Earn Lakhs in Farming: ಬಕೆಟ್ನಲ್ಲಿ ಮುತ್ತು ಬೆಳೆಸಿ ಲಕ್ಷಗಟ್ಟಲೆ ಲಾಭ ಪಡೆಯುತ್ತಿರುವ ರೈತ, ನೀವೂ ಮಾಡಬಹುದು!
Farmer finds New Crop: ಕೇರಳದ ಕಾಸರಗೋಡಿನ ಕೆ.ಜೆ ಮಾತಚ್ಚನ್ ತಮ್ಮ ಕೈತೋಟದ ಕೊಳದಲ್ಲಿಯೇ ಮುತ್ತುಗಳನ್ನು ಉತ್ಪಾದಿಸಿ (Pearl Farming) ಪರಿಶ್ರಮ ಹಾಗೂ ಅಚಲ ನಂಬಿಕೆ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. 65ರ ಹರೆಯದ ಕೃಷಿಕ ಮಾತಚ್ಚನ್ ಕಳೆದ 2 ವರ್ಷಗಳಿಂದ ಪಶ್ಚಿಮಘಟ್ಟದ ನದಿಗಳ (Rivers of Western Ghats) ಸಿಹಿ ನೀರಿನ ಚಿಪ್ಪುಗಳಿಂದ ಮುತ್ತುಗಳನ್ನು ಉತ್ಪಾದಿಸುತ್ತಿದ್ದಾರೆ ಎಂಬುದನ್ನು ನೀವು ನಂಬಲೇಬೇಕು. ಪ್ರತಿ ವರ್ಷ 50 ಬಕೆಟ್ಗಳವರೆಗೆ ಮುತ್ತುಗಳು (Pearls in Buckets) ದೊರೆಯುತ್ತಿದ್ದು ಬರೋಬ್ಬರಿ 18 ತಿಂಗಳಿಗೊಮ್ಮೆ ಮಾತಚ್ಚನ್ 4.5 ಲಕ್ಷದವರೆಗೆ ಆದಾಯ ಗಳಿಸುತ್ತಾರೆ. ಈ ಮುತ್ತುಗಳಲ್ಲಿ ಹೆಚ್ಚಿನವುಗಳನ್ನು ಆಸ್ಟ್ರೇಲಿಯಾ (Australia), ಸೌದಿ ಅರೇಬಿಯಾ(Saudi Arabia), ಕುವೈತ್ (Kuwait) ಹಾಗೂ ಸ್ವಿರ್ಜಲ್ಯಾಂಡ್ಗೆ (Switzerland) ರವಾನಿಸಲಾಗುತ್ತದೆ (Export) ಎಂದು ಮಾತಚ್ಚನ್ ಹೇಳುತ್ತಾರೆ.
21 ವರ್ಷಗಳಿಂದ ಮುತ್ತು ಕೃಷಿಯಲ್ಲಿ ನಿರತ
ಚೀನಾದ ARAMCO ಆಯಿಲ್ ಕಂಪನಿಗೆ ಅರೇಬಿಕ್ನಿಂದ ಇಂಗ್ಲಿಷ್ ಭಾಷೆಗೆ ಅನುವಾದಕರಾಗಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ, ಸೌದಿ ಅರೇಬಿಯಾದ ಧಹ್ರಾನ್ನಲ್ಲಿರುವ ಕಿಂಗ್ ಫಹದ್ ಪೆಟ್ರೋಲಿಯಂ ಮತ್ತು ಮಿನರಲ್ಸ್ ವಿಶ್ವವಿದ್ಯಾಲಯದಲ್ಲಿ ದೂರಸಂಪರ್ಕ ವಿಭಾಗದಲ್ಲಿ ಮಥಾಚನ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಚೀನಾದ ವುಕ್ಸಿಯಲ್ಲಿರುವ ಡ್ಯಾನ್ಶುಯಿ ಮೀನುಗಾರಿಕಾ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದ್ದ ಮಾತಚ್ಚನ್ ಮೀನುಗಾರಿಕೆ ಕುರಿತು ವಿವಿಧ ಕೋರ್ಸ್ಗಳನ್ನು ಪಡೆಯಲು ನಿರ್ಧರಿಸಿದರು. ಈ ಸಂದರ್ಭದಲ್ಲಿ ಅವರು ಮುತ್ತು ಕೃಷಿ ಡಿಪ್ಲೊಮಾವನ್ನು ಅಭ್ಯಸಿಸಿದರು. ಭಾರತದಲ್ಲಿ ಮುತ್ತು ಕೃಷಿಯನ್ನು ಕೆಲವೇ ಜನರು ಅನುಸರಿಸುತ್ತಿರುವುದರಿಂದ ಮಾತಚ್ಚನ್ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ನಿರ್ಧರಿಸಿದರು.
ಚೀನಾಗೇ ಶಿಫ್ಟ್ ಆಗಿಬಿಟ್ಟರು
ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ ಮಾತಚ್ಚನ್ ಡಿಪ್ಲೊಮಾ ಅಭ್ಯಾಸ ಮುಂದುವರಿಸಲು ಚೀನಾಕ್ಕೆ ಸ್ಥಳಾಂತರಗೊಂಡರು. ಆರು ತಿಂಗಳ ನಂತರ ತರಬೇತಿ ಮುಗಿಸಿ 1999ರಲ್ಲಿ ತಮ್ಮ ಸ್ವಂತ ತೋಟದಲ್ಲಿ ಮುತ್ತುಗಳನ್ನು ಉತ್ಪಾದಿಸಲು ಕೇರಳಕ್ಕೆ ಮರಳಿದರು.

ರೈತ ಮಾತಚ್ಚನ್ ಮತ್ತು ಅವರು ಬೆಳೆದ ಮುತ್ತುಗಳು
ಸಿಹಿನೀರಿನಲ್ಲೇ ಸಂಗ್ರಹಿಸಿದ ಚಿಪ್ಪುಗಳಿಂದ ಮುತ್ತುಗಳನ್ನು ಉತ್ಪಾದಿಸುವ ಕಾಯಕಕ್ಕೆ ತೊಡಗಿದ ಅವರು ತಮ್ಮ ಕೈದೋಟಲ್ಲಿಯೇ ಬಕೆಟ್ಗಳಲ್ಲಿ ಮುತ್ತುಗಳನ್ನು ಉತ್ಪಾದಿಸಲಾರಂಭಿಸಿದರು. ಬರೇ 18 ತಿಂಗಳುಗಳಲ್ಲಿ ರೈತ ಮಾತಚ್ಚನ್ 50 ಬಕೆಟ್ಗಳಷ್ಟು ಮುತ್ತುಗಳನ್ನು ಉತ್ಪಾದಿಸಿದ್ದರು. ಮಾತಚ್ಚನ್ 1.5 ಲಕ್ಷ ರೂ. ವಿನಿಯೋಗಿಸಿ ಆರಂಭದಲ್ಲಿ ಮುತ್ತು ಕೃಷಿಗೆ ಹೂಡಿಕೆ ಮಾಡಿದ್ದರು. ಇದರಿಂದ ಅವರಿಗೆ 4.5 ಲಕ್ಷ ಬೆಲೆಯ ಮುತ್ತುಗಳನ್ನು ಉತ್ಪಾದಿಸಿದ್ದು ಅವರಿಗೆ 3 ಲಕ್ಷ ಲಾಭ ತಂದುಕೊಟ್ಟಿದೆ ಎಂದು ಹೇಳಿದ್ದಾರೆ.
ಮುತ್ತು ಕೃಷಿ ಮಾಡುವ ವಿಧಾನ
“ಮುತ್ತುಗಳನ್ನು ಮೂರು ವಿಧಗಳಾಗಿ ವರ್ಗೀಕರಿಸಲಾಗಿದ್ದು ಕೃತಕ, ನೈಸರ್ಗಿಕ ಮತ್ತು ಬೆಳೆಸಬಹುದಾದ (ಕೃಷಿ ಮಾಡಬಹುದಾದ) ವಿಧಗಳು. ನಾನು 21 ವರ್ಷಗಳಿಗೂ ಹೆಚ್ಚು ಕಾಲ ಬೆಳೆಸಬಹುದಾದ ಮುತ್ತುಗಳನ್ನು ಉತ್ಪಾದಿಸುತ್ತಿದ್ದೇನೆ ಮತ್ತು ಸಿಹಿನೀರಿನ ಚಿಪ್ಪುಗಳನ್ನು ಭಾರತದಲ್ಲಿ ಸುಲಭವಾಗಿ ಪಡೆದುಕೊಳ್ಳಬಹುದಾದ ಕಾರಣ ಅವು ಬೆಳೆಯಲು ಸರಳವಾಗಿದೆ” ಎಂದು ಮಾತಚ್ಚನ್ ಬಹಿರಂಗಪಡಿಸುತ್ತಾರೆ.
ನದಿಗಳಿಂದ ಸಂಗ್ರಹಿಸಲಾದ ಚಿಪ್ಪುಗಳನ್ನು ನಿಧಾನವಾಗಿ ತೆರೆಯಲಾಗುತ್ತದೆ ಮತ್ತು ಮುತ್ತಿನ ಕೇಂದ್ರವನ್ನು ಒಳಭಾಗದಲ್ಲಿ ಇರಿಸಲಾಗುತ್ತದೆ. ಆಹಾರಕ್ಕಾಗಿ ಬ್ಯಾಕ್ಟೀರಿಯಾ ಒಳಗೊಂಡಿರುವ ಮೆಶ್ ಇರುವ ಪಾತ್ರೆಯಲ್ಲಿ ಚಿಪ್ಪನ್ನು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿಸಲಾಗುತ್ತದೆ. 18 ತಿಂಗಳ ಅವಧಿಯಲ್ಲಿ, ನ್ಯೂಕ್ಲಿಯಸ್ ಮಸ್ಸೆಲ್ ಚಿಪ್ಪುಗಳಿಂದ ಕ್ಯಾಲ್ಸಿಯಂ ಕಾರ್ಬೋನೇಟ್ ಸಂಗ್ರಹಿಸುವ ಮುತ್ತಿನ ಚೀಲವನ್ನು ರೂಪಿಸುತ್ತದೆ. ನ್ಯೂಕ್ಲಿಯಸ್ 540 ಪದರಗಳ ಹೊದಿಕೆಯೊಂದಿಗೆ ಸ್ವತಃ ಆವರಿಸಿರುತ್ತದೆ, ಇದರ ಪರಿಣಾಮವಾಗಿ ಸುಂದರವಾದ ಮುತ್ತುಗಳು ರೂಪುಗೊಳ್ಳುತ್ತವೆ.
ಕೈದೋಟದಲ್ಲೇ ಬೃಹತ್ ಉತ್ಪಾದನೆ
ಮುತ್ತು ಉತ್ಪಾದನೆಗಾಗಿ ಮಾತಚ್ಚನ್ ತಮ್ಮ ಕೈ ತೋಟದಲ್ಲೇ ಬೃಹತ್ ಉತ್ಪಾದನಾ ತೊಟ್ಟಿ ನಿರ್ಮಿಸಿದ್ದಾರೆ. ರೈತ ಮಾತಚ್ಚನ್ ಮುತ್ತಿನ ತೋಟಕ್ಕೆ ಭೇಟಿ ನೀಡಿದ ಯೂಟ್ಯೂಬರ್ ಲಿಬಿನ್ ಕುರಿಯನ್ ಹೇಳುವಂತೆ ಮಾತಚ್ಚನ್ ಕೈದೋಟದಲ್ಲಿ ನಿರ್ಮಿಸಿರುವ ಕೊಳವು 40 ಮೀಟರ್ ಉದ್ದ, 15 ಮೀಟರ್ ಅಗಲ ಹಾಗೂ 6 ಮೀಟರ್ ಆಳವಾಗಿದೆ. ನವೀನ ಮಾದರಿಯ ಉದ್ಯಮ ಕಲ್ಪನೆಯನ್ನು ನಾನು ಇದುವರೆಗೆ ನೋಡಿಲ್ಲ ಹಾಗೂ ಇದನ್ನು ಕಾರ್ಯರೂಪಕ್ಕೆ ತರಲು ಮಾತಚ್ಚನ್ ಮಾಡಿರುವ ಕೆಲಸ ನಿಜಕ್ಕೂ ನಂಬಲು ಅಸಾಧ್ಯವಾದುದು ಎಂದು ಲಿಬಿನ್ ಹೇಳುತ್ತಾರೆ. ಮುತ್ತು ಉತ್ಪಾದನೆಯಲ್ಲದೆ ಮಾತಚ್ಚನ್ ವೆನಿಲ್ಲಾ, ತೆಂಗಿನಕಾಯಿ ಮತ್ತು ಸ್ಥಳೀಯ ಮಾವಿನ ತಳಿಗಳನ್ನು ಉತ್ಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ಆನ್ಲೈನ್ ತರಗತಿಗಳನ್ನು ನಡೆಸುತ್ತಿದ್ದರು
ಲಾಕ್ಡೌನ್ ಅವಧಿಯಲ್ಲಿ ವ್ಯಾಪಾರವು ಕೊಂಚ ಇಳಿಮುಖವಾಗಿತ್ತು ಈ ಸಮಯದಲ್ಲಿ ಮಾತಚ್ಚನ್ ತಮ್ಮ ಅತ್ಯದ್ಭುತ ವ್ಯವಹಾರ ಯೋಜನೆಯ ಕುರಿತಾಗಿ ಆನ್ಲೈನ್ ತರಗತಿಗಳನ್ನು ನಡೆಸುತ್ತಿದ್ದರು. ಈ ತರಗತಿಯಲ್ಲಿ ಪಾಲ್ಗೊಂಡಿದ್ದ ಆಶಾ ಜಾನ್ ಇದುವರೆಗೆ ಮುತ್ತು ಕೃಷಿಯಲ್ಲಿನ ಈ ನವೀನ ಅನ್ವೇಷಣೆಯ ಕುರಿತು ನಾನು ತಿಳಿದಿರಲಿಲ್ಲ. ಇದು ನಂಬಲು ಅಸಾಧ್ಯ ಎಂದು ತಿಳಿಸುತ್ತಾರೆ. ಆಕೆ ಸ್ವತಃ ಮಾತಚ್ಚನ್ ತೋಟಕ್ಕೆ ಭೇಟಿ ನೀಡಿ ಮುತ್ತು ಉತ್ಪಾದನೆಯನ್ನು ಸ್ವತಃ ನೋಡಿದ್ದಾರೆ.
ಮಾತಚ್ಚನ್ ಮುತ್ತು ಕೃಷಿಯು ಕೆಲವೇ ವರ್ಷಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿದೆ. ಇದರ ಪರಿಣಾಮವಾಗಿ, ಕೇರಳದ ಸುತ್ತಮುತ್ತಲಿನ ವಿಶ್ವವಿದ್ಯಾನಿಲಯಗಳು ಮತ್ತು ಕರ್ನಾಟಕ ಮೀನುಗಾರಿಕೆ ಇಲಾಖೆಯಿಂದ ಹಲವಾರು ವಿದ್ಯಾರ್ಥಿಗಳು ಅವರ ಮುತ್ತಿನ ತೋಟಕ್ಕೆ ಭೇಟಿ ನೀಡಿದ್ದಾರೆ. ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಅನೇಕ ತರಗತಿಗಳನ್ನೂ ನೀಡಿದ್ದಾರೆ.