ಬಿಜೆಪಿಗರು ಸಮಾಜವನ್ನು ಕತ್ತರಿಯಲ್ಲಿ ಕತ್ತರಿಸುತ್ತಿದ್ದಾರೆ: ಡಿ.ಕೆ.ಶಿವಕುಮಾರ್
ಬೆಂಗಳೂರು; ಬಿಜೆಪಿಗರು ಸಮಾಜವನ್ನು ಕತ್ತರಿಯಲ್ಲಿ ಕತ್ತರಿಸುತ್ತಿದ್ದಾರೆ. ಕಾಂಗ್ರೆಸಿಗರು ಸೂಜಿ ರೀತಿಯಲ್ಲಿ ಈ ಸಮಾಜವನ್ನು ಹೊಲೆಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2023ಕ್ಕೆ ಮತ್ತೆ ವಿಧಾನಸೌಧದ ಮೇಲೆ ಕಾಂಗ್ರೆಸ್ ಧ್ವಜ ಹಾರಿಸಬೇಕು. ಆ ನಿಟ್ಟಿನಲ್ಲಿ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಕೆಲಸ ಮಾಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಸದಸ್ಯತ್ವ ಮಾಡಿಸೋಣ. ಬೋಗಸ್ ಸದಸ್ಯತ್ವ ಮಾಡಿಸುವುದು ಬೇಡ.
ಸುಮಾರು 50 ಲಕ್ಷ ಹೊಸ ಕಾಂಗ್ರೆಸ್ ಸದಸ್ಯತ್ವ ಆಗಬೇಕು ಎಂದು ಕರೆ ನೀಡಿದರು.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ ದೇಶದ ಪ್ರಧಾನಿ ಆಗಬಹುದಿತ್ತು. ಆದರೆ, ಸೋನಿಯಾ ಅವರು ಅಬ್ದುಲ್ ಕಲಾಂ ದೇಶದ ಪ್ರಧಾನಿ ಆಗಬೇಕು ಅಂದರು. ಅನೇಕ ಕೊಡುಗೆ ನೀಡಿ, ದೇಶದ ಬದಲಾವಣೆ ಮಾಡಿದ್ದು ಕಾಂಗ್ರೆಸ್ ಪಕ್ಷ ಎಂದರು.