ಬೆಳಗಾವಿ: ಪುನೀತ್‌ ರಾಜಕುಮಾರ್‌ ನಿಧನ, ಮನನೊಂದು ಇಬ್ಬರು ಯುವಕರ ಸಾವು

*  ಕಂಬನಿ ಮಿಡಿದ ಕೆಎಂಎಫ್‌ ಅಧ್ಯಕ್ಷ ಜಾರಕಿಹೊಳಿ
*  ಅಪ್ಪುವಿನ ಅಪ್ಪಟ ಅಭಿಮಾನಿಗಳಾಗಿದ್ದ ಯುವಕರು
*  ಪುನೀತ್‌ ಪಾರ್ಥೀವ ಶರೀರ ನೋಡಿ  ಬಿಕ್ಕಿಬಿಕ್ಕಿ ಅತ್ತಿದ್ದ ಅಭಿಮಾನಿ

 

ಬೆಳಗಾವಿ(ಅ.30):  ಕನ್ನಡ ಚಿತ್ರರಂಗದ(Sandalwood) ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರ ಅಕಾಲಿಕ ನಿಧನದ ಸುದ್ದಿಯಿಂದ ಮನನೊಂದ ಇಬ್ಬರು ಯುವಕರು ಸಾವಿಗೀಡಾದ ಘಟನೆ ಜಿಲ್ಲೆಯಲ್ಲಿ ಇಂದು(ಶನಿವಾರ) ನಡೆದಿದೆ.

ಅಪ್ಪು ಅಗಲಿಕೆಯಿಂದ ರಾಹುಲ್ ಗಾಡಿವಡ್ಡರ ಆತ್ಮಹತ್ಯೆ ಮಾಡಿಕೊಂಡರೆ, ಪರುಶರಾಮ ಹನುಮಂತ ದೇಮಣ್ಣವರ ಎಂಬ ಯುವಕ ಹೃದಯಾಘಾತದಿಂದ(Heart Attack) ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಪುನೀತ್‌ ರಾಜಕುಮಾರ್‌(Puneeth Rajkumar) ನಿಧನದಿಂದ(Death) ಅವರ ಅಭಿಮಾನಿಗಳಿಗೆ ಶಾಕ್ ಆಗಿದೆ. ಬೆಳಗಾವಿ(Belagavi) ಜಿಲ್ಲೆಯ ಅಭಿಮಾನಿಯೊಬ್ಬ(Fan) ಪುನೀತ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

 

ಪುನೀತ್ ರಾಜಕುಮಾರ ಅವರ ಕಟ್ಟಾ ಅಭಿಮಾನಿಯಾದ ರಾಹುಲ್ ಗಾಡಿವಡ್ಡರ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಬೆಳಗಾವಿ ಜಿಲ್ಲೆಯ ಅಥಣಿ(Athani) ಪಟ್ಟಣದಲ್ಲಿ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಅಥಣಿ ಪೋಲಿಸ್(Police) ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹೃದಯಾಘಾತದಿಂದ ಅಭಿಮಾನಿ ಸಾವು 

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿಧನದ ಸುದ್ದಿ ಕೇಳಿ ಹೃದಯಾಘಾತದಿಂದ ಬೆಳಗಾವಿಯ ಅಭಿಮಾನಿಯೋರ್ವ ಸಾವಿಗೀಡಾದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ. ಅಪ್ಪುವಿನ ಅಪ್ಪಟ ಅಭಿಮಾನಿ ಆಗಿದ್ದ ಶಿಂಧೋಳ್ಳಿ ಗ್ರಾಮದ ಕನಕದಾಸ ನಗರದ ಪರುಶರಾಮ ಹನುಮಂತ ದೇಮಣ್ಣವರ(33) ಎಂಬ ಯುವಕ ಕೊನೆಯುಸಿರೆಳೆದಿದ್ದಾನೆ.

Two Fans Dies Due to Puneeth Rajkumar Passedaway in Belagavi grg

ಪುನೀತ್ ರಾಜಕುಮಾರ ಸಾವಿನ ಸುದ್ದಿ ಕೇಳಿ ಶುಕ್ರವಾರ ಸಂಜೆಯಿಂದ ಟಿವಿ ಎದುರು ಕುಳಿತಿದ್ದನು. ಸಾವಿನಿಂದ ಆಘಾತಗೊಂಡು ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಮಾಳಿ ಕೆಲಸ ಮಾಡುತ್ತಿದ್ದ ಪರುಶರಾಮ ದೇಮಣ್ಣವರ ಶಿವರಾಜಕುಮಾರ ಹಾಗೂ ಪುನೀತ್ ರಾಜಕುಮಾರ ಅವರ ಅಪ್ಪಟ ಅಭಿಮಾನಿ ಆಗಿದ್ದನು ಎಂದು ತಿಳಿದು ಬಂದಿದೆ.

 

ಚಿತ್ರ ಬಿಡುಗಡೆ(Realease) ಆದಾಗ ಮೊದಲ ಶೋ ನೋಡಲು ಹೋಗುತ್ತಿದ್ದನು. ಶುಕ್ರವಾರ ಕೆಲಸ ಮುಗಿಸಿಕೊಂಡು ಬಂದು ಟಿವಿ ಎದುರು ಕುಳಿತಿದ್ದನು. ಅಪ್ಪುವಿನ ಪಾರ್ಥೀವ ಶರೀರ(Deadbody) ನೋಡಿ  ಬಿಕ್ಕಿ ಬಿಕ್ಕಿ ಅಳುತ್ತಿದ್ದನು. ಶುಕ್ರವಾರ ರಾತ್ರಿ ಆಘಾತಗೊಂಡು ಸಾವನ್ನಪ್ಪಿದ್ದಾನೆ ಎಂದು ಗ್ರಾಮಸ್ಥರು(Villagers) ತಿಳಿಸಿದ್ದಾರೆ.

ಕಂಬನಿ ಮಿಡಿದ ಕೆಎಂಎಫ್‌ ಅಧ್ಯಕ್ಷ ಜಾರಕಿಹೊಳಿ

ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ನಿಧನದ ಸುದ್ದಿ ಕೇಳಿ ಕೆಎಂಎಫ್‌(KMF) ಅಧ್ಯಕ್ಷ, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ(Balchandra Jarkiholi) ಕಣ್ಣೀರು ಹಾಕಿ​ದ ಘಟನೆ ನಡೆಯಿತು. ಅಲ್ಲದೆ ಕೆಎಂಎಫ್‌ ಕಾರ್ಯಕ್ರಮವನ್ನು ಅರ್ಧದಲ್ಲೇ ಮೊಟಕುಗೊಳಿಸಲಾಯಿತು.

‘ಕರ್ನಾಟಕದ(Karnataka) ಹೆಮ್ಮೆಯ ಪುನೀತ ರಾಜಕುಮಾರ ನಿಧನರಾಗಿದ್ದಾರೆ ಎಂದು ತಿಳಿದು ದುಃಖವಾಯಿತು. ಕೆಎಂಎಫ್‌ ಪರವಾಗಿ ಪುನೀತ್‌ಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಪುನೀತ್‌ ರಾಜಕುಮಾರ್‌ಗೆ ನಂದಿನಿ, ಕೆಎಂಎಫ್‌ ಬಗ್ಗೆ ಬಹಳ ಗೌರವ ಇತ್ತು. ಕೆಎಂಎಫ್‌ ಬೆಳೆಯಲು ಡಾ. ರಾಜಕುಮಾರ್‌, ಪುನೀತ್‌ ಸಹಕ​ರಿ​ಸಿ​ದ​ರು, ಉಳಿಸಿದರು’ ಎಂದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *