iPhone XR: ಐಫೋನ್ ಖರೀದಿಗೆ ಕ್ಯೂ ನಿಂತ ಜನರು: ಕೇವಲ 18,599 ರೂ. ಗೆ ಸಿಗುತ್ತಿದೆ ಆ್ಯಪಲ್ ಫೋನ್
ನಾನೊಂದು ಐಫೋನ್ (iPhone) ಖರೀದಿಸಬೇಕು ಎಂಬುದು ಪ್ರತಿಯೊಬ್ಬ ಸ್ಮಾರ್ಟ್ಫೋನ್ (Smartphone) ಪ್ರಿಯನ ಕನಸು. ಆದರೆ, ಅದರ ಬೆಲೆ ಗಗನದೆತ್ತರಕ್ಕೆ ಇರುತ್ತದೆ. ಪ್ರಸಿದ್ಧ ಇ ಕಾಮರ್ಸ್ ತಾಣಗಳಲ್ಲಿ ಆ ಸೇಲ್, ಈ ಸೇಲ್ ಎಂಬುದು ಬಂದು ಆಫರ್ನಲ್ಲಿ ಖರೀದಿಸೋಣ ಎಂದರೂ ಅಷ್ಟೊಂದು ಹಣ ಇರುವುದಿಲ್ಲ. ಆದರೆ, ಇದೇ ಮೊದಲ ಬಾರಿಗೆ ಎಂಬಂತೆ ಐಫೋನ್ ಖರೀದಿಸಲು ಜನ ಕ್ಯೂ ನಿಂತುಕೊಂಡಿದ್ದಾರೆ. ಯಾಕಂದ್ರೆ ಈಗ ಅಷ್ಟೊಂದು ಕಡಿಮೆ ಮೊತ್ತಕ್ಕೆ ಆ್ಯಪಲ್ ಐಫೋನ್ ಎಕ್ಸ್ಆರ್ (iPhone XR) ಮಾರಾಟ ಆಗುತ್ತಿದೆ. ಹೌದು, ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ (Amazon) ಇದೇ ಮೊದಲ ಬಾರಿಗೆ ಅತ್ಯಂತ ಕಡಿಮೆ ಬೆಲೆಗೆ ಐಫೋನ್ ಖರೀದಿಸುವ ಅವಕಾಶ ಮಾಡಿಕೊಟ್ಟಿದೆ. ಇದನ್ನು ನೀವು ಕೇವಲ 18,599 ರೂ. ಗೆ ಪಡೆದುಕೊಳ್ಳಬಹುದು. ಹಾಗಾದ್ರೆ ಐಫೋನ್ XR ಅನ್ನು ಆಫರ್ನಲ್ಲಿ ಖರೀದಿ ಮಾಡುವುದು ಹೇಗೆ? ಎಂಬುದನ್ನು ನೋಡೋಣ. ಇದಕ್ಕೂ ಮುನ್ನ ಈ ಫೋನಿನಲ್ಲಿರುವ ವಿಶೇಷತೆ ಏನು ಎಂದು ಹೇಳುತ್ತೇವೆ ನೋಡಿ.
ಐಫೋನ್ XR ಫೋನ್ 1792×828 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.1 ಇಂಚಿನ LCD ಡಿಸ್ಪ್ಲೇಯನ್ನು ಒಳಗೊಂಡಿದ್ದು, ಡಿಸ್ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 326 ppi ಆಗಿದೆ. ಡಿಸ್ಪ್ಲೇಯ ಕಾಂಟ್ರಾಸ್ಟ್ ಅನುಪಾತವು 1400:1ರಷ್ಟಾಗಿದೆ. Neural ಇಂಚಿನ್ ಜೊತೆಗೆ A12 ಬೈಯೋನಿಕ್ ಚಿಪ್ ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಐಫೋನ್ಗೆ iOS 12 ಆಪರೇಟಿಂಗ್ ಸಿಸ್ಟಮ್ ಹೆಚ್ಚಿನ ಬೆಂಬಲ ಒದಗಿಸಿದೆ. 64GB, 128GB ಮತ್ತು 256GB ಆಂತರಿಕ ಸ್ಟೋರೇಜ್ ಸಾಮರ್ಥ್ಯವನ್ನು ಆಯ್ಕೆಗಳನ್ನು ಹೊಂದಿದೆ.
ಐಫೋನ್ XR ಫೋನ್ ƒ/1.8 ಅಪರ್ಚರ್ ಸಾಮರ್ಥ್ಯದಲ್ಲಿ 12ಎಂಪಿ ಸೆನ್ಸಾರ್ ಕ್ಯಾಮೆರಾವನ್ನು ಒಳಗೊಂಡಿದ್ದು, ಈ ಕ್ಯಾಮೆರಾವು 5x ಡಿಜಿಟಲ್ ಝೂಮ್ ಹೊಂದಿದೆ. ಹಾಗೆಯೇ ಸೆಲ್ಫಿಗಾಗಿ 7ಎಂಪಿ ಸೆನ್ಸಾರ್ನ ಕ್ಯಾಮೆರಾ ನೀಡಲಾಗಿದ್ದು, 1080p HD ರೆಕಾರ್ಡಿಂಗ್ ಬೆಂಬಲಿಸಲಿದೆ. ಜೊತೆಗೆ ಹೈಬ್ರಿಡ್ IR ಫಿಲ್ಟರ್, ಆಟೋಫೋಕಸ್, ಎಚ್ಆರ್ಡಿ, ಸ್ಲೋ ಮೋಷನ್, ಪೋರ್ಟ್ರೇಟ್ ಮೋಡ್ ಆಯ್ಕೆಗಳು ಇವೆ.
ಇನ್ನು 2,942mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ವಾಯರ್ಲೆಸ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದುಕೊಂಡಿದೆ. ಹಾಗೆಯೇ ಫಾಸ್ಟ್ ಚಾರ್ಜಿಂಗ್ ಆಯ್ಕೆಯನ್ನು ಹೊಂದಿದ್ದು, ಬ್ಯಾಟರಿ ಶಕ್ತಿ ನೀಡಲಿದೆ. ಈ ಡಿವೈಸ್ IP67 ಸಾಮರ್ಥ್ಯದ ವಾಟರ್ ರೆಜಿಸ್ಟಂಟ್ ಸೌಲಬ್ಯವನ್ನು ಪಡೆದಿದ್ದು, ಫಿಂಗರ್ಪ್ರಿಂಟ್, ಫೇಸ್ಐಡಿ, ಬ್ಲೂಟೂತ್, ವೈಫೈ ಆಯ್ಕೆಗಳನ್ನು ಹೊಂದಿದೆ. ಆಂಬಿಯಂಟ್ ಲೈಟ್ ಸೆನ್ಸಾರ್, ಬಾರೊಮೀಟರ್, ಪ್ರೊಕ್ಸಿಮೀಟಿ ಸೆನ್ಸಾರ್, ವಾಯಿಸ್ ಓವರ್, ಸಿರಿ ವಾಯಿಸ್ ಅಸಿಸ್ಟಂಟ್, ಅಸಿಸ್ಟಿವ್ ಟಚ್, ಸ್ಪೀಕ್ ಸ್ಕ್ರೀನ್ ಸೇರಿದಂತೆ ಪ್ರಮುಖ ಫೀಚರ್ಸ್ ನೀಡಲಾಗಿದೆ.
ಆಫರ್ ಏನು?:
ಅಮೆಜಾನ್ ತಾಣವು ಆ್ಯಪಲ್ ಐಫೋನ್ XR ಫೋನ್ ರಿಯಾಯಿತಿ ನೀಡಿದೆ. 64GB ಸ್ಟೋರೇಜ್ ವೇರಿಯಂಟ್ನ ಐಫೋನ್ XR ಫೋನ್ 34,999 ರೂ. ಪ್ರೈಸ್ ಟ್ಯಾಗ್ನಲ್ಲಿ ಕಾಣಿಸಿಕೊಂಡಿದೆ. ಇದರ ಜೊತೆಗೆ 14,900 ರೂ. ಗಳ ವರೆಗೂ ಎಕ್ಸ್ಚೇಂಜ್ ಕೊಡುಗೆ ಕೂಡ ನೀಡಿದೆ. ಇದಲ್ಲದೆ ಯೆಸ್ ಬ್ಯಾಂಕ್ ಅಥವಾ ಅಮೆರಿಕನ್ ಎಕ್ಸ್ಪ್ರೆಸ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 1,500 ರೂ. ಡಿಸ್ಕೌಂಟ್ ಸಿಗಲಿದೆ. ಹೀಗಾದಾಗ ಇದು ಕೇವಲ 18,599 ರೂ. ಗೆ ನಿಮ್ಮ ಕೈ ಸೇರಲಿದೆ.