Petrol and Diesel Price Today: ಬೆಂಗಳೂರು ಸೇರಿ ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಏರಿಳಿತ: ಎಲ್ಲೆಲ್ಲಿ ಬೆಲೆ ಎಷ್ಟಿದೆ ನೋಡಿ!

Petrol and Diesel Price Today: ಕೇಂದ್ರ ಹಾಗೂ ರಾಜ್ಯ ಸರ್ಕಾರದ ದೀಪಾವಳಿ ಕೊಡುಗೆಯಾಗಿ ಪೆಟ್ರೋಲ್‌, ಡೀಸೆಲ್‌ ಮೇಲಿನ ಸುಂಕವನ್ನು ಕಡಿತಗೊಳಿಸಿದ್ದವು. ಇದರ ಪರಿಣಾಮವಾಗಿ ಪೆಟ್ರೋಲ್‌(Petrol), ಡೀಸೆಲ್‌(Diesel) ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ.ಎಲ್​ಪಿಜಿ ಬೆಲೆ (LPG) ಏರಿಕೆಯಿಂದ ಕಂಗಾಲಾಗಿದ್ದ ಜನ ದಿನನಿತ್ಯ ಏರುತ್ತಿದ್ದ ಪೆಟ್ರೋಲ್-ಡೀಸೆಲ್ ಬೆಲೆಯಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದರು. ಈ ಹಿನ್ನೆಲೆ ಜನ ಸಾಮಾನ್ಯರಿಗೆ ತೈಲ ದರದ ಹೊರೆ ಸ್ವಲ್ಪ ಕಡಿಮೆಯಾಗಿದೆ. ಆದರೆ, ಇಂದು ಬೆಂಗಳೂರಿ(Bengaluru)ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕಂಡಿದೆ. ಉಳಿದ ಹಲವು ಜಿಲ್ಲೆಗಳಲ್ಲಿ ಏರಿಳಿತ ಕಂಡಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.67 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.10 ರೂ. ಗೆ ಮಾರಾಟ ಮಾಡಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ಕುರಿತ ವಿವರ ಇಲ್ಲಿದೆ.

 

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ;

ಬಾಗಲಕೋಟೆ – 101.14 ರೂ. (6 ಪೈಸೆ ಏರಿಕೆ)
ಬೆಂಗಳೂರು – 100.67 ರೂ. (9 ಪೈಸೆ ಏರಿಕೆ)
ಬೆಂಗಳೂರು ಗ್ರಾಮಾಂತರ -100.65 ರೂ. (00)
ಬೆಳಗಾವಿ – 100.74 ರೂ. (89 ಪೈಸೆ ಇಳಿಕೆ )
ಬಳ್ಳಾರಿ – 101.80 ರೂ. (43 ಪೈಸೆ ಇಳಿಕೆ)
ಬೀದರ್ – 101.09 ರೂ. (3 ಪೈಸೆ ಇಳಿಕೆ)
ಬಿಜಾಪುರ – 100.50 ರೂ. (24 ಪೈಸೆ ಇಳಿಕೆ)
ಚಾಮರಾಜನಗರ – 100.71 ರೂ. (11 ಪೈಸೆ ಏರಿಕೆ )
ಚಿಕ್ಕಬಳ್ಳಾಪುರ – 101.06 ರೂ. (74 ಪೈಸೆ ಏರಿಕೆ )
ಚಿಕ್ಕಮಗಳೂರು – 101.32 ರೂ. (64 ಪೈಸೆ ಇಳಿಕೆ)
ಚಿತ್ರದುರ್ಗ – 102.34 ರೂ. (7 ಪೈಸೆ ಇಳಿಕೆ)
ದಕ್ಷಿಣ ಕನ್ನಡ – 100.81 ರೂ. (1.05 ರೂ. ಏರಿಕೆ)
ದಾವಣಗೆರೆ – 102.22 ರೂ. (41 ಪೈಸೆ ಇಳಿಕೆ)
ಧಾರವಾಡ – 100.31 ರೂ. (21 ಪೈಸೆ ಇಳಿಕೆ)
ಗದಗ – 101.38 ರೂ. (48 ಪೈಸೆ ಏರಿಕೆ)
ಗುಲಬರ್ಗ – 100.28 ರೂ. (00)
ಹಾಸನ – 100.39 ರೂ. (00)
ಹಾವೇರಿ – 101.28 ರೂ. (7 ಪೈಸೆ ಏರಿಕೆ )
ಕೊಡಗು – 101.89 ರೂ. (3 ಪೈಸೆ ಏರಿಕೆ)
ಕೋಲಾರ – 100.55 ರೂ. (9 ಪೈಸೆ ಇಳಿಕೆ)
ಕೊಪ್ಪಳ- 101.40 ರೂ. (40 ಪೈಸೆ ಇಳಿಕೆ)
ಮಂಡ್ಯ – 100.08 ರೂ. (38 ಪೈಸೆ ಇಳಿಕೆ)
ಮೈಸೂರು – 100.56 ರೂ. (48 ಪೈಸೆ ಏರಿಕೆ )
ರಾಯಚೂರು – 100.44 ರೂ. (80 ಪೈಸೆ ಇಳಿಕೆ)
ರಾಮನಗರ – 101.32 ರೂ. (26 ಪೈಸೆ ಏರಿಕೆ)
ಶಿವಮೊಗ್ಗ – 101.65 ರೂ. (20 ಪೈಸೆ ಇಳಿಕೆ)
ತುಮಕೂರು – 100.95 ರೂ. (16 ಪೈಸೆ ಇಳಿಕೆ)
ಉಡುಪಿ – 100.46 ರೂ. (38 ಪೈಸೆ ಏರಿಕೆ)
ಉತ್ತರಕನ್ನಡ – 101.02 ರೂ (46 ಪೈಸೆ ಇಳಿಕೆ)
ಯಾದಗಿರಿ – 100.91 ರೂ. (49 ಪೈಸೆ ಇಳಿಕೆ)

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

ಬಾಗಲಕೋಟೆ – 85.54
ಬೆಂಗಳೂರು – 85.10
ಬೆಂಗಳೂರು ಗ್ರಾಮಾಂತರ – 85.07
ಬೆಳಗಾವಿ – 85.18
ಬಳ್ಳಾರಿ – 86.15
ಬೀದರ್ – 85.50
ಬಿಜಾಪುರ – 84.96
ಚಾಮರಾಜನಗರ – 85.12
ಚಿಕ್ಕಬಳ್ಳಾಪುರ – 85.45
ಚಿಕ್ಕಮಗಳೂರು – 85.58
ಚಿತ್ರದುರ್ಗ – 86.53
ದಕ್ಷಿಣ ಕನ್ನಡ – 84.24
ದಾವಣಗೆರೆ – 86.37
ಧಾರವಾಡ – 84.79
ಗದಗ – 85.76
ಗುಲಬರ್ಗ – 84.77
ಹಾಸನ – 84.72
ಹಾವೇರಿ – 85.66
ಕೊಡಗು – 86.06
ಕೋಲಾರ – 84.99
ಕೊಪ್ಪಳ- 85.79
ಮಂಡ್ಯ – 84.56
ಮೈಸೂರು –84.99
ರಾಯಚೂರು – 84.93
ರಾಮನಗರ – 85.69
ಶಿವಮೊಗ್ಗ – 85.89
ತುಮಕೂರು – 85.34
ಉಡುಪಿ – 84.87
ಉತ್ತರಕನ್ನಡ – 85.43
ಯಾದಗಿರಿ – 85.33

ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 101.40 ರೂ ಇದ್ದರೆ ಡೀಸೆಲ್​ ಬೆಲೆ 91.43 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 103.97 ರೂ ಮತ್ತು ಡೀಸೆಲ್ 86.67 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 109.98 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 94.14 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 104.67 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 89.79 ರೂ.ಗೆ ಮಾರಾಟ ಮಾಡಲಾಗುತ್ತಿದೆ.

 

ಭಾರತದಲ್ಲಿ ಪೆಟ್ರೋಲ್ ದರಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಪ್ರತಿದಿನ ಬೆಳಗ್ಗೆ 06:00 ಗಂಟೆಗೆ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಜಾಗತಿಕ ತೈಲ ಬೆಲೆಯಲ್ಲಿ ಒಂದು ನಿಮಿಷದ ವ್ಯತ್ಯಾಸವನ್ನು ಇಂಧನ ಬಳಕೆದಾರರು ಮತ್ತು ವಿತರಕರಿಗೆ ರವಾನಿಸಬಹುದು ಎಂದು ಇದು ಖಚಿತಪಡಿಸುತ್ತದೆ. ಇಂಧನದ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಅನ್ನು ಒಳಗೊಂಡಿದೆ. ವ್ಯಾಟ್ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.

 

ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ವ್ಯಾಟ್ ಸೇರಿಸಿದ ನಂತರ, ಪೆಟ್ರೋಲ್‌ನ ಚಿಲ್ಲರೆ ಮಾರಾಟ ಬೆಲೆ ದ್ವಿಗುಣಗೊಳ್ಳುತ್ತದೆ. ವಿವಿಧ ಅಂಶಗಳು ಇಂಧನದ ಬೆಲೆಯ ಮೇಲೆ ಪ್ರಭಾವ ಬೀರುತ್ತವೆ. ಇವುಗಳಲ್ಲಿ ರೂಪಾಯಿಗಳಿಂದ ಯುಎಸ್ ಡಾಲರ್ ವಿನಿಮಯ ದರ, ಕಚ್ಚಾ ತೈಲದ ಬೆಲೆ, ಜಾಗತಿಕ ಸೂಚನೆಗಳು, ಇಂಧನದ ಬೇಡಿಕೆ ಇತ್ಯಾದಿಗಳು ಸೇರಿವೆ. ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆಗಳು ಹೆಚ್ಚಾದಾಗ ಭಾರತದಲ್ಲೂ ಸಾಮಾನ್ಯವಾಗಿ ಬೆಲೆ ಏರಿಕೆಯಾಗುವುದು ವಾಡಿಕೆಯಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *