ನಂದಿ ಗಿರಿಧಾಮ : 3 ತಿಂಗಳ ಬಳಿಕ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ

  ಚಿಕ್ಕಬಳ್ಳಾಪುರ (ನ.15):  ತೀವ್ರ ಮಳೆಯಿಂದ ಗುಡ್ಡ ಕುಸಿದು ರಸ್ತೆ (Road) ಸಂಕರ್ಪ ಕಡಿದು ಹೋಗಿ ಬರೋಬ್ಬರಿ 3 ತಿಂಗಳಿಂದ ಪ್ರವಾಸಿಗರದಿಂದ (Tourist) ದೂರ ಇರುವ ಜಿಲ್ಲೆಯ ಐತಿಹಾಸಿಕ (Historical) ವಿಶ್ವ ವಿಖ್ಯಾತ ನಂದಿಗಿರಿಧಾಮ (nandi Hill) ನ,20ರ ನಂತರ ಪ್ರವಾಸಿಗರಿಗೆ ದರ್ಶನವಾಗಲಿದೆ.

ಹೌದು, ಲೋಕೋಯೋಗಿ ಇಲಾಖೆಯು ಕಳೆದ ಭಾರೀ ಮಳೆಗೆ ಕೋಚ್ಚಿ ಹೋಗಿದ್ದ ನಂದಿ ಗಿರಿಧಾಮದ ರಸ್ತೆಯನ್ನು ಬರೋಬ್ಬರಿ 80 ಲಕ್ಷ ರು, ವೆಚ್ಚದಲ್ಲಿ ಪುನರ್‌ ನಿರ್ಮಾಣ ಕಾರ್ಯವನ್ನು ಭರದಿಂದ ನಡೆಸಿ ಇದೀಗ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಸರ್ಕಾರ ಸಕಾಲದಲ್ಲಿ ಅನುದಾನ ಬಿಡುಗಡೆ ಮಾಡದ ಕಾರಣ ಸುಮಾರು ಒಂದೂವರೆ ತಿಂಗಳ ಕಾಲ ರಸ್ತೆ (Road) ಪುನರ್‌ ನಿರ್ಮಾಣ ಕಾಮಗಾರಿ ತಡವಾಗಿ ಪೂರ್ಣಗೊಂಡಿದೆ.

3 ತಿಂಗಳ ಬಳಿಕ ಪ್ರವೇಶ:

ಕಳೆದ ಆಗಸ್ಟ್‌ 24 ರಂದು ಜಿಲ್ಲಾದ್ಯಂತ ವ್ಯಾಪಕ ಪ್ರಮಾಣದಲ್ಲಿ ಬಿದ್ದ ಮಳೆಯಿಂದಾಗಿ ನಂದಿ ಗಿರಿಧಾಮದಲ್ಲಿ ಬೃಹತ್‌ ಪ್ರಮಾಣದಲ್ಲಿ ಭೂ ಕುಸಿತ ಸಂಭವಿಸಿದ ಗುಡ್ಡೆಯೊಂದು ರಸ್ತೆ ಮೇಲೆ ಬಿದ್ದ ಪರಿಣಾಮ ಗಿರಿಧಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕೊಚ್ಚಿ ಹೋಗಿತ್ತು. ಇದರಿಂದ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ರಸ್ತೆ ಕಾಮಗಾರಿ ಮುಗಿಯುವವರೆಗೂ ಜಿಲ್ಲಾಡಳಿತ ಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶದ ಮೇಲೆ ನಿರ್ಬಂಧ ಹೇರಿತ್ತು.

ಇದೀಗ ರಸ್ತೆ ಕಾಮಗಾರಿಯನ್ನು ಅತ್ಯಂತ ವೈಜ್ಞಾನಿಕವಾಗಿ ಪೂರ್ಣಗೊಳಿಸಿರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಪ್ರವಾಸಿಗರ ಹಾಗೂ ವಾಹನ ಸಂಚಾರಕ್ಕೆ ನ.20ರ ನಂತರ ಮುಕ್ತ ಅವಕಾಶಕ್ಕೆ ಸೈ ಎಂದಿದ್ದಾರೆ. ಹೀಗಾಗಿ ಸತತ 3 ತಿಂಗಳಿಂದ ರಸ್ತೆ ಕಾಮಗಾರಿಯಿಂದ ಬಂದ್‌ ಆಗಿ ಪ್ರವಾಸಿಗರು ಇಲ್ಲದೇ ಭಣಗುಡುತ್ತಿದ್ದ ಜಿಲ್ಲೆಯ ವಿಶ್ವ ವಿಖ್ಯಾತ ನಂದಿಗಿರಿಧಾಮ ನ.20ರ ನಂತರ ಪ್ರವಾಸಿಗರ ಕಲರವ ಕೇಳಿ ಬರಲಿದೆ. ಸದ್ಯ ಜಿಲ್ಲಾದ್ಯಂತ ಮೂಡ ಕವಿದ ವಾತಾವರಣ ಇದ್ದು ಜಡಿ ಮಳೆಯಿಂದಾಗಿ (rain) ನಂದಿಗಿರಿಧಾಮ ಹಚ್ಚ ಹಸಿರುನಿಂದ ಕಂಗೊಳಿಸುತ್ತಿದ್ದು ಗಿರಿಧಾಮದ ಪ್ರಾಕೃತಿಕ ವಾತಾವರಣದಲ್ಲಿ ಸಾಕಷ್ಟುಬದಲಾವಣೆ ಬಂದಿದೆ.

ಪ್ರೇಮಿಗಳ ಪಾಲಿಗೆ ಸ್ವರ್ಗ

ಬಡವರ ಪಾಲಿಗೆ ಊಟಿಯೆಂದೇ ಖ್ಯಾತಿ ಪಡೆದಿರುವ ನಂದಿ ಗಿರಿಧಾಮ ಪ್ರೇಮಿಗಳ ಪಾಲಿಗೆ ಸ್ವರ್ಗ ಆಗಿದೆ. ಈಗಾಗಲೇ 3 ತಿಂಗಳಿಂದ ಗಿರಿಧಾಮ ಪ್ರವಾಸಿಗರು ಇಲ್ಲದೇ ನಂದಿ ಸುತ್ತಮುತ್ತಲಿನ ಅನೇಕ ಆರ್ಥಿಕ ಚಟುವಟಿಕೆಗಳಿಗೆ ಮಂಕು ಕವಿದಿದೆ. ಹೋಟೆಲ್‌ (Hotel) ಉದ್ಯಮ ಸೇರಿದಂತೆ ರೆಸಾರ್ಟ್‌ಗಳು, ಖಾಸಗಿ ಹೋಟೆಲ್‌ಗಳು, ಮನರಂಜನಾ ಹಾಗೂ ಪ್ರವಾಸಿಗರ ವಸತಿ ಕೇಂದ್ರಗಳು ಬಾಗಿಲು ಮುಚ್ಚಿವೆ. ಸದ್ಯ ರಸ್ತೆ ಸಂಪರ್ಕವನ್ನು ಮತ್ತೆ ಪುನರ್‌ ನಿರ್ಮಾಣ ಮಾಡಿರುವುದರಿಂದ ನ ನ.20ರ ನಂತರ ಪ್ರವಾಸಿಗರಿಗೆ ಗಿರಿಧಾಮ ತೆರೆದುಕೊಳ್ಳಲಿದೆ.

ನಂದಿಗಿರಿಧಾಮದ ರಸ್ತೆ ಪುನರ್‌ ನಿರ್ಮಾಣ ಕಾಮಗಾರಿ ಪೂರ್ಣವಾಗಿದೆ. ನ.20ಕ್ಕೆ ಕ್ಯೂರಿಂಗ್‌ ಕಾರ್ಯ ಪೂರ್ಣಗೊಳ್ಳಲಿದೆ. ಬಳಿಕ ಪ್ರವಾಸಿಗರು, ವಾಹನಗಳು ಸಂಚಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ಅದರ ಮಧ್ಯದಲ್ಲಿ ಜಿಲ್ಲಾಧಿಕಾರಿಗಳು ಒಮ್ಮೆ ಬಂದು ಕಾಮಗಾರಿ ನೋಡುವುದಾಗಿ ಹೇಳಿದ್ದಾರೆ. ನ.20ರ ನಂತರ ನಂದಿಗಿರಿಧಾಮಕ್ಕೆ ಸಂಚರಿಸಲು ಕೊಚ್ಚಿ ಹೋಗಿದ್ದ ರಸ್ತೆ ಯೋಗ್ಯವಾಗಲಿದೆ.

-ಸಂತೋಷ್‌, ಕಿರಿಯ ಎಂಜನಿಯರ್‌, ಪಿಡಬ್ಲ್ಯೂಡಿ.

  • ನಂದಿ ಗಿರಿಧಾಮ :  3 ತಿಂಗಳ ಬಳಿಕ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ 
  • ಮಳೆಗೆ ಕೊಚ್ಚಿ ಹೋಗಿದ್ದ ರಸ್ತೆ ಪುನರ್‌ ನಿರ್ಮಾಣ
  •  -ಗಿರಿಧಾಮದ ಸೌಂದರ್ಯ ಹೆಚ್ಚಿಸಿದ ಜಡಿ ಮಳೆ
  • -3 ತಿಂಗಳಿಂದ ನಂದಿ ಸುತ್ತ ಆರ್ಥಿಕ ಚಟುವಟಿಕೆ ಹಿನ್ನಡೆ
  • – .80 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ರಸ್ತೆ
  • -ಮಳೆಗೆ ಕೊಚ್ಚಿ ಹೋಗಿದ್ದ ಗಿರಿಧಾಮದ ರಸ್ತೆ

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *