ಗಂಗಾವತಿ: ಅಂಜನಾದ್ರಿ ದರ್ಶನವಾಗದೆ ನಿರಾಸೆಯಿಂದ ವಾಪಸಾಗಿದ್ದ ಪುನೀತ್

*  ಮಲ್ಲಾಪುರ ಪ್ರೌಢ ಶಾಲೆಗೆ ₹1 ಲಕ್ಷ ದೇಣಿಗೆ ನೀಡಿದ್ದರು
*  ಅಂಜನಾದ್ರಿ, ವಾಣಿಭದ್ರೇಶ್ವರ ಪುನೀತ್ ನೆಚ್ಚಿನ ಸ್ಥಳ
*  ಪುನೀತ್ ನಿಧನಕ್ಕೆ ಶಿವರಾಮಗೌಡ ಸಂತಾತ

ಗಂಗಾವತಿ(ಅ.30):  ಕನ್ನಡದ ಕಣ್ಮಣಿ ಪುನೀತ್ ರಾಜಕುಮಾರ(Puneeth Rajkumar) ಅವರು ಇಲ್ಲಿನ ವಾಣಿಭದ್ರೇಶ್ವರ ಮತ್ತು ಆನೆಗೊಂದಿ ಹಂಪಿಯ ಪ್ರದೇಶದಲ್ಲಿ ಚಿತ್ರೀಕರಣ(Shooting) ನಡೆದರೆ ಅಂಜನಾದ್ರಿ ಪರ್ವತಕ್ಕೆ ಬಂದು ಪೂಜೆ ಸಲ್ಲಿಸಿದ ನಂತರ ಚಿತ್ರೀಕರಣಕ್ಕೆ ಮುಂದಾಗುತ್ತಿದ್ದರು. ಅವರ ಸಹೋದರ ಶಿವರಾಜಕುಮಾರ(Shivarajkumar) ಸಹ ಗಂಡುಗಲಿ ಕುಮಾರರಾಮ ಚಿತ್ರೀಕರಣ ಸಂದರ್ಭದಲ್ಲಿ ಅಂಜನಾದ್ರಿಗೆ ಬಂದು ಪೂಜೆ ಸಲ್ಲಿಸಿದ್ದರು.

ಅಂಜನಾದ್ರಿ ಸುತ್ತಲು ಚಿತ್ರಿಕರಣ: 

ಕಳೆದ ವರ್ಷ ಕೊರೋನಾ(Coronavirus) ನಿಯಮಗಳನ್ನು ಸಡಿಲಗೊಳಿಸಿದಾಗ ಗಂಗಾವತಿ(Gangavati) ತಾಲೂಕಿನ ಅಂಜನಾದ್ರಿ ಪರ್ವತದ(Anjanadri Hill) ವಾಣಿಭದ್ರೇಶ್ವರ ಪ್ರದೇಶದಲ್ಲಿ ಅ.17ರಿಂದ 19ರವರೆಗೆ ನಾಯಕನಾಗಿ ನಟಿಸಿದ ಜೇಮ್ಸ್ ಚಿತ್ರೀಕರಣ ನಡೆಯಿತು. ತೆಲುಗು(Telugu) ಖ್ಯಾತ ಚಿತ್ರನಟ ಶ್ರೀಕಾಂತ(Shrikant), ನಟಿ ಪ್ರಿಯಾ ಆನಂದ ನಟಿಸಿದ್ದರು. ವಾಣಿ ಭದ್ರೇಶ್ವರ ದೇವಸ್ಥಾನದ ಆವರಣ, ಬೆಟ್ಟ ಗುಡ್ಡಗಳು, ತುಂಗಭದ್ರಾ ಎಡದಂಡೆ ಕಾಲುವೆ ಪ್ರದೇಶದಲ್ಲಿ ಮೂರು ದಿನಗಳ ಕಾಲ ಚಿತ್ರಿಕರಣ ನಡೆದಿತ್ತು.

 

Puneeth Rajkumar disappointed for Not Anjaneya Swamy Darshan in Anjanadri Hill grg

ಮಲ್ಲಾಪುರ ಶಾಲೆಗೆ ₹1 ಲಕ್ಷ ದೇಣಿಗೆ: 

ಜೇಮ್ಸ್ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ತಾಲೂಕಿನ ಮಲ್ಲಾಪುರ ಗ್ರಾಮಸ್ಥರು(Villegers) ಸಹಕಾರ ನೀಡಿದ್ದರು ಎನ್ನುವ ಕಾರಣಕ್ಕೆ ಪುನೀತ್‌ರಾಜಕುಮಾರ ಅವರು ಸರ್ಕಾರಿ ಪ್ರೌಢ ಶಾಲೆಗೆ(Government School) ₹1 ಲಕ್ಷ ದೇಣಿಗೆ(Donation) ನೀಡಿದ್ದರು. ಶಾಲೆಯ ಪೀಠೋಪಕರಣ ಸೇರಿದಂತೆ 2 ಪ್ರೊಜೆಕ್ಟರ್, 2 ಸ್ಕ್ರೀನ್, 1 ಲ್ಯಾಪ್‌ಟಾಪ್(Laptop), 1 ಹೋಮ್ ಥೇಟರ್, ವಿದ್ಯುತ್ ಸಂಪರ್ಕ ಕೈಗೊಳ್ಳುವುದಕ್ಕೆ ದೇಣಿಗೆ ನೀಡಿ ವಿದ್ಯಾರ್ಥಿಗಳಿಗೆ(Students) ಉತ್ತಮ ಶಿಕ್ಷಣ(Education) ಪಡೆಯರಿ ಎಂದು ಸಲಹೆ ನೀಡಿದ್ದರು.

ಅಂಜನಾದ್ರಿ ದರ್ಶನ ಸಿಗಲಿಲ್ಲ: 

ಕೊರೋನಾ ಹಿನ್ನೆಲೆಯಲ್ಲಿ ನಾಲ್ಕು ತಿಂಗಳ ಹಿಂದೆ ದೇವಸ್ಥಾನಗಳ(Temples) ಪ್ರವೇಶ ನಿಷೇಧಿಸಲಾಗಿತ್ತು. ಆ ಸಂದರ್ಭದಲ್ಲಿ ಆಗಮಿಸಿದ್ದ ಪುನೀತ್ ದೇವರ ದರ್ಶನವಾಗದೆ ವಾಪಸಾಗಿದ್ದರು. ಈ ಸಂದರ್ಭದಲ್ಲಿ ನಿರಾಶರಾಗಿದ್ದ ಪುನೀತ್ ಬೆಟ್ಟದ ಕೆಳಗೆ ನಿಂತು ಕೋತಿಗಳಿಗೆ ಹಣ್ಣು ತಿನಿಸಿ ಭಕ್ತಿ ಸಮರ್ಪಿಸಿದ್ದರು. ಗಂಗಾವತಿ ಪ್ರದೇಶ ಪುನೀತ್ ರಾಜಕುಮಾರ ಅವರು ಅಚ್ಚುಮೆಚ್ಚಿನ ಸ್ಥಳವಾಗಿತ್ತು. ಅವರ ನೆನಪು ಅಭಿಮಾನಿಗಳಲ್ಲಿ ಅಚ್ಚಳಿಯಾಗಿ ಉಳಿದಿದೆ ವಾಣಿಭದ್ರೇಶ್ವರ ದೇವಸ್ಥಾನದ ಸುತ್ತಲೂ ಮೂರು ದಿನಗಳ ಕಾಲ ಜೇಮ್ಸ್ ಚಿತ್ರ ಚಿತ್ರೀಕರಣಗೊಂಡಿತ್ತು. ಇದರ ಸವಿನೆನಪಿಗಾಗಿ ಚಿತ್ರನಟ ಪುನೀತ್ ರಾಜಕುಮಾರ ಅವರು ಮಲ್ಲಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ₹1 ಲಕ್ಷ ನೀಡಿದ್ದರು. ಅವರು ನೀಡಿದ ದೇಣಿಗೆಯಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪೀಠೋಪಕರಣಗಳನ್ನು ಖರೀದಿಸಲಾಗಿದೆ. ಈಗ ಅವರ ನೆನಪು ಮಾತ್ರ ಮಕ್ಕಳಲ್ಲಿ ಉಳಿದಿದೆ ಅಂತ ಮಲ್ಲಾಪುರ ಸರ್ಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಯರು ಡಾ.ಹುಸೇನಪ್ಪ ತಿಳಿಸಿದ್ದಾರೆ.

 

ಕರವೇ ಕಾರ್ಯಕರ್ತರಿಂದ ಶ್ರದ್ಧಾಂಜಲಿ

ಖ್ಯಾತ ಚಿತ್ರ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ ನಿಧನದ(Death) ಹಿನ್ನೆಲೆಯಲ್ಲಿ ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ವಿಧಾನ ಪರಿಷತ್ ಮಾಜಿ ಸದಸ್ಯ ಎಚ್. ಆರ್.ಶ್ರೀನಾಥ ಪುನೀತ್ ಭಾವಚಿತ್ರಕ್ಕೆ ಪುಷ್ಪ ಗುಚ್ಚ ಅರ್ಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪುನೀತ್ ಅವರು ತಮ್ಮ ಸಂಬಂಧಿಗಳಾಗಿದ್ದು, ಅವರು ಚಿತ್ರರಂಗದಲ್ಲಿ(Film Industry) ಉತ್ತಮ ಹೆಸರು ಪಡೆದಿದ್ದರು. ಅವರ ತಂದೆ ಡಾ.ರಾಜಕುಮಾರ(Dr Rajkumar) ಮಾರ್ಗದರ್ಶದಲ್ಲಿ ಪುನೀತ್ ಮುಂದೆ ಸಾಗಿದ್ದರು. ಅವರ ನಿಧನದಿಂದ ಚಿತ್ರೋದ್ಯಮಕ್ಕೆ ಭಾರಿ ನಷ್ಟವಾಗಿದೆ. ಅವರ ಕುಟಂಬಕ್ಕೆ ಭಗವಂತ ಧೈರ್ಯ ನೀಡಲಿ ಎಂದು ಸಂತಾಪ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕರವೇ ಮುಖಂಡ ಪಂಪಣ್ಣ ನಾಯಕ, ಅರ್ಜುನ್ ನಾಯಕ, ವಿರೂಪಾಕ್ಷಗೌಡ, ಬಳ್ಳಾರಿ ರಾಮಣ್ಣ ನಾಯಕ, ಚೆನ್ನಬಸವ ಜೇಕಿನ್, ರಾಜೇಶ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.

2020ರ ಅ. 22 ರಂದು ಸ್ಯಾಂಡಲ್‌ವುಡ್‌ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಐತಿಹಾಸಿಕ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಆಂಜನೇಯ ಸ್ವಾಮಿಯ ದರ್ಶನವನ್ನ ಪಡೆದುಕೊಂಡಿದ್ದರು. ಬರೋಬ್ಬರಿ 600 ಮೆಟ್ಟಿಲುಗಳನ್ನು ಏರಿ ಆಂಜನೇಯ ಸ್ವಾಮಿ ದರ್ಶನವನ್ನ ಪಡೆದುಕೊಂಡು, ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *