LIC: ಈಗ ಏಜೆಂಟ್ ಗಳ ಅಗತ್ಯವಿಲ್ಲ, ವಿಮೆಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಒಂದೇ ಕರೆಯಲ್ಲಿ ಲಭ್ಯ
ನವದೆಹಲಿ : ಇಲ್ಲಿಯವರೆಗೆ ಭಾರತೀಯ ಜೀವ ವಿಮಾ ನಿಗಮ (LIC) ಪಾಲಿಸಿಯ ಬಗ್ಗೆ ಯಾವುದೇ ಮಾಹಿತಿ ಪಡೆಯಬೇಕಾದರೆ ಏಜೆಂಟ್ ಅನ್ನು ಅವಲಂಬಿಸಬೇಕಾಗಿತ್ತು. ಆದರೆ, ಈಗ ಪಾಲಿಸಿಗೆ ಸಂಬಂಧಿಸಿದ ಮಾಹಿತಿ ಪಡೆಯಲು ಚಿಂತಿಸಬೇಕಾಗಿಲ್ಲ. ಈಗ ಕೇವಲ ಒಂದು ಕರೆಯಲ್ಲಿ ಎಲ್ಲಾ ಮಾಹಿತಿ ಸಿಗಲಿದೆ.
ಒಂದು ಕರೆಯಲ್ಲಿ ಎಲ್ಲಾ LIC ಸಂಬಂಧಿತ ಅಪ್ಡೇಟ್ ಗಳು :
LIC ಈಗ ತನ್ನ ಗ್ರಾಹಕರಿಗೆ ಹೊಸ ಸೌಲಭ್ಯವನ್ನು ನೀಡುತ್ತಿದೆ. ಇದರ ಅಡಿಯಲ್ಲಿ, ಪಾಲಿಸಿಗೆ ಸಂಬಂಧಿಸಿದ ಯಾವುದೇ ರೀತಿಯ ಮಾಹಿತಿ ಅಥವಾ ಅಪ್ಡೇಟ್ ಗಳಿಗಾಗಿ LIC ಏಜೆಂಟ್ ಅನ್ನು ಭೇಟಿ ಮಾಡಬೇಕಾಗಿಲ್ಲ. ಈಗ ಎಲ್ಐಸಿ ಪಾಲಿಸಿಗೆ (LIC Policy) ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು, ಯಾವುದೇ ಹೊಸ ಯೋಜನೆ ಅಥವಾ ಹಳೆಯ ಯೋಜನೆಯಲ್ಲಿನ ಬದಲಾವಣೆಯನ್ನ ಒಂದು ಕರೆಯ ಮೂಲಕವೇ ಪಡೆದುಕೊಳ್ಳಬಹುದು. ಇದಕ್ಕಾಗಿ ಒಂದು ಸಣ್ಣ ಪ್ರಕ್ರಿಯೆಯನ್ನು ಅನುಸರಿಸಬೇಕು.
ಸಂಪೂರ್ಣ ಪ್ರಕ್ರಿಯೆ ಹೀಗಿರಲಿದೆ :
1. ಇದಕ್ಕಾಗಿ ನೀವು ಮೊದಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ಭಾರತೀಯ ಜೀವ ವಿಮಾ ನಿಗಮದ ಅಧಿಕೃತ ವೆಬ್‌ಸೈಟ್‌ನಲ್ಲಿಅಪ್ಡೇಟ್ ಮಾಡಬೇಕು.
2. ಇದಕ್ಕಾಗಿ ನೀವು ಮೊದಲು LIC www.licindia.in ನ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು .
3. ಇದರ ನಂತರ ನೀವು ಮುಖಪುಟದ ಮೇಲ್ಭಾಗದಲ್ಲಿ ಕಸ್ಟಮರ್ ಸರ್ವಿಸ್ ಆಯ್ಕೆ ಕಾಣಿಸುತ್ತದೆ.
4. ಈಗ ಅದರ ಮೇಲೆ ಕ್ಲಿಕ್ ಮಾಡಿದರೆ ಸ್ಕ್ರೀನ್ ಮೇಲೆ ಹೆಚ್ಚಿನ ಉಪ ವಿಭಾಗಗಳು ಕಾಣಿಸುತ್ತವೆ.
5. ಈ ವಿಭಾಗದಲ್ಲಿ ಅಪ್ಡೇಟ್ ಯುವರ್ ಕಾಂಟಾಕ್ಟ್ ಡೀಟೇಲ್ಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
6. ಈಗ ಹೊಸ ಪೇಜ್ ತೆರೆಯುತ್ತದೆ. ಈ ಪುಟದಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
7. ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ, ಡಿಕ್ಲೇರೇಶನ್ ನೀಡಬೇಕಾಗುತ್ತದೆ. ಅದರ ಮೇಲೆ YES ಎಂದು ಕೊಟ್ಟು, ರೈಟ್ ಕ್ಲಿಕ್ ಮೂಲಕ ಸಬ್ಮಿಟ್ ಮಾಡಿ.
ಪಾಲಿಸಿಯ ವಿವರವನ್ನು ನೀಡಬೇಕು :
1. ಈ ಸಂಪೂರ್ಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ನೀವು ಅಸ್ತಿತ್ವದಲ್ಲಿರುವ LIC ಗ್ರಾಹಕರಾಗಿದ್ದರೆ, ನಿಮ್ಮ ಪಾಲಿಸಿ ಸಂಖ್ಯೆಯನ್ನು ನೀಡಬೇಕಾಗುತ್ತದೆ.
2. ಇಲ್ಲಿ ನಿಮ್ಮ ಪಾಲಿಸಿ ಸಂಖ್ಯೆಯನ್ನು (Policy number) ನಮೂದಿಸಿದ ನಂತರ, ಪಾಲಿಸಿ ಡೀಟೇಲ್ದ್ ಮೇಲೆ ಕ್ಲಿಕ್ ಮಾಡಿ, ಪಾಲಿಸಿ ಸಂಖ್ಯೆಯನ್ನು ವೆರಿಫೈ ಮಾಡಬೇಕಾಗುತ್ತದೆ.
3. ಈ ಪ್ರಕ್ರಿಯೆಯ ನಂತರ ನಿಮ್ಮ ಸಂಪರ್ಕ ವಿವರಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ನವೀಕರಿಸಲಾಗುತ್ತದೆ.
4. ಇದರ ನಂತರ, ಎಲ್ಐಸಿ ಪಾಲಿಸಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ, ಯಾವುದೇ ಹೊಸ ನೀತಿ ಅಥವಾ ಹಳೆಯ ಪಾಲಿಸಿಯಲ್ಲಿನ ಅಪ್ಡೇಟ್ ಬಗ್ಗೆ ನೊಟಿಫಿಕೆಶನ್ ಗಳು ನಿಮ್ಮ ಫೋನ್‌ನಲ್ಲಿ ಬರಲು ಆರಂಭವಾಗುತ್ತದೆ.