚಿತ್ರದ ಬಿಡುಗಡೆ ವೇಳೆಯೂ ಕತ್ರೀನಾ ವಿಶೇಷವಾಗಿ ಕಾಣಿಸಿಕೊಂಡಿದ್ದಳು. ಹೀಗಾಗಿ ಈ ಸುದ್ದಿಗೆ ಮತ್ತಷ್ಟುಪುಷ್ಟಿಬಂದಿದೆ.

I Will Get Engaged Soon Enough says Vicky Kaushal On Rumours About Roka With Katrina Kaif dpl

ಇನ್ನು ರೋಕಾ ಸಮಾರಂಭ ಎಂಬುದು ಪೋಷಕರೊಂದಿಗೆ ತೆರಳಿ ಹುಡುಗಿ ನೋಡುವ ಶಾಸ್ತ್ರವಾಗಿದ್ದು, ಎರಡೂ ಕುಟುಂಬದ ಪೋಷಕರು ಜತೆಯಾಗಿದ್ದ ಫೋಟೋ ಕಳೆದ ಆಗಸ್ಟ್‌ನಲ್ಲಿ ಭಾರಿ ವೈರಲ್‌ ಆಗಿತ್ತು. ಹೀಗಾಗಿ ಕ್ಯಾಟ್‌ ಜತೆಗೇ ವಿಕ್ಕಿ ನಿಶ್ಚಿತಾರ್ಥ ಕನ್ಫಮ್‌ರ್‍ ಎನ್ನುತ್ತಿದ್ದಾರೆ ಅಭಿಮಾನಿಗಳು.

I Will Get Engaged Soon Enough says Vicky Kaushal On Rumours About Roka With Katrina Kaif dpl

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ರೋಕಾ ವದಂತಿಗಳು ಆಗಸ್ಟ್‌ನಲ್ಲಿ ಸುದ್ದಿಯಾಗಿದ್ದವು. ಆದರೂ ಶೀಘ್ರದಲ್ಲೇ, ಕತ್ರಿನಾ ಕೈಫ್ ಅವರ ವಕ್ತಾರರು ವರದಿಗಳನ್ನು ಸುಳ್ಳು ಎಂದು ಸ್ಪಷ್ಟಪಡಿಸಿದ್ದರು. ಯಾವುದೇ ರೋಕಾ ಸಮಾರಂಭವಿಲ್ಲ. ಅವರು ಶೀಘ್ರದಲ್ಲೇ ಟೈಗರ್ 3 ಚಿತ್ರೀಕರಣಕ್ಕೆ ಹೊರಡುತ್ತಿದ್ದಾರೆ ಎನ್ನಲಾಗಿತ್ತು.

I Will Get Engaged Soon Enough says Vicky Kaushal On Rumours About Roka With Katrina Kaif dpl

ನಟಿ, ಟೈಗರ್ 3 ಚಿತ್ರೀಕರಣದ ಫಾರಿನ್ ಶೆಡ್ಯೂಲ್ ವೇಳಾಪಟ್ಟಿಯನ್ನು ಮುಗಿಸಿದ ನಂತರ ಕಳೆದ ತಿಂಗಳು ಭಾರತಕ್ಕೆ ಮರಳಿದರು. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಸ್ವಲ್ಪ ಸಮಯದಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *