ಕಲಬುರಗಿ ವಿಜನ್-2050 ಮೂಲಕ ವಿವಿಧ ಕ್ಷೇತ್ರ ಅಭಿವೃದ್ಧಿ : ಸಚಿವ ಮುರುಗೇಶ ಆರ್.ನಿರಾಣಿ

ಕಲಬುರಗಿ:ನ.02 (ಕ.ವಾ.)-ಕಲಬುರಗಿ ವಿಜನ್-2050 ಮೂಲಕ ಮುಂದಿನ 30 ವರ್ಷಗಳಲ್ಲಿ ಜಿಲ್ಲೆಯಲ್ಲಿ ಶಿಕ್ಷಣ, ಕೈಗಾರಿಕೆ ಕೃಷಿ, ಮೂಲಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ಆರ್. ನಿರಾಣಿ ಅವರು ತಿಳಿಸಿದರು.
ಮಂಗಳವಾರದಂದು ಚಿಂಚೋಳಿ ತಾಲೂಕಿನ ಸೇಡಂ ಮತಕ್ಷೇತ್ರದ ಸುಲೇಪೇಟ ಗ್ರಾಮದಲ್ಲಿ 286.50 ಲಕ್ಷ ರೂ. ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉತ್ನತೀಕರಿಸುವ ನೂತನ ಕಟ್ಟಡ ಹಾಗೂ ಇತರೆ ವಿವಿಧ ಕಾಮಗಾರಿ ಉದ್ಪಾಟಿಸಿ ಅವರು ಮಾತನಾಡಿದರು.
ಕಲಬುರಗಿ ಜಿಲ್ಲೆಯಲ್ಲಿ ಇಸ್ರೇಲ್ ಮಾದರಿಯ ತೋಟಗಾರಿಕೆ ಮಾಡಲು ಸದ್ಯದಲ್ಲೇ ತಜ್ಞರ ತಂಡ ಬಂದು ತರಬೇತಿ ನೀಡಲಿದೆ ಹಾಗೂ ವಿಮಾನ ತಯಾರಿಕಾ ಕಂಪನಿಗೆ ಕಲಬುರಗಿಯಲ್ಲಿ ವಿಮಾನ ಬಿಡಿ ಭಾಗ ತಯಾರಿಕೆ ಘಟಕ ಸ್ಥಾಪಿಸಲು ಆಹ್ವಾನ ನೀಡಲಾಗಿದೆ. ಅಭಿವೃದ್ಧಿಗಾಗಿ ನಾವೆಲ್ಲರೂ ಒಗ್ಗೂಡಿ ಎಲ್ಲಾ ಕೆಲಸಗಳನ್ನು ಮಾಡಬೇಕಾಗುತ್ತದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾದ ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿ, ಕೋವಿಡ್ ಮತ್ತು ಇನ್ನಿತರ ಸಮಸ್ಯೆಗಳಿಂದ ಹಲವಾರು ದಿನಗಳಿಂದ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿರಲಿಲ್ಲ. ಈಗ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉತ್ನತಿಕರಿಸಿದ್ದೇವೆ. ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಅವರು ಕೋರಿದರು.


ಮುಂಬರುವ ದಿನಗಳಲ್ಲಿ ಸುಲೇಪೇಟ್ ಗ್ರಾಮಕ್ಕೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸÀಲಾಗುವುದು ಎಂದು ಅವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕಲಬುರಗಿ ಗ್ರಾಮೀಣ ಶಾಸಕರಾದ ಬಸವರಾಜ ಮತ್ತಿಮಡು, ಚಿಂಚೋಳಿ ಶಾಸಕರಾದ ಡಾ: ಅವಿನಾಶ ಉಮೇಶ ಜಾಧವ, ವಿಧಾನ ಪರಿಷತ್ ಶಾಸಕರಾದ ಡಾ.ಬಿ.ಜಿ. ಪಾಟೀಲ, ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಕೃಷ್ಣ ಮೇಲ್ದಂಡೆ ಯೋಜನೆ (ಕಾಡಾ) ಅಧ್ಯಕ್ಷರಾದ ಶ್ರೀ ಶರಣಪ್ಪ ತಳವಾರ, ಗ್ರಾಮ ಪಂಚಾಯತ ಉಪಾಧ್ಯಕ್ಷೆ ಸರಸ್ವತಿ ಮಲ್ಲಿಕಾರ್ಜುನ ಗಿರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಲೀಷ ಶಶಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಮಾಣಿಕ್‍ರಾವ್ ಕಣಕಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಶರಣಬಸಪ್ಪ ಗಣಜಲಖೇಡ, ತಾಲೂಕ ಆರೋಗ್ಯಾಧಿಕಾರಿ ಡಾ: ಮಹ್ಮದ್ ಗಫಾರ, ವೈದ್ಯಾಧಿಕಾರಿ ಡಾ: ವಿಜಯಕುಮಾರ ಜಾಪಟ್ಟಿ, ತಹಶೀಲ್ದಾರ ಅಂಜುಮ್ ತಬ್ಸಮ್ ಸೇರಿದಂತೆ ವೈದರುಗಳು ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *