ಅಭಿವೃದ್ಧಿಯಾಗಬೇಕಾದ್ರೆ ಬಿಜೆಪಿಗೆ ಮತ ಹಾಕಬೇಕು ಅಂತ ಜನರಿಗೆ ಗೊತ್ತಾಗಿದೆ… ಸಿಎಂ ಬಸವರಾಜ ಬೊಮ್ಮಾಯಿ…
ಹಾನಗಲ್: ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಸಿಎಂ ಬೊಮ್ಮಾಯಿ ಭರ್ಜರಿ ಕ್ಯಾಂಪೇನ್ ಮಾಡ್ತಿದ್ದಾರೆ. ಈ ವೇಳೆ ಬಿಟಿವಿಗೆ ಎಕ್ಸ್ಕ್ಲೂಸಿವ್ ಸಂದರ್ಶನ ನೀಡಿದ್ದು, ನಾವು ಎರಡೂ ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ತೀವಿ.. ಎಲ್ಲಾ ಹಳ್ಳಿಗಳ ರಸ್ತೆಗಳು ಚೆನ್ನಾಗಿವೆ.. ಅಭಿವೃದ್ಧಿ ಕೆಲಸಗಳನ್ನ ಮಾಡಿದ್ದೇವೆ. ನೀರಾವರಿ ಯೋಜನೆಗಳನ್ನ ಕೊಟ್ಟಿದ್ದೇವೆ.. ಹೀಗಾಗಿ ಬೈ ಎಲೆಕ್ಷನ್ ಬಿಜೆಪಿ ಗೆದ್ದೇ ಗೆಲ್ಲುತ್ತೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.. ಅಭಿವೃದ್ಧಿಯಾಗಬೇಕಾದ್ರೆ ಬಿಜೆಪಿಗೆ ಮತ ಹಾಕಬೇಕು ಅಂತ ಜನರಿಗೆ ಗೊತ್ತಾಗಿದೆ. ಕಾಂಗ್ರೆಸ್ ಈ ಬಾರಿ ಪುಡಿ ಪುಡಿಯಾಗುತ್ತೆ ಎಂದು ಹೇಳಿದ್ದಾರೆ.
ಹಾನಗಲ್ ಕ್ಷೇತ್ರದಲ್ಲಿ ಮಿಂಚಿನ ಪ್ರಚಾರ ಮಾಡ್ತಿರೋ ಸಿಎಂ ಬೊಮ್ಮಾಯಿಗೆ ಹಳ್ಳಿ ಹಳ್ಳಿಯಲ್ಲೂ ಭರ್ಜರಿ ಬೆಂಬಲ ಸಿಗ್ತಿದೆ. ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರಚಾರ ಮಾಡಿತ್ತಿದ್ದಾರೆ… ಈ ವೇಳೆ, ಸಾವಿರಾರು ಕಾರ್ಯಕರ್ತರು ಸಿಎಂಗೆ ಸ್ವಾಗತ ಕೋರಿದ್ರು. ಈ ವೇಳೆ ಮಾತನಾಡಿದ ಬೊಮ್ಮಾಯಿ, ಅಭಿವೃದ್ಧಿಯಾಗಬೇಕಾದ್ರೆ ಬಿಜೆಪಿಗೆ ಮತ ಹಾಕಬೇಕು ಅಂತ ಜನರಿಗೆ ಗೊತ್ತಾಗಿದೆ. ಕಾಂಗ್ರೆಸ್ ಈ ಬಾರಿ ಪುಡಿ ಪುಡಿಯಾಗುತ್ತೆ ಎಂದಿದ್ದಾರೆ. ಅಲ್ದೆ, ಈ ಭಾಗದಲ್ಲಿ ಏನೇ ಅಭಿವೃದ್ಧಿಯಾಗಿದ್ರೆ ಅದು ಸಿಎಂ ಉದಾಸಿ ಕಾಲದಲ್ಲಿ ಎಂದು ಬೊಮ್ಮಾಯಿ ಹೇಳಿದ್ದಾರೆ, ನೀರಾವರಿ ಯೋಜನೆಗಳನ್ನ ನೀಡಿದ್ದು ಸಿಎಂ ಉದಾಸಿ. ಸಿದ್ದರಾಮಯ್ಯ ಐದು ವರ್ಷ ಏನ್ ಮಾಡಿದ್ರಿ ಎಂದು ಸಿಎಂ ಬೊಮ್ಮಾಯಿ ಪ್ರಶ್ನೆ ಮಾಡಿದ್ದಾರೆ.