ಬೆಂಗಳೂರಿನಲ್ಲಿ ಈ ವರ್ಷ ದಾಖಲೆಯ 1480 ಮಿ.ಮೀ ಮಳೆ; ವಾಯುಭಾರ ಕುಸಿತಕ್ಕೆ ಪರಿಸರ ಮಾಲಿನ್ಯ ಕಾರಣ!

2017 ರಲ್ಲಿ ರಾಜಧಾನಿಯಲ್ಲಿ 1696 ಮಿ.ಮೀ ಮಳೆಯಾಗಿತ್ತು. ಆ ನಂತರದ ವರ್ಷದಲ್ಲಿ ಮಳೆಯ ಪ್ರಮಾಣ ತಗ್ಗಿತ್ತು. 2018ರಲ್ಲಿ 764 ಮಿ.ಮೀ, 2019ರಲ್ಲಿ 831 ಮಿ.ಮೀ ಹಾಗೂ 2020ರಲ್ಲಿ 1082 ಮಿ.ಮೀ ಮಳೆಯಾಗಿದೆ. 2005ರಲ್ಲಿ ನಗರದಲ್ಲಿ 1606 ಮಿ.ಮೀ ಮಳೆಯಾಗಿದ್ದು 1900 ನಂತರ ಸುರಿದ ಹೆಚ್ಚಿನ ಮಳೆ ಎನ್ನುವ ದಾಖಲೆಯ ಕಡತ ಸೇರಿತ್ತು.

ಅಧಿಕ ಮಳೆ ಏಕೆ ?
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಅಧಿಕ ಮಳೆಯಾಗುತ್ತಿದೆ ಎನ್ನುತ್ತಾರೆ ಹವಾಮಾನ ಇಲಾಖೆ ಅಧಿಕಾರಿಗಳು. ಮಳೆಯ ವೈಪರೀತ್ಯಕ್ಕೆ ಪ್ರಮುಖ ಕಾರಣ ಪರಿಸರ ಮಾಲಿನ್ಯ ಮತ್ತು ಜಾಗತಿ ತಾಪಮಾನದ ಹೆಚ್ಚಳ ಎನ್ನುತ್ತಾರೆ ತಜ್ಞರು.

ನಗರದ ಮಳೆ ಲಾಭಕ್ಕಿಂತ ನಷ್ಟವೇ ಹೆಚ್ಚು
ನಗರದಲ್ಲಿ ಸುರಿಯುತ್ತಿರುವ ಮಳೆ ಕುಡಿಯುವ ನೀರಿನ ಅಭಾವವನ್ನು ಕಡಿಮೆ ಮಾಡುವುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಅಧಿಕ ಮಳೆ ನಗರಕ್ಕೆ ಲಾಭಕ್ಕಿಂತ ಹೆಚ್ಚು ನಷ್ಟವನ್ನೇ ಉಂಟು ಮಾಡುತ್ತಿದೆ. ನೂರಾರು ಮನೆಗಳು ಮಳೆಯಿಂದ ನೆಲಕ್ಕುರುಳಿದರೆ, ಸಾವಿರಾರು ಮರಗಳು, ವಿದ್ಯುತ್‌ ಕಂಬಗಳು, ವಾಹನಗಳು ಮಳೆಗೆ ಹಾನಿಗೀಡಾಗಿವೆ. ವ್ಯಾಪಾರ ವಹಿವಾಟು ಕೂಡ ಕಡಿಮೆಯಾಗಿದೆ. ವಿಶೇಷವಾಗಿ ಬೀದಿಬದಿಯ ವ್ಯಾಪಾರಿಗಳ ಬದುಕು ಬೀದಿಗೆ ಬಂದಿದೆ. ರಸ್ತೆ, ಕಟ್ಟಡ ಸೇರಿದಂತೆ ಹಲವು ಕಾಮಗಾರಿಗಳು ಮಳೆಯಿಂದ ನನೆಗುದಿಗೆ ಬಿದ್ದಿವೆ. ಡೆಂಗೆ, ಚಿಕೂನ್‌ಗೂನ್ಯ ರೋಗಗಳ ಜತೆ ಸಾಂಕ್ರಾಮಿಕ ರೋಗಗಳು ಇದರಿಂದ ಅಧಿಕವಾಗುವ ಸಾಧ್ಯತೆ ಇದೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *