CPOD: ಬೆಂಗಳೂರಿನಲ್ಲಿ ಹೆಚ್ಚಾಗ್ತಿದೆ ಉಸಿರಾಟದ ಸಮಸ್ಯೆ, ಶ್ವಾಸಕೋಶ ಜೋಪಾನ ಅಂತಿದ್ದಾರೆ ವೈದ್ಯರು!

Dangers of COPD: ದೀಘ್ರಕಾಲದ ಪ್ರತಿರೋಧಕ ಶ್ವಾಸಕೋಶ ರೋಗ ಇದನ್ನು ಸಿಒಪಿಡಿ (Chronic Obstructive Pulmonary Disease) ಎಂದು ಕರೆಯಲಾಗುತ್ತದೆ. ಕಲುಶಿತ ಗಾಳಿಯನ್ನು ಸೇವಿಸುವುದರಿಂದ (Air Pollution) ಶ್ವಾಸಕೋಶದ ಮೇಲೆ ಉಂಟಾಗುವ ಪರಿಣಾಮದಿಂದ ಸಿಒಪಿಡಿ ಆರೋಗ್ಯ ಸಮಸ್ಯೆ ಉಲ್ಭಣಗೊಳ್ಳೂತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ, ಧೂಮಪಾನ (Smoking) ಹಾಗೂ ತಂಬಾಕು ಸೇವನೆ (Tobacco), ಜೈವಿಕ ಇಂಧನ ಹೊಗೆಯಿಂದಾಗಿ (Bio Fuel) ಬಹುತೇಕರು ಸಿಒಪಿಡಿಯಿಂದ ಬಳಲುತ್ತಿದ್ದಾರೆ ಎಂಬುದು ಆಘಾತಕಾರಿ ವಿಷಯ. ವಿಶ್ವ ಆರೋಗ್ಯ ಸಂಸ್ಥೆಯ (World Health Organization) ಪ್ರಕಾರ ಪ್ರತಿ ಸೆಕೆಂಡಿಗೆ ಒಬ್ಬ ವ್ಯಕ್ತಿಯು ಈ ಕಾಯಿಲೆಯಿಂದ ಸಾವನ್ನಪ್ಪುತ್ತಿದ್ದಾರೆ. ಶ್ವಾಸಕೋಶದ ಕಾಯಿಲೆ (Respiratory Issues) ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರಪಂಚಾದ್ಯಂತ 65 ಮಿಲಿಯನ್ ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದು, ಪ್ರತಿ ದಿನ ಸಿಒಪಿಡಿ ಸಮಸ್ಯೆಗೆ ಒಳಗಾಗುವವರ ಸಂಖ್ಯೆ ದ್ವಿಗುಣವಾಗುತ್ತಿದೆ. 2030ರ ವೇಳೆ ಮರಣದ ಮೂರನೇ ಕಾರಣವೇ ಸಿಒಪಿಡಿ ಆಗಬಹುದು ಎಂದು ಎಚ್ಚರಿಸಲಾಗಿದೆ. ಈ ಬಗ್ಗೆ ಫೋರ್ಟಿಸ್ ಆಸ್ಪತ್ರೆಯ ತಜ್ಞ ವೈದ್ಯ ಡಾ. ವಿವೇಕ್‌ ಆನಂದ್ ಪಡೆಗಲ್ ವಿವರಿಸಿದ್ದಾರೆ.

ಉಸಿರಾಟದ ತೊಂದರೆ ದೀರ್ಘಕಾಲದ ಕೆಮ್ಮುಉಬ್ಬಸ, ಕಫ ಅಥವಾ ಹೆಚ್ಚೆಚ್ಚು ಕಫ ಉತ್ಪಾದನೆ ಆಗುವುದು, ಆಗಾಗ್ಗೆ ಉಸಿರಾಡುವಾಗ ನೋವಾಗುವುದು, ಆಯಾಸ ಇದು ಪ್ರಮುಖ ಲಕ್ಷಣ. ಈ ಲಕ್ಷಣ ಕಂಡು ಬಂದರೆ ನಿರ್ಲಕ್ಷ್ಯ ಮಾಡದೇ ವೈದ್ಯರನ್ನು ಭೇಟಿ ಮಾಡಿ.

ಸಿಒಪಿಡಿಯ ಪರಿಣಾಮವೇನು?

ಜಾಸ್ತಿ ನಡೆಯಲು ಅಥವಾ ಹೆಚ್ಚು ಮೆಟ್ಟಿಲುಗಳನ್ನು ಹತ್ತಲು ಆಗದೇ ಇರುವುದು, ಹೆಚ್ಚು ಕೆಲಸ ಮಾಡಲು ಸಾಧ್ಯವಾಗದಿರುವುದು. ಈ ಸಮಸ್ಯೆ ಇದ್ದರೆ ಆಗ ಬೇರೆ ದಾರಿ ಇಲ್ಲದೆ
ಪೋರ್ಟಬಲ್ ಆಮ್ಲಜನಕ ಟ್ಯಾಂಕ್‌ಗಳಂತಹ ವಿಶೇಷ ಉಪಕರಣಗಳು ಉಸಿರಾಡಲು ಬೇಕಾಗುತ್ತದೆ.

ಊಟ ಮಾಡುವುದು, ಪೂಜಾ ಸ್ಥಳಗಳಿಗೆ ಹೋಗುವುದು, ಗುಂಪು ಕಾರ್ಯಕ್ರಮಗಳಿಗೆ ಹೋಗುವುದು ಅಥವಾ ಸ್ನೇಹಿತರು, ನೆರೆಹೊರೆಯವರೊಂದಿಗೆ ಒಗ್ಗೂಡಿಸುವುದು ಮುಂತಾದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಡಿ. ಗೊಂದಲ ಹೆಚ್ಚಾಗುವುದು ಅಥವಾ ಮೆಮೊರಿ ಲಾಸ್ ತುರ್ತು ಕೊಠಡಿಗಳನ್ನು ಮತ್ತು ರಾತ್ರಿಯ ಹೊತ್ತು ಆಸ್ಪತ್ರೆಯಲ್ಲಿ ಇರುವುದು ಒಳಿತು. ಸಂಧಿವಾತ, ರಕ್ತ ಕಟ್ಟಿ ಹೃದಯ ಸ್ಥಂಭನ, ಮಧುಮೇಹ, ಪರಿಧಮನಿಯ ಹೃದಯ ಕಾಯಿಲೆ, ಪಾರ್ಶ್ವವಾಯು ಅಥವಾ ಆಸ್ತಮಾದಂತಹ ಇತರ ದೀರ್ಘಕಾಲದ ಕಾಯಿಲೆಗಳನ್ನು ಹೊಂದಬಹುದು.ಖಿನ್ನತೆ ಅಥವಾ ಇತರ ಮಾನಸಿಕ ಅಥವಾ ಭಾವನಾತ್ಮಕ ಸ್ಥಿತಿಗಳನ್ನು ಹೊಂದಬಹುದು.

 

 

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *