ಸಿಂದಗಿ ವಿಧಾನಸಭಾ ಉಪ ಚುನಾವಣೆಗೆ ಸಕಲ ಸಿದ್ಧತೆಃ ಜಿಲ್ಲಾಧಿಕಾರಿ ಪಿ ಸುನಿಲ್ ಕುಮಾರ್
ವಿಜಯಪುರ, ಅ.29-ಸಿಂದಗಿ ವಿಧಾನಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ಮುಕ್ತ ನ್ಯಾಯಸಮ್ಮತ ಚುನಾವಣೆ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಚುನಾವಣೆಯಲ್ಲಿ ಒಟ್ಟು 234584 ಮತದಾರರು ಮತ ಚಲಾಯಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಸಿಂದಗಿ ವಿಧಾನಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ನಡೆಸಿದ ಅವರು ಅಂತಿಮವಾಗಿ ಚುನಾವಣಾ ಕಣದಲ್ಲಿ ಒಟ್ಟು ಆರು ಅಭ್ಯರ್ಥಿಗಳು ಉಳಿದಿದ್ದಾರೆ. ಚುನಾವಣೆ ಅಕ್ಟೋಬರ್ 30 ರಂದು ನಡೆಯಲಿದೆ. ಈ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 234584 ಮತದಾರರು ಮತ ಚಲಾಯಿಸಲಿದ್ದು ಈ ಪೈಕಿ 120844 ಪುರುಷ ಮತದಾರರು, 113561 ಮಹಿಳಾ ಮತದಾರರು, 32 ಇತರೆ, 147 ಸರ್ವಿಸ್ ವೋಟರಗಳು ಮತ ಚಲಾಯಿಸಲಿದ್ದಾರೆ ಎಂದು ಅವರು ಹೇಳಿದರು.
ಈ ಚುನಾವಣೆಯ ಅಂಗವಾಗಿ 271 ಮತದಾನ ಕೇಂದ್ರಗಳನ್ನು ಹಾಗೂ 26 ಆಕ್ಸಿಲರಿ ಮತದಾನ ಕೇಂದ್ರಗಳು ಸೇರಿದಂತೆ ಒಟ್ಟು 297 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. 7 ಚೆಕ್ ಪೆÇೀಸ್ಟ್ ಗಳು ಕಾರ್ಯನಿರ್ವಹಿಸುತ್ತಿದ್ದು, 22 ಸೆಕ್ಟರ್ ಆಫೀಸರ್ ಗಳು, 18 ಫ್ಲೈಯಿಂಗ್ ಸ್ಕ್ವೇಡ ತಂಡಗಳು, 21 ಸ್ಟ್ಯಾಟಿಕ್ ಸರ್ವೆಲೆನ್ಸ್ ತಂಡಗಳು ಕಾರ್ಯನಿರ್ವಹಿಸುತ್ತಿವೆ.
ಅದರಂತೆ ಓರ್ವ ಸಹಾಯಕ ಎಕ್ಸ್ಪೆಂಡಿಚರ್ ಅಬ್ಸರ್ವರ್, 1 ಅಕೌಂಟಿಂಗ್ ತಂಡ, 6 ವಿಡಿಯೋ ಸರ್ವೆಲೆನ್ಸ್ ತಂಡಗಳು, 2 ವಿವಿಂಗ್ ತಂಡಗಳು, 2 ಜಿಲ್ಲಾಮಟ್ಟದ ಮಾಸ್ಟರ್ ಟ್ರೈನರ್ಗಳು ಹಾಗೂ ವಿಧಾನ ಸಭಾ ಕ್ಷೇತ್ರ ಮಟ್ಟದಲ್ಲಿ 23 ಮಾಸ್ಟರ್ ಟ್ರೈನರ್ ಗಳು ಕಾರ್ಯನಿರ್ವಹಿಸುತ್ತಿದ್ದು ಮತದಾನ ಸಂದರ್ಭದಲ್ಲಿ 1308 ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಇದರಲ್ಲಿ 327 ಪಿಆರ್ ಓ, 327 ಎಪಿಆರ್ ಓ ಹಾಗೂ 654 ಪಿ ಓ ಗಳನ್ನು ನಿಯೋಜಿಸಲಾಗಿದೆ.
ಈಗಾಗಲೇ ಪಿಆರ್ ಓ, ಎಪಿಆರ್ ಓ ಗಳಿಗೆ ತರಬೇತಿಗಳನ್ನು ವಿಜಯಪುರ ಮತ್ತು ಸಿಂದಗಿಯಲ್ಲಿ ನೀಡಲಾಗಿದೆ. ಸಿಂದಗಿ ಆರ್ .ಡಿ ಪಾಟೀಲ್ ಕಾಲೇಜಿನಲ್ಲಿ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕೇಂದ್ರ ಸ್ಥಾಪಿಸಿದೆ. ವಿಶೇಷ ಮತದಾರರ ಪೆÇೀಸ್ಟಲ್ ಬ್ಯಾಲೆಟ್ ಗಳನ್ನು ಈಗಾಗಲೇ ಚುನಾವಣಾ ಅಧಿಕಾರಿಗಳು ಸ್ವೀಕರಿಸಿದ್ದು, 892 ಜನ ಹಿರಿಯ 80 ವರ್ಷ ಮೇಲ್ಪಟ್ಟ, 402 ಪಿಡಬ್ಲ್ಯೂಡಿ ವೋಟರ್ ಇದ್ದು, 35 ಮೈಕ್ರೋ ಅಬ್ಸರ್ವರ್ ಗಳನ್ನು ನೇಮಿಸಲಾಗಿದೆ.
ಅದರಂತೆ 20 ವಿಡಿಯೋಗ್ರಾಫರ್ ನಿಯೋಜಿಸಿದೆ. ಮತದಾನ ಕೇಂದ್ರದಲ್ಲಿ 37 ಸಿಎಪಿಎಫ್ ನಿಯೋಜಿಸಿದೆ. 2 ಸಖಿ ಮತದಾನ ಕೇಂದ್ರ, 1 ಪಿಡಬ್ಲ್ಯೂಡಿ ಮತದಾನ ಕೇಂದ್ರ, 180 ವೆಬ್ ಕಾಸ್ಟಿಂಗ್ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಮತದಾನ ಕರ್ತವ್ಯಕ್ಕಾಗಿ, ಸಿಬ್ಬಂದಿಗಳಿಗೆ 66 ಬಸ್ ಹಾಗೂ ಇತರ ವಾಹನಗಳ ವ್ಯವಸ್ಥೆ ಮಾಡಲಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಡಿವೈಎಸ್ಪಿ-02, ಸಿಪಿಐ-4, ಪಿಎಸ್ಐ -22, ಎಎಸ್ಐ-70, ಹೆಡ್ ಕಾನ್ಸ್ಟೇಬಲ್ ಮತ್ತು ಪೆÇಲೀಸ್ ಕಾನ್ಸ್ಟೇಬಲ್-477, ಡಿಎಆರ್-40, ಐ ಆರ್ ಬಿ-180, ಸಿಐಎಸ್ಎಫ್-185 ಪೆÇಲೀಸ್ ಸಿಬ್ಬಂದಿಗಳನ್ನು ನೇಮಿಸಲಾಗಿದೆ.
ಅಬಕಾರಿ ಇಲಾಖೆಯಿಂದ ಇಂದಿನವರೆಗೆ 277 ಲೀಟರ್ ಲಿಕ್ಕರ್ (157714 ವೆಚ್ಚದ) , 4 ಕೆಜಿ ಗಾಂಜಾ, 7 ದ್ವಿಚಕ್ರವಾಹನ, 1 ಫೆÇೀರ್ ವೀಲರ್ ಸೀಜ್ ಮಾಡಲಾಗಿದೆ. ಅದರಂತೆ ಪೆÇಲೀಸ್ ಇಲಾಖೆಯಿಂದ 30 ಲೀಟರ್ ಲಿಕ್ಕರ್ ಸೀಜ್ ಮಾಡಲಾಗಿದೆ ಎಂದು ಅವರು ಹೇಳಿದರು.
ಈ ಚುನಾವಣೆಗೆ ಸಂಬಂಧಿಸಿದಂತೆ ಮತಎಣಿಕೆಗೆ ದಿನಾಂಕ :2-11-2021 ರಂದು ಬೆಳಿಗ್ಗೆ 8-00 ಗಂಟೆಯಿಂದ ವಿಜಯಪುರ ನಗರದ ಸೈನಿಕ ಶಾಲೆಯ ಒಡೆಯರ್ ಹೌಸ್ ನಲ್ಲಿ ಮತ ಎಣಿಕೆ ನಡೆಯಲಿದ್ದು, ನವೆಂಬರ್ 2 ರಂದು ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭಗೊಳ್ಳಲಿದೆ. ಇದಕ್ಕಾಗಿ 14 ಮತಎಣಿಕೆ ಟೇಬಲ್ಗಳನ್ನು ಸ್ಥಾಪಿಸಲಾಗುತ್ತಿದ್ದು, 2 ಕೌಂಟಿಂಗ್ ಹಾಲ್ ಗಳನ್ನು ನಿಗದಿಪಡಿಸಿದೆ. ಪ್ರತಿ ಕೌಂಟಿಂಗ್ ಹಾಲ್ ನಲ್ಲಿ ಕೋವಿಡ್ ನಿಯಮಾವಳಿ ಹಿನ್ನೆಲೆಯಲ್ಲಿ ಪ್ರತಿ ಹಾಲ್ನಲ್ಲಿ ತಲಾ 7 ಟೇಬಲ್ಗಳ ವ್ಯವಸ್ಥೆ ಮಾಡಲಾಗಿದೆ. ಮೀಸಲು ಸೇರಿದಂತೆ 40 ಕೌಂಟಿಂಗ್ ಸ್ಟಾಪ್ಗಳ ನೇಮಕ ಮಾಡಿದ್ದು, ಇದರಲ್ಲಿ 20 ಸೂಪರ್ ವೈಸರ್ ಹಾಗೂ 20 ಕೌಂಟಿಂಗ್ ಅಸಿಸ್ಟೆಂಟ್ ಗಳ ನೇಮಕ ಮಾಡಲಾಗುತ್ತಿದೆ. 20 ಕೌಂಟಿಂಗ್ ಮೈಕ್ರೋ ಅಬ್ಸರ್ವರ್ ಇದ್ದು, 20 ಕೌಂಟಿಂಗ್ ಸ್ಟಾಫ ಮತ್ತು ಮೈಕ್ರೋ ಅಬ್ಸರ್ವರಗಳಿಗೆ ತರಬೇತಿ ಸಹ ನೀಡಲಾಗಿದೆ ಎಂದು ಅವರು ಹೇಳಿದರು.
ಚುನಾವಣಾ ಅಕ್ರಮ ತಡೆಯಲು ತೀವ್ರ ನಿಗಾ ಇಡಲಾಗಿದೆ. ಗಡಿಭಾಗದಲ್ಲಿ ಚೆಕ್ ಪೆÇೀಸ್ಟಗಳನ್ನು ಸ್ಥಾಪಿಸಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಈಗಾಗಲೇ ಚುನಾವಣಾ ಸಮೀಕ್ಷೆ, ಮಾಧ್ಯಮಗಳ ಮೂಲಕ ಪ್ರಚಾರದ ನಿಬರ್ಂಧಗಳ ಬಗ್ಗೆ ತಿಳಿಸಲಾಗಿದ್ದು, ಅಕ್ಟೋಬರ್ 29 ಹಾಗೂ 30ರಂದು ಜಾಹಿರಾತಿಗಾಗಿ ಪ್ರೀ ಸರ್ಟಿಫಿಕೇಶನ್ಗಾಗಿ ಯಾವುದೇ ಅರ್ಜಿಗಳು ಸಲ್ಲಿಕೆಯಾಗಿಲ್ಲ ಎಂದು ತಿಳಿಸಿದ ಅವರು ಮಾದರಿ ನೀತಿ ಸಂಹಿತಿ ಉಲ್ಲಂಘಿಸುವವರ ವಿರುದ್ದ ಕಾನೂನುರೀತ್ಯ ಕ್ರಮ ಕೈಗೊಳ್ಳಲಾಗುವುದು. ಮತದಾನ ಸಂದರ್ಭದಲ್ಲಿ ಮತದಾರರಿಗೆ ವಿವಿಧ ವಾಹನಗಳಲ್ಲಿ ಅಭ್ಯರ್ಥಿಗಳ ಮೂಲಕ ಮತದಾರರನ್ನು ಕರೆತಂದು, ಒಯ್ಯುವದನ್ನು ನಿಷೇಧಿಸಿದೆ.
ರಾಜಕೀಯ ಪಕ್ಷಗಳು ವಾಹನ ದುರುಪಯೋಗ ಮಾಡಬಾರದು ಎಂದು ಹೇಳಿದ ಅವರು ಮತದಾರರಲ್ಲಿ ಮತದಾನಕ್ಕಾಗಿ ಜಾಗೃತಿ ಮೂಡಿಸಲು ಈಗಾಗಲೇ ಸ್ವೀಪ್ ಚಟುವಟಿಕೆಗಳ ಮೂಲಕ ಸೂಕ್ತ ಅರಿವು ಮೂಡಿಸಲಾಗುತ್ತಿದೆ. ವಿಕಲಚೇತನ ಮತದಾರರಿಗೆ ಮತದಾನ ಕೇಂದ್ರ ವ್ಯಾಪ್ತಿಯಲ್ಲಿ ನೆರವು ನೀಡಲು ತ್ರಿಚಕ್ರವಾಹನ ಮತ್ತು ಇತರೆ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಸಿಂದಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೋವಿಡ ಲಸಿಕಾಕರಣ ದಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದು, ಶೇ.93 ರಷ್ಟು ಲಸಿಕಾಕರಣ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಆನಂದ್ ಕುಮಾರ್, ಅಪರ ಜಿಲ್ಲಾಧಿಕಾರಿ ರಮೇಶ್ ಕಳಸದ ಉಪಸ್ಥಿತರಿದ್ದರು.