PIB Fact Check: ಕೇಂದ್ರ ಸರ್ಕಾರದ ಹೆಸರಲ್ಲಿ ನಡೆಯುತ್ತಿರುವ ಈ ಯೋಜನೆ ಬಗ್ಗೆ ಇರಲಿ ಎಚ್ಚರ! ಇಲ್ಲಿದೆ ಸತ್ಯಾಸತ್ಯತೆ

PIB Fact Check: ವಾಟ್ಸ್‌ಆ್ಯಪ್‌ನಲ್ಲಿ ಸಂದೇಶವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ಕೇಂದ್ರ ಸರ್ಕಾರ ಜನರಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ವಿತರಿಸುತ್ತಿದೆ ಎಂದು ಹೇಳಲಾಗಿದೆ. ಸರ್ಕಾರ ತನ್ನ ಯೋಜನೆಯಡಿ ಜನರಿಗೆ ಉಚಿತ ಲ್ಯಾಪ್‌ಟಾಪ್ (Free Laptop)  ನೀಡುತ್ತಿದೆ ಎಂದು ಈ ಸಂದೇಶದಲ್ಲಿ ತಿಳಿಸಲಾಗಿದೆ. ಆದರೆ ಪ್ರಶ್ನೆಯೆಂದರೆ, ಸರ್ಕಾರ ನಿಜವಾಗಿಯೂ ಅಂತಹ ಯಾವುದೇ ಯೋಜನೆಯನ್ನು ಘೋಷಿಸಿದೆಯೇ? ಪಿಐಬಿ ಫ್ಯಾಕ್ಟ್ ಚೆಕ್ ಹಲವು ತನಿಖೆಗಳ ನಂತರ ಈ ವೈರಲ್ ಸಂದೇಶದ ಬಗ್ಗೆ ಮಾಹಿತಿ ನೀಡಿದೆ.

ಸಂದೇಶದಲ್ಲಿ ಏನು ಹೇಳಲಾಗಿದೆ?
ಈ ವೈರಲ್ ಸಂದೇಶದ ಬಗ್ಗೆ ತನಿಖೆ ನಡೆಸಿದ ಪಿಐಬಿ ಫ್ಯಾಕ್ಟ್ ಚೆಕ್ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ಮಾಹಿತಿಯನ್ನು ನೀಡಿದ್ದು, ಪ್ರಧಾನಿ ಉಚಿತ ಲ್ಯಾಪ್‌ಟಾಪ್ (Free Laptop) ವಿತರಣಾ ಯೋಜನೆಯಡಿ ಎಲ್ಲರಿಗೂ ಉಚಿತ ಲ್ಯಾಪ್‌ಟಾಪ್ ನೀಡಲಾಗುತ್ತಿದೆ ಎಂದು ಸಂದೇಶದಲ್ಲಿ ಹೇಳಲಾಗುತ್ತಿದೆ. ಇದನ್ನು ನಕಲಿ ವಾಟ್ಸಾಪ್ ಸಂದೇಶ ಎಂದು ಪಿಐಬಿ ಹೇಳಿದೆ.

 

ಹಾಗಾಗಿ ಇಂತಹ ನಕಲಿ ಸಂದೇಶಗಳ (Fake Message) ಬಗ್ಗೆ ಎಚ್ಚರದಿಂದಿರಿ. ಈ ನಕಲಿ ಸಂದೇಶಗಳನ್ನು ಹಂಚಿಕೊಳ್ಳದಂತೆ ಅಥವಾ ಫಾರ್ವರ್ಡ್ ಮಾಡದಂತೆಯೂ ಕೇಳಲಾಗಿದೆ. ಇದರೊಂದಿಗೆ, ಅಂತಹ ಯಾವುದೇ ಲಿಂಕ್ ಮತ್ತು ವೆಬ್‌ಸೈಟ್‌ನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳದಂತೆ ಸೂಚಿಸಲಾಗಿದೆ.

PIB ಎಚ್ಚರಿಕೆಗಳು!
ಈ ಜಾಹೀರಾತನ್ನು ನೀವು ಎಲ್ಲೋ ನೋಡಿದ್ದರೆ ಅಥವಾ ವಾಟ್ಸಾಪ್‌ನಲ್ಲಿ ನಿಮಗೆ ಕಳುಹಿಸಿದರೆ, ಅದನ್ನು ನಂಬಬೇಡಿ ಎಂದು ಪಿಐಬಿ ಎಚ್ಚರಿಸಿದೆ. ಇದರಲ್ಲಿ ನೀಡಿರುವ ಸಂಖ್ಯೆಗೆ ಯಾವುದೇ SMS ಕಳುಹಿಸಬೇಡಿ ಮತ್ತು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಹೀಗೆ ಮಾಡುವುದರಿಂದ ನೀವು ವಂಚನೆಗೆ ಬಲಿಯಾಗಬಹುದು. ಇದರೊಂದಿಗೆ ಈ ವಂಚನೆಯ ಬಗ್ಗೆ ಇತರರಿಗೂ ಅರಿವು ಮೂಡಿಸಿ. ಇತ್ತೀಚಿನ ದಿನಗಳಲ್ಲಿ ವಂಚನೆ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ ಎಂದು ಹೇಳಲಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *