Viral Video; ಒಬ್ಬನಿಗಾಗಿ ಇಬ್ಬರು ಯುವತಿಯರ ನಡುವೆ ಡಿಶುಂ ಡಿಶುಂ: ವೈರಲ್ ಆಗಿದೆ ಮಹಿಳೆಯರ ಕದನ ವಿಡಿಯೋ

ಲಕ್ನೋ: ಉತ್ತರ ಪ್ರದೇಶದ ರಾಜಧಾನಿ ಲಕ್ನೋನಲ್ಲಿ (Lucknow, Uttar Pradesh) ಯುವತಿಯರಿಬ್ಬರು ಹೊಡೆದಾಡಿಕೊಂಡಿರುವ ವಿಡಿಯೋ ವೈರಲ್ (viral Video) ಆಗಿದೆ. ಲಕ್ನೋ ನಗರದ ಬಾರಾಬಿರ್ವಾ ಚೌರ್ಹೆ ಬಳಿಯಲ್ಲಿರುವ  ಹೋಟೆಲ್ ಮುಂಭಾಗ ಯುವತಿಯರು ಜಗಳ ಮಾಡಿಕೊಂಡಿದ್ದಾರೆ. ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ವಿಡಿಯೋದಲ್ಲಿ ಒಬ್ಬರಿಗೊಬ್ಬರು ಒದೆಯೋದು, ಮುಖಕ್ಕೆ ಪಂಚ್ ಕೊಡುತ್ತಿರೋದನ್ನ ನೋಡಬಹುದಾಗಿದೆ. ತಮ್ಮ ಪ್ರೇಮಿಗಾಗಿ ಮಾಜಿ ಗೆಳತಿ ಮತ್ತು ಹಾಲಿ ಗೆಳತಿ ನಡುವೆ ಜಗಳ ನಡೆದಿದೆ. ಒಬ್ಬನಿಗಾಗಿ ಇಬ್ಬರು ಕಿತ್ತಾಡಿಕೊಂಡಿರುವ ವಿಡಿಯೋ ಸುನಾಮಿಯಂತೆ ವೈರಲ್ ಆಗುತ್ತಿದೆ.

ಕಾರ್ ನಲ್ಲಿ ಬಂದಿದ್ದ ಮಾಜಿ ಗೆಳತಿ:

ಸೋಮವಾರ ರಾತ್ರಿ ಕಾರ್ ನಲ್ಲಿ ಬಂದಿದ್ದ ಯುವತಿ (Ex-girlfriend)ಸ್ಕೈ ಹಿಲ್ಟನ್ ಹೋಟೆಲ್ ಮುಂಭಾಗದಲ್ಲಿಯೇ ಕಾಯುತ್ತಾ ನಿಂತಿದ್ದಳು. ಹೋಟೆಲ್ ನಿಂದ ರಾಬಿನ್ ಎಂಬಾತ ತನ್ನ ಗೆಳತಿ ಜೊತೆ ಹೊರಗೆ ಬಂದಿದ್ದಾನೆ. ಈ ವೇಳೆ ಇಬ್ಬರ ನಡುವೆ ಆರಂಭವಾದ ಜಗಳ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.

Enter Your Age & Number to Check Your Eligibility of 1 Cr at 537/Month. Quote Now!Term Life Insurance | Get Free Quote

ಮೊದಲೇ ತನ್ನ ಪ್ರಿಯಕರ ಹೋಟೆಲ್ ನಲ್ಲಿರೋದು ಖಚಿತ ಪಡಿಸಿಕೊಂಡಿದ್ದ ಯುವತಿ, ಆತ ಹೊರಗೆ ಬರುತ್ತಲೇ ಕಾರ್ ನಿಂದ ಇಳಿದು ಗಲಾಟೆ ಶುರು ಮಾಡಿದ್ದಾಳೆ. ಜೊತೆಗೆ ಆತನ ಜೊತೆಯಲ್ಲಿದ್ದ ಯುವತಿಯನ್ನು ಸಹ ನಿಂದಿಸಿದ್ದಾಳೆ. ಈ ವೇಳೆ ಹಾಲಿ  ಗೆಳತಿಯೊಂದಿಗೆ ಆಕೆಯ ಇಬ್ಬರು ಸ್ನೇಹಿತೆಯರು ಸಹ ಬಂದಿದ್ದರು. ಮೂವರು ಜೊತೆಗೂಡಿ ಮಾಜಿ ಗೆಳತಿ ಮೇಲೆ ದಾಳಿ ನಡೆಸಿದ್ದಾರೆ. ಮೂವರಿಂದ ಹಲ್ಲೆಗೊಳಗಾದ ಮಾಜಿ ಗೆಳತಿ ರಸ್ತೆಯಲ್ಲಿಯೇ ಕುಸಿದಿದ್ದಾಳೆ. ಎಚ್ಚರವಾದ ನಂತರ ಠಾಣೆಗೆ ತೆರಳಿ ಮೂವರ ವಿರುದ್ಧ ದೂರು ದಾಖಲಿಸಿದ್ದಾಳೆ.  ಈ ಸಂಬಂಧ ಎಫ್ಐಆರ್ ಸಹ ದಾಖಲಾಗಿದೆ. ಎಫ್ಐಆರ್​ ದಾಖಲಿಸಿಕೊಂಡಿರುವ ಪೊಲೀಸರು ಹಾಲಿ ಗೆಳತಿಯನ್ನು ಬಂಧಿಸಿದ್ದಾರೆ. ಮಾಜಿ ಗೆಳತಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು

ಪೊಲೀಸರ ಪ್ರಕಾರ, ರಾಬಿನ್ ಮತ್ತು ಆಕೆಯ ಹಾಲಿ ಗೆಳತಿ ಯುವತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ವೇಳೆ ಹಾಲಿ ಗೆಳತಿ ಮತ್ತು ಪ್ರಿಯಕರ ಮದ್ಯ ಸೇವನೆ ಮಾಡಿದ್ದರು. ಅಕ್ಟೋಬರ್ 10 ರಂದು ಮಾಜಿ ಗೆಳತಿ ರಾಬಿನ್ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ರಾಬಿನ್ ತನ್ನನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ದೂರು ದಾಖಲಿಸಿದ್ದಳು. ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಇನ್ ಸ್ಪೆಕ್ಟರ್ ಧೀರಜ್ ಶುಕ್ಲಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.  ಸೋಮವಾರ ರಾಬಿನ್ ನನ್ನು ಹೋಟೆಲ್ ಬಳಿ ಮಾಜಿ ಗೆಳತಿ ಭೇಟಿಯಾದಾಗ ಈ ಘಟನೆ ನಡೆದಿದೆ. ಹಾಲಿ ಗೆಳತಿ ಜೊತೆ ಆಕೆಯ ಇಬ್ಬರು ಸ್ನೇಹಿತೆ ಜೊತೆ ಸೇರಿ ಹಲ್ಲೆ ನಡೆಸಿದ್ದಾರೆ. ಸದ್ಯ ಹಾಲಿ ಗೆಳತಿಯ ಬಂಧನವಾಗಿದ್ದು, ಮಾಜಿ ಗೆಳತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಮೇಲೆ ಮಾಜಿ ಗೆಳತಿಯ ಆರೋಪ

ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಗೆಳತಿ ಪೊಲೀಸರ ವಿರುದ್ಧ  ಗಂಭೀರ ಆರೋಪ ಮಾಡಿದ್ದಾಳೆ. ಅಕ್ಟೋಬರ್ 10ರಂದು ದೂರು ದಾಖಲಿಸಿದ್ರೂ, ಪೊಲೀಸರು ರಾಬಿನ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸರು ರಾಬಿನ್ ನನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದು, ಆತನೊಂದಿಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾಳೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *