ಮರು ಜಾರಿಯಾಗಲಿದೆ ‘ಯಶಸ್ವಿನಿ’ ಆರೋಗ್ಯ ವಿಮಾ ಯೋಜನೆ: ಗುಡ್ ನ್ಯೂಸ್ ನೀಡಿದ ಸಚಿವ ST Somashekhar

ಯಶಸ್ವಿನಿ ಆರೋಗ್ಯ ವಿಮಾ ಯೋಜನೆ (Yeshasvini Health Insurance Scheme) ರಾಜ್ಯದಲ್ಲಿ ಮರು ಜಾರಿಯಾಗಲಿದ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ (Minister S T Somashekhar) ಮಾಹಿತಿ ನೀಡಿದ್ದಾರೆ. ರಾಜ್ಯದ ಸಹಕಾರಿ ಕ್ಷೇತ್ರ ಮತ್ತು ಬಡ ರೈತರ ಪಾಲಿಗೆ ಈ ಯೋಜನೆ ಸಂಜೀವಿನಿಯಾಗಲಿದೆ. ಈ ಯೋಜನಗೆ ಪ್ರತಿ ವರ್ಷ 350 ರಿಂದ 400 ಕೋಟಿ ಹಣ ಬೇಕಾಗುತ್ತದೆ. ಇಷ್ಟು ಮೊತ್ತ ರಾಜ್ಯ ಸರ್ಕಾರಕ್ಕೆ (Karnataka Government) ಹೊರೆ ಆಗಲಾರದು. ಈ ಮುಂಚೆ ಯೋಜನೆಗೆ 1000 ರಿಂದ 1200 ಕೋಟಿ ಹಣ ಅನುದಾನ ಮೀಸಲಿರಿಸಬೇಕೆಂಬ ಮಾತುಗಳು ಸತ್ಯಕ್ಕೆ ದೂರವಾದದ್ದು, ಹೆಚ್ಚು ಹಣ ಬೇಕಾಗುತ್ತದೆ ಎಂಬುವುದು ತಪ್ಪು ತಿಳುವಳಿಕೆ ಎಂದು ಸ್ಪಷ್ಟಪಡಿಸಿದರು.

ಸರ್ಕಾರದ ಮಟ್ಟದಲ್ಲಿ ಈ ಯೋಜನೆಯ ಮರು ಜಾರಿಯ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ಯೋಜನೆ ಮರು ಜಾರಿಯಾದಲ್ಲಿ ಸಹಕಾರ ಕ್ಷೇತ್ರ ಮತ್ತು ರೈತಾಪಿ ವರ್ಗದ ಲಕ್ಷಾಂತರ ಜನಕ್ಕೆ ಸಹಾಯವಾಗಲಿದೆ. ವಿಧಾನ ಪರಿಷತ್ ಚುನಾವಣೆ ದಿನಾಂಕ ಪ್ರಕಟವಾಗದಿದ್ರೆ ಈ ವಾರದಲ್ಲಿಯೇ ಯೋಜನೆಯ ಬಗ್ಗೆ ಅಧಿಕೃತ ಆದೇಶ ಪ್ರಕಟವಾಗುತ್ತಿತ್ತು. ಆದ್ರೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ವಿಳಂಬವಾಗುತ್ತಿದೆ ಎಂದು ತಿಳಿಸಿದರು.

ಚುನಾವಣೆ ಬಳಿಕ ಯೋಜನೆಗೆ ಸ್ಪಷ್ಟ ರೂಪ

ನಾನು ರಾಜ್ಯ ಪ್ರವಾಸ ಮಾಡಿದಾಗ ಎಲ್ಲ ಭಾಗಗಳಲ್ಲಿಯೂ ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಜಾರಿಗೆ ತರುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಗಮನಕ್ಕೆತರಲಾಗಿದೆ. ವಿಧಾನ ಪರಿಷತ್ ಚುನಾವಣೆ ಬಳಿಕ ಈ ಯೋಜನೆಗೆ ಸ್ಪಷ್ಟ ರೂಪ ಸಿಗಲಿದೆ ಎಂದು ಸಚಿವರು ಸುಳಿವು ನೀಡಿದರು. ಇದ ವೇಳೆ ಮಾತನಾಡಿದ ಸಚಿವರು, ಗ್ರಾಮ ಪಂಚಾಯ್ತಿಗೆ ಒಂದೇ ಫ್ಯಾಕ್ಸ್ ಎಂಬ ನಿರ್ಧಾರದಲ್ಲಿ ಯಾವುದೇ ಬದಲಾವಣೆಗಳಿಲ್ಲ.

ಸದ್ಯ ರಾಜ್ಯದಲ್ಲಿ ಆರೋಗ್ಯ ಕರ್ನಾಟಕ ಯೋಜನೆ ಇದೆ. ಇಲ್ಲಿ ಯೋಜನೆಗೆ ಫಲಾನುಭವಿಗಳು ಮೊದಲು ಸರ್ಕಾರಿ ಆಸ್ಪತ್ರೆಗೆ ತೆರಳಿ ಅನುಮತಿ ಪಡೆದು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಆದ್ರೆ ಯಶಸ್ವಿನಿ ಯೋಜನೆ ನೇರವಾಗಿ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬಹುದು, ಈ ಹಿನ್ನೆಲೆ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಗೆ ಮರು ಜಾರಿಗೆ ರಾಜ್ಯದಲ್ಲಿ ಒತ್ತಾಯ ಹೆಚ್ಚಾಗಿತ್ತು.

ಎಸ್.ಎಂ.ಕೃಷ್ಣ ಜಾರಿಗೆ ತಂದಿದ್ದ ಯೋಜನೆ

ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದ ಕಾಲಾವಧಿಯಲ್ಲಿ ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಜಾರಿಗೆ ತಂದು ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್ ರಚಿಸಿದ್ದರು. ಈ ಯೋಜನೆ ಕೆಳ ವರ್ಗದ ಜನರನ್ನು ತಲುಪಿದ ಪರಿಣಾಮ ಎಸ್.ಎಂ.ಕೃಷ್ಣ ಅವರ ಜನಪ್ರಿಯತೆಯನ್ನು ಹೆಚ್ಚಿಸಿತ್ತು.

ಇದೀಗ ಎಸ್.ಎಂ.ಕೃಷ್ಣ ಅವರ ಶಿಷ್ಯ ಬಳಗದಲ್ಲಿ ಗುರುತಿಸಿಕೊಂಡಿದ್ದ ಎಸ್.ಟಿ.ಸೋಮಶೇಖರ್ ಅವರೇ ಯೋಜನೆ ಮರು ಜಾರಿಗೆ ತರುತ್ತಿರೋದು ವಿಶೇಷ. ಈ ಯೋಜನೆ ಕೆಳ ವರ್ಗದ ಜನರನ್ನು ತಲಪುವ ಜನಪ್ರಿಯ ಯೋಜನೆಯಾಗಿರುವ ಹಿನ್ನೆಲೆ ಸಿಎಂ ಬೊಮ್ಮಾಯಿ ಅನುಮತಿ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ಮಂಡ್ಯ ಹಾಲು ಒಕ್ಕೂಟ ಮತ್ತು ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅವ್ಯಹಾರದ ತನಿಖೆ ಅಂತ್ಯವಾಗಿದ್ದು, ಸರ್ಕಾರಕ್ಕೆ ವರದಿ ಸಲಲ್ಲಿ ಸಲಾಗಿದೆ. ಶೀಘ್ರದಲ್ಲಿಯೇ ಸಿಎಂ ಬೊಮ್ಮಾಯಿ, ಗೃಹ ಸಚಿವರ ಜೊತೆ ವರದಿಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

BBMP ಚುನಾವಣೆ

ಬಿಬಿಎಂಪಿ ಚುನಾವಣೆಗೆ ನಡೆಸುವಂತೆ ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆ. ಸರ್ಕಾರ ಸಹ ಚುನಾವಣೆ ನಡೆಸಲು ಸಮ್ಮಿತಿಸಿದೆ, ಚುನಾಯಿತ ಪ್ರತಿನಿಧಿಗಳೇ ಇಲ್ಲದೇ ಆಡಳಿಯ ಸರಿಯಾಗಿ ನಡೆಯುತ್ತಿಲ್ಲ. ನಗರದ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಶೀಘ್ರದಲ್ಲಿಯೇ ಚುನಾವಣೆ ನಡೆಸಲಾಗುವುದು ಎಂದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *