ಸರಕಾರಿ ಶಾಲಾ ಶಿಕ್ಷಕಿ ಚಿಂತಾಮಣಿ ರೆಡ್ಡಿಯವರ ಅದ್ದೂರಿ ವಯೊನಿವೃತ್ತಿ ಸಮಾರಂಭ
ಅಫಜಲಪುರ ತಾಲ್ಲೂಕಿನ ಬಳೂರ್ಗಿ ತಾಂಡಾ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ನಿವೃತ್ತಿ ಸಮಾರಂಭ ನಡೆಯಿತು. ಮುಖ್ಯಗುರುಗಳಾದ ಸಂತೋಷ ಹೆಗ್ಗಿಯವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದ ಉದ್ಘಾಟಕರಾಗಿ ಕ್ಷೇತ್ರ ಶಿಕ್ಷಣ ಸಮನ್ವಯ ಅಧಿಕೃತವಾಗಿ ಸುಧಾಕರ ನಾಯಕ ಅವರು ಉಪಸ್ಥಿತರಿದ್ದು,ಶಂಭುಲಿಂಗ ಸ್ವಾಮಿಗಳು ಸಾನಿಧ್ಯ ವಹಿಸಿದರು.ತಾಲ್ಲೂಕು ನೌಕರರ ಸಂಘದ ಅದ್ಯಕ್ಷ ಗಾಂಧಿ ದಪ್ಪೆದಾರ ಜೊತಿಬೆಳಗಿಸುವುದರ ಮುಖಾಂತರ ಚಾಲನೆ ನಿಡಿದರು.ಇದನಲ್ಲೆ ಕಂಡು ನಿವೃತ್ತ ಶಿಕ್ಷಕಿ ಆನಂದಬಾಷ್ಪ ತಂದು ತಮ್ಮ ಸಂತೋಷ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಮುಖ್ಯ ಗುರುಗಳಾದ ಗುರುಶಾಂತಯ್ಯ ಹಿರೇಮಠ, ಶೊಭರಾಜ ಮ್ಯಾಳೇಶಿ,ಗ್ರಾಮ ಪಂಚಾಯತಿ ಅಧ್ಯಕ್ಷೆ ಮುಕ್ತಾಬಾಯಿ ಪೂಜಾರಿ, ಗ್ರಾಮ ಪಂಚಾಯತಿ ಸರ್ವಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.