Karnataka High Court: ತಿಂಗಳಿಗೆ ₹81,100 ಸಂಬಳ, ಹೈ ಕೋರ್ಟ್ನಲ್ಲಿ 150 ಟೈಪಿಸ್ಟ್ ಹುದ್ದೆಗಳು ಖಾಲಿ
Karnataka Jobs: ಕರ್ನಾಟಕ ಹೈ ಕೋರ್ಟ್(Karnataka High Court) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಸರ್ಕಾರಿ ಉದ್ಯೋಗ(Government Jobs) ಅರಸುತ್ತಿರುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಒಟ್ಟು 150 ಟೈಪಿಸ್ಟ್ ಹುದ್ದೆ(Typist Posts)ಗಳು ಖಾಲಿ ಇವೆ. ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಟೈಪಿಸ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಕ್ಟೋಬರ್ 27ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ನವೆಂಬರ್ 27ರವರೆಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
| ಸಂಸ್ಥೆ | ಕರ್ನಾಟಕ ಹೈ ಕೋರ್ಟ್ |
| ಜಾಹೀರಾತು ಸಂಖ್ಯೆ | HCRB/TYP-10/2021 |
| ಹುದ್ದೆಯ ಹೆಸರು | ಟೈಪಿಸ್ಟ್ |
| ಒಟ್ಟು ಹುದ್ದೆಗಳು | 150 |
| ವಿದ್ಯಾರ್ಹತೆ | ಯಾವುದೇ ಪದವಿ |
| ಸಂಬಳ | ಮಾಸಿಕ ₹ 25,500-81,100 |
| ಅರ್ಜಿ ಸಲ್ಲಿಕೆ ವಿಧಾನ | ಆನ್ಲೈನ್ |
| ಅರ್ಜಿ ಸಲ್ಲಿಕೆ ಆರಂಭ ದಿನಾಂಕ | 27/10/2021 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 27/11/2021 |
ಪ್ರಮುಖ ದಿನಾಂಕಗಳು:ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 27/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27/11/2021
ವಿದ್ಯಾರ್ಹತೆ:
ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಸಂಸ್ಥೆಯಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.
ವಯೋಮಿತಿ:
ಟೈಪಿಸ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವಯಸ್ಸಾಗಿರಬೇಕು. ಗರಿಷ್ಠ 35/38/40 ವರ್ಷ ಮೀರಿರಬಾರರು. (ವಿವಿಧ ವರ್ಗಗಳಿಗೆ ಅನುಸಾರ)
ಉದ್ಯೋಗದ ಸ್ಥಳ :
ಬೆಂಗಳೂರು
ಸಂಬಳ:
ಟೈಪಿಸ್ಟ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ ₹ 25,200 ರಿಂದ 81,100 ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
