Mangaluru| ಕೇರಳಕ್ಕಿಂತ ಕರ್ನಾಟಕದಲ್ಲಿ ಪೆಟ್ರೋಲ್‌ ಅಗ್ಗ: ಗಡಿ ಬಂಕ್‌ಗೆ ಮುಗಿಬಿದ್ದ ಜನರು..!

*  ಕರ್ನಾಟಕ ಗಡಿಯ ಬಂಕ್‌ಗಳಲ್ಲಿ ಇಂಧನ ದರ ಇಳಿಕೆ ಪ್ರಚಾರ ಸಕ್ಸಸ್‌!
*  ಗ್ರಾಹಕರ ಸಂಖ್ಯೆಯಲ್ಲಿ ಶೇ.60ರಷ್ಟು ಹೆಚ್ಚಳ
*  ಬ್ಯಾನರ್‌ ಕೇರಳದಲ್ಲಿ ವೈರಲ್‌

ಮಂಗಳೂರು(ನ.11):  ಕೇಂದ್ರ ಹಾಗೂ ಕರ್ನಾಟಕ ಸರ್ಕಾರ ಇಂಧನ ಸುಂಕ ಇಳಿಕೆ ಮಾಡಿದ ಬೆನ್ನಲ್ಲೇ ಇದೀಗ ಕೇರಳ ಗಡಿಯಲ್ಲಿರುವ ಕರ್ನಾಟಕದ ಪೆಟ್ರೋಲ್‌ ಬಂಕ್‌ಗಳು ಕೇರಳದ ಗ್ರಾಹಕರನ್ನು ಸೆಳೆಯಲು ದರ ಇಳಿಕೆಯ ಪ್ರಚಾರ ನಡೆಸುತ್ತಿರುವುದು ಗಮನ ಸೆಳೆದಿದೆ.

ಕೇಂದ್ರ ಸರ್ಕಾರ (Central Government)ಇಂಧನ ಸುಂಕ ಇಳಿಕೆ(Fuel Price) ಮಾಡಿದಂದೇ ಕರ್ನಾಟಕ ಸರ್ಕಾರವೂ(Government of Karnataka) ಪೆಟ್ರೋಲ್‌(Diesel), ಡೀಸೆಲ್‌ಗೆ ತಲಾ 7 ರು.ನಷ್ಟು ಸುಂಕ ಕಡಿತ ಮಾಡಿತ್ತು. ಆದರೆ ಕೇರಳ ಸರ್ಕಾರ(Government of Kerala) ಸುಂಕ ಕಡಿತ ಮಾಡದೆ ಇರುವುದರಿಂದ ಕರ್ನಾಟಕದ ಪೆಟ್ರೋಲ್‌(Petrol) ಬಂಕ್‌ಗಳಿಗಿಂತ ಕೇರಳದಲ್ಲಿ ಡೀಸೆಲ್‌ ಲೀ.ಗೆ 8 ರು., ಪೆಟ್ರೋಲ್‌ಗೆ 5 ರು.ನಷ್ಟುದರ ಹೆಚ್ಚಿದೆ. ಇದರ ಲಾಭ ಪಡೆಯಲು ಕರ್ನಾಟಕದ ಪೆಟ್ರೋಲ್‌ ಬಂಕ್‌ಗಳು(Petrol Bunk) ದರ ಇಳಿಕೆಯ ಬ್ಯಾನರ್‌ಗಳನ್ನು ಅಳವಡಿಸುತ್ತಿವೆ.

 

ಫುಲ್‌ ಟ್ಯಾಂಕ್‌ ಹಾಕಿ ಹೋಗ್ತಾರೆ: 

ಈಶ್ವರಮಂಗಲ ಸಮೀಪದ ಗಾಳಿಮುಖ ಪೆಟ್ರೋಲ್‌ ಬಂಕ್‌ನಲ್ಲಿ ಈ ರೀತಿಯ ಬ್ಯಾನರ್‌ ಅಳವಡಿಸಿದ್ದು, ಇದರ ಫೋಟೊ ಕೇರಳದಲ್ಲಿ ವ್ಯಾಪಕವಾಗಿ ವೈರಲ್‌ ಆಗಿದೆ. ಕರ್ನಾಟಕದಲ್ಲಿ(Karnataka) ಇಂಧನ ದರ ಇಳಿಕೆಯ ಬಳಿಕ ಕೇರಳದಿಂದ ಬರುವ ಗ್ರಾಹಕರ(Customers) ಸಂಖ್ಯೆಯಲ್ಲಿ ಶೇ.60ರಷ್ಟು ಏರಿಕೆಯಾಗಿದೆ. ಅನೇಕರು ದೂರದೂರುಗಳಿಂದ ಬಂದು ಫುಲ್‌ ಟ್ಯಾಂಕ್‌ ಇಂಧನ ತುಂಬಿಸಿ ಹೋಗುತ್ತಿದ್ದಾರೆ ಎಂದು ಬಂಕ್‌ನ ಮ್ಯಾನೇಜರ್‌ ಮನ್ಸೂಕ್‌ ‘ಕನ್ನಡಪ್ರಭ’ಕ್ಕೆ(Kannada Prabha) ತಿಳಿಸಿದರು.

ರಸ್ತೆಯಲ್ಲಿ ಹೋಗುವವರಿಗೆ ನಮ್ಮ ಪೆಟ್ರೋಲ್‌ ಬಂಕ್‌ ಕೇರಳದಲ್ಲಿದೆಯಾ(Kerala), ಕರ್ನಾಟಕದಲ್ಲಿದೆಯಾ (Karnataka) ಎನ್ನುವ ಸಂಶಯ ಬರುವುದು ಸಹಜ. ಹಾಗಾಗಿ ಬ್ಯಾನರ್‌ನಲ್ಲಿ ಕರ್ನಾಟಕವನ್ನು ಮುಖ್ಯವಾಗಿ ನಮೂದಿಸಲಾಗಿದೆ. ಈ ಬ್ಯಾನರ್‌ ಕೇರಳದಲ್ಲಿ ವೈರಲ್‌(Viral) ಆಗಿರುವುದರಿಂದ ಬಹಳಷ್ಟು ಮಂದಿ ಕರೆ ಮಾಡಿ ದರ ಇಳಿಕೆಯನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದಾರೆ ಎಂದು ಮನ್ಸೂಕ್‌ ಹೇಳಿದ್ದಾರೆ.

ಕೇಂದ್ರ ಸರ್ಕಾರ ಇಂಧನ ಸುಂಕ ಇಳಿಸುವ ಮೊದಲು ಕೇರಳದಲ್ಲಿ ಪೆಟ್ರೋಲ್‌ಗೆ ಕರ್ನಾಟಕಕ್ಕಿಂತ 2 ರು. ಕಡಿಮೆ ಬೆಲೆ ಇತ್ತು. ಆಗ ಗಡಿಭಾಗದ ಕರ್ನಾಟಕದ ಜನರು ಕೇರಳಕ್ಕೆ ಹೋಗಿ ಪೆಟ್ರೋಲ್‌ ತುಂಬಿಸಿ ಬರುತ್ತಿದ್ದರು. ಈಗ ಈ ಪ್ರಕ್ರಿಯೆ ಉಲ್ಟಾಆಗಿದೆ. ಪ್ರಸ್ತುತ ಗಾಳಿಮುಖ ಪೆಟ್ರೋಲ್‌ ಬಂಕ್‌ನಲ್ಲಿ ಪೆಟ್ರೋಲ್‌ಗೆ 100.46 ರು. ಇದ್ದರೆ, ಡೀಸೆಲ್‌ಗೆ 84.87 ರು. ಬೆಲೆ ಇದೆ. ಆದರೆ ಕೇರಳದ ಮಂಜೇಶ್ವರದಲ್ಲಿ ಪೆಟ್ರೋಲ್‌ಗೆ 105.38 ರು., ಡೀಸೆಲ್‌ಗೆ 92.58 ರು. ದರ ಇದೆ.

 

ಪೆಟ್ರೋಲ್, ಡಿಸೇಲ್ ದರ ತಲಾ 7 ರೂ ಇಳಿಕೆ

ಕೇಂದ್ರ ಹಾಗೂ ರಾಜ್ಯ ಸರ್ಕಾರ ಪೆಟ್ರೋಲ್, ಡಿಸೇಲ್ (Petrol, Diesel)  ಮೇಲಿನ ಅಬಕಾರಿ ಸುಂಕವನ್ನು ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಿವೆ. ಕೇಂದ್ರ ಸರ್ಕಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀ.ಗೆ 5 ರೂ ಹಾಗೂ ಡಿಸೇಲ್ ಮೇಲಿನ ಸುಂಕವನ್ನು 10 ರೂ ಇಳಿಕೆ ಮಾಡಿತ್ತು..

ಸತತ ಏರಿಕೆ ಕಾಣುತ್ತಿದ್ದ ಪೆಟ್ರೋಲ್ ಹಾಗೂ ಡೀಸೆಲ್(Petrol Diesel Price0 ಬೆಲೆ ಅಬಕಾರಿ ಸುಂಕ(VAT) ಕಡಿತದ ಬಳಿಕ ತಟಸ್ಥಗೊಂಡಿದೆ. ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನತೆಗೆ ಸುಂಕ ಕಡಿತಗೊಳಿಸುವ ಮೂಲಕ ಕೇಂದ್ರ ಸರ್ಕಾರ ಕೊಂಚ ರಿಲೀಫ್ ನೀಡಿತ್ತು. ಇದರ ಬೆನ್ನಲ್ಲೇ ಬಿಜೆಪಿ(BJP) ಆಡಳಿತ ರಾಜ್ಯಗಳು ರಾಜ್ಯ ಸರ್ಕಾರ ಹಾಕಿದ್ದ ಸುಂಕ ಕಡಿತಗೊಳಿಸಿದೆ. ಪರಿಣಾಮ ದೇಶದಲ್ಲಿ ಇದೀಗ ಕರ್ನಾಟಕದಲ್ಲಿ(Karnataka) ಪೆಟ್ರೋಲ್ ಡೀಸೆಲ್ ಅಗ್ಗವಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *