ಅಫಜಲಪುರ ತಾಲ್ಲೂಕಿನ ತಹಶಿಲ್ದಾರರ ಕಛೇರಿಯಲ್ಲಿ ಕನಕದಾಸರ ಜಯಂತಿ ಆಚರಣೆ ಮಾಡಲಾಯಿತು.
ತಾಲ್ಲೂಕು ಆಡಳಿತದಿಂದ ಸರಳವಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದು,ನೂರಾರು ಜನ ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಹಿರಿಯ ವಕೀಲರಾದ ಕೆ.ಜಿ.ಪೂಜಾರಿ ಜಾತಿಯತೆಯನ್ನು ಅಂದಿನ ಕಾಲದಲ್ಲೇ ತೊಡೆದು ಹಾಕಿದ ಕೀರ್ತಿ ಕನಕದಾಸರಿಗೆ ಸಲ್ಲುತ್ತದೆ ಎಂದರು.ನಂತರ ಮಾತನಾಡಿದ ಮುಖಂಡ ಭಿರಣ್ಣ ಪೂಜಾರಿ ಸಮಾಜದ ಏಳಿಗೆಯನ್ನು ಬಯಸುವ ನಮ್ಮ ಸಮಾಜದ ಭಾಂದವರು ಒಗ್ಗೂಡಿ ಹಿಂತಹ ಕಾರ್ಯಕ್ರಮಗಳನ್ನು ಮಾಡುವುದರ ಮುಖಾಂತರ ನಮ್ಮ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.ಕಾರ್ಯಕ್ರಮದಲ್ಲಿ ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ವಿಠ್ಠಲ ಜಗಲಗೊಂಡ,ರಮೇಶ ಪೂಜಾರಿ,ಭಿರಣ್ಣ ಕನಕ ಟೇಲರ್, ಬಿ.ಎಮ್.ರಾವ್, ಮಾತೋಳಿ,ಸಿದ್ದಾರಾಮ ಗೌರ,ರಾಜು ಆರೇಕರ,ರವಿ ಗೌರ,ಗುರುದೇವ ಆನೂರ,ಮುಂತಾದವರು ಉಪಸ್ಥಿತರಿದ್ದರು.