ಕೂಲಿ ಕಾರ್ಮಿಕರಮೇಲೆ ಅಟ್ಟಹಾಸ ಮೆರೆಯುತ್ತಿರುವ ಮಣೂರು ಗ್ರಾಮ ಪಂಚಾಯತ್ ಪಿ ಡಿ ಓ

ಶೇಷಗಿರಿ ಗ್ರಾಮದಲ್ಲಿ ನಿಯತವಾಗಿ ಗ್ರಾಮದ ಸ್ವಚ್ಚತಾ ಕಾರ್ಯ ನಿರ್ವಹಿಸುವ ಕೂಲಿ ಕಾರ್ಮಿಕರಿಗೆ ಅವರು ದುಡಿದಿರುವ ಕೂಲಿ ಹಣವನ್ನು ಕೊಡದೆ ಮಣೂರು ಗ್ರಾಮ ಪಂಚಾಯತ್  ಪಿ ಡಿ ಓ ಅಟ್ಟಹಾಸ ಮೆರೆಯುತ್ತಿದ್ದಾರೆ,  ಈ ಅನ್ಯಾಯವನ್ನು ಹಲವು ಗ್ರಾಮಸ್ಥರು ಪ್ರಶ್ನಿಸಿದರು ಅದಕ್ಕೆ ಯಾವುದೇ ರೀತಿಯಾದಂತಹ ಪರಿಹಾರ ನೀಡದೆ ಮನುಷತ್ವವನ್ನ ಮರೆತು ಮೆರೆಯುತ್ತಿರುವ ಪಿ ಡಿ ಓ ಗೆ ಆ ಬಡ ಜನತೆ ಹಿಡಿ ಶಾಪ ಹಾಕುತ್ತಿದ್ದಾರೆ,

ಇನ್ನು ಕೆಲವು ದಿನಗಳಲ್ಲಿ ಆ ಕಾರ್ಮಿಕರ ದುಡ್ಡು ಅವರ ಕೈ ಸೇರದಿದ್ದೀರೇ ಪಿ ಡಿ ಓ ವಿರುದ್ಧ ಹೋರಾಟಕ್ಕೆ ಜನತೆ ಕೈ ಜೋಡಿಸಿ ನಿಂತಿದ್ದಾರೆ,  ಈ ರೀತಿಯ ಪಿ ಡಿ ಓ ಇದ್ದು ಇಲ್ಲದಹಾಗೆ ಎಂದು ಜನ ಅವರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದರೆ,  ಈ ಕುರಿತಾಗಿ ಸಂಭಂಧಪಟ್ಟ ಜನಪ್ರತಿನಿದಿಗಳು ಪ್ರಶ್ನೆ ಹಾಕದೆ ಇರುವುದು ಬಹುದೊಡ್ಡ ಚರ್ಚೆಗೆ ಗ್ರಾಸವಾಗಿದೆ,  ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಸಮ್ಮಿಲನದ ಇಂತಹ ದುಷ್ಕಾರ್ಯಕ್ಕೆ ಜನತೆ ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *