ಎಲೆಕ್ಷನ್ ಬಂದಾಗ ಮಾತ್ರ ಬಿಎಸ್ವೈಗೆ ಮುಸ್ಲಿಮರು ನೆನಪಾಗ್ತಾರೆ: ಖಾದರ್
* ವಿಚಾರಗಳಿಂದ ಬಿಜೆಪಿ ಆಡಳಿತದ ವಿರುದ್ಧ ಬೇಸತ್ತ ಜನ
* ಕಾಂಗ್ರೆಸ್ ಸರ್ಕಾರದ ಯೋಜನೆಗಳಿಗೆ ಕತ್ತರಿ ಹಾಕಿದ ಬಿಜೆಪಿ ಸರ್ಕಾರ
* ಬಿಜೆಪಿ ಸರ್ಕಾರ ಬಂದು ಮೂರು ವರ್ಷಗಳಾದರೂ ಒಂದೇ ಒಂದು ಮನೆಯನ್ನೂ ಕಟ್ಟಿಕೊಟ್ಟಿಲ್ಲ
ಸಿಂದಗಿ(ಅ. 23): ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ(BS Yediyurappa) ಅವರಿಗೆ ಚುನಾವಣೆಗಳು(Election) ಬಂದಾಗ ಮಾತ್ರ ಮುಸ್ಲಿಂ ಸಮುದಾಯದ ಬಗ್ಗೆ ನೆನಪಾಗುತ್ತದೆ ಎಂದು ಮಾಜಿ ಸಚಿವ ಯು.ಟಿ.ಖಾದರ್(UT Khader) ಟೀಕಿಸಿದ್ದಾರೆ.
ಸಿಂದಗಿಯಲ್ಲಿ(Sindagi) ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅವರಿಗೆ ಮುಸ್ಲಿಮರ(Muslim) ಬಗ್ಗೆ ಕಾಳಜಿ ಇದ್ದರೆ ಕಾಂಗ್ರೆಸ್(Congress) ಸರ್ಕಾರ ನೀಡಿರುವ ಶಾದಿಭಾಗ್ಯವನ್ನು ವಿರೋಧಿಸಿದ್ದೇಕೆ? ಅಲ್ಪಸಂಖ್ಯಾತರಿಗೆ(Minorities) ಮೀಸಲಿಟ್ಟ ಬಜೆಟ್ನ(Budget) ಗಾತ್ರ ಕಡಿತಗೊಳಿಸಿದ್ದೇಕೆ ಎಂದು ಪ್ರಶ್ನಿಸಿದರು. ದೇಶದ ಜನ ನಿತ್ಯ ಬೆಲೆ ಏರಿಕೆ, ಕೋಮುವಾದ, ದಲಿತರ ಮೇಲಿನ ದೌರ್ಜನ್ಯ ಮತ್ತಿತರ ವಿಚಾರಗಳಿಂದ ಬಿಜೆಪಿ(BJP) ಆಡಳಿತದ ವಿರುದ್ಧ ಬೇಸತ್ತಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರಾವಧಿಯಲ್ಲಿ ಜಾರಿಗೆ ತಂದ ಅನೇಕ ಬಡವರ ಪರ ಯೋಜನೆಗಳಿಗೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕತ್ತರಿ ಹಾಕಲಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ 18 ಲಕ್ಷ ಬಡವರಿಗೆ ಮನೆ ವಿತರಿಸಲಾಗಿದೆ. ಆದರೆ, ಬಿಜೆಪಿ ಸರ್ಕಾರ ಬಂದು ಮೂರು ವರ್ಷಗಳಾದರೂ ಒಂದೇ ಒಂದು ಮನೆಯನ್ನೂ ಕಟ್ಟಿಕೊಟ್ಟಿಲ್ಲ ಎಂದು ತಿಳಿಸಿದ್ದಾರೆ.