BANGALORE ವ್ಯಾಕ್ಸಿನೇಷನ್‌ ಹೆಚ್ಚಿಸಲು ಹೊಸ ಯೋಜನೆ ರೂಪಿಸಲು ಮುಂದಾದ ಆರೋಗ್ಯ ಇಲಾಖೆ

ಬೆಂಗಳೂರು: ಸೆಕೆಂಡ್ ಡೋಸ್ ವ್ಯಾಕ್ಸಿನ್ ಪಡೆಯಲು ಜನರು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ವ್ಯಾಕ್ಸಿನೇಷನ್‌ ಹೆಚ್ಚಿಸಲು ಹೊಸ ಯೋಜನೆ ರೂಪಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

ಕೋವಿಡ್ ಲಸಿಕೆಯ ಮೊದಲನೆ ಮತ್ತು ಎರಡನೇ ಡೋಸ್ ವ್ಯಾಪ್ತಿ ವೃದ್ಧಿಸಲು ‘ಹರ್ ಘರ್ ದಸ್ತಕ್’ ಅಭಿಯಾನ ಅನುಷ್ಠಾನಗೊಳಿಸಲು ಎನ್​ಹೆಚ್​ಎಂ (National Health Mission)ಮುಂದಾಗಿದೆ. ಮುಂಚೂಣಿ ಆರೋಗ್ಯ ಕಾರ್ಯಕರ್ತರು ‘ಹರ್ ಘರ್ ದಸ್ತಕ್’ ಅಭಿಯಾನದಡಿ ಮನೆ-ಮನೆಗೆ ಭೇಟಿ ನೀಡಿ, ಮೊದಲನೇ ಡೋಸ್ ಪಡೆಯದ ಹಾಗೂ ಎರಡನೇ ಡೋಸ್‌ಗೆ ಬಾಕಿ ಇರುವವರ ಮಾಹಿತಿ ಪಡೆಯಬೇಕು.

ಪ್ರತಿಯೊಬ್ಬ ಅರ್ಹ ವ್ಯಕ್ತಿಗೆ ನೀವು ಲಸಿಕೆ ಪಡೆದಿದ್ದೀರಾ ಎಂದು ಪ್ರಶ್ನಿಸಬೇಕು. ಕೋವಿಡ್-19 ಲಸಿಕೆ ಪಡೆಯಬೇಕಾದವರ ಪಟ್ಟಿ ಸಿದ್ಧಪಡಿಸಿಟ್ಟುಕೊಂಡು ಜಾಗೃತಿ ಮೂಡಿಸಬೇಕು. ಕೋವಿಡ್-19ನಿಂದ ಸಂಪೂರ್ಣ ರಕ್ಷಣೆ ಹೊಂದಲು ಎರಡೂ ಡೋಸ್ ಲಸಿಕೆ ಪಡೆಯುವುದು ಅತ್ಯವಶ್ಯಕ ಎಂಬುದರ ಕುರಿತು ಮನದಟ್ಟು ಮಾಡಬೇಕು. ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಪ್ರಯತ್ನಿಸಬೇಕು.

ಜೊತೆಗೆ ಹೆಚ್ಚು ಜನ ಸಂಚಾರವಿರುವ ಪ್ರದೇಶಗಳಲ್ಲಿ ತಾತ್ಕಾಲಿಕ ಲಸಿಕೆ ಕೇಂದ್ರ ತೆರೆಯುವಂತೆ ಸೂಚನೆ ನೀಡಲಾಗಿದೆ. ಬಸ್‌ನಿಲ್ದಾಣ, ರೈಲು ನಿಲ್ದಾಣ, ಮೆಟ್ರೋ ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲು ಸೂಚಿಸಲಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *