BANGALOREPOLITICSSTATE ಬಿಟ್ಕಾಯಿನ್ ವಿಚಾರದಲ್ಲಿ ಮೌನ ವಹಿಸುವಂತೆ ಸಿಎಂಗೆ ಹೈಕಮಾಂಡ್ನಿಂದ ಸೂಚನೆ
ಬೆಂಗಳೂರು: ಬಿಟ್ಕಾಯಿನ್ ವಿಚಾರದಲ್ಲಿ ಮೌನ ವಹಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಹೈಕಮಾಂಡ್ನಿಂದ ಸಂದೇಶ ಬಂದಿದೆ.
ಬಿಟ್ಕಾಯಿನ್ ವಿಚಾರದಲ್ಲಿ ವಿಪಕ್ಷಗಳ ಆರೋಪಕ್ಕೆ ಪ್ರತ್ಯುತ್ತರ ಹಾಗೂ ಮಾಧ್ಯಮಗಳ ಮುಂದೆ ಬಹಿರಂಗ ಹೇಳಿಕೆ ನೀಡದಂತೆ ವರಿಷ್ಠರು ಸಿಎಂಗೆ ಸೂಚನೆ ನೀಡಿದ್ದಾರೆ.
ಇನ್ಮುಂದೆ ಬಿಟ್ಕಾಯಿನ್ ವಿಚಾರದಲ್ಲಿ ವಿಪಕ್ಷಗಳ ಪ್ರಶ್ನೆಗೆ ಸಚಿವರುಗಳೇ ಉತ್ತರಿಸಲಿದ್ದು, ಸಿಎಂ ಬೊಮ್ಮಾಯಿ ಸೈಲೆಂಟ್ ಆಗಿರಲಿದ್ದಾರೆ.