ವಿದ್ಯಾರ್ಥಿಗಳ ಅನುಚಿತ ವರ್ತನೆ: ಶಿಕ್ಷಕರ ತಲೆ ಮೇಲೆ ಡಸ್ಟ್‌ಬಿನ್‌ ಇರಿಸಿ ಕುಚೇಷ್ಠೆ

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರಿನ (Nalluru, Davanagere) ಸರಕಾರಿ ಪ್ರೌಢಶಾಲೆಯ ಐವರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ (SSLC Students) ಗುಂಪು ತರಗತಿಯ ಸಮಯದಲ್ಲಿ ಶಿಕ್ಷಕ(Teacher)ರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ವಿಡಿಯೋ (Viral Video) ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ. ವಿದ್ಯಾರ್ಥಿಗಳ ಈ ಕೃತ್ಯಕ್ಕೆ ಗ್ರಾಮಸ್ಥರಿಂದ (villagers) ತೀವ್ರ ಆಕ್ಷೇಪ ವ್ಯಕ್ತವಾಗಿದೆ. ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಹಿಂದಿ ಶಿಕ್ಷಕ ಪ್ರಕ್ಷ್ ತರಗತಿಗೆ ಪ್ರವೇಶಿಸಿದಾಗ ವಿದ್ಯಾರ್ಥಿಗಳು ಅನುಚಿತವಾಗಿ ವರ್ತಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ವಿದ್ಯಾರ್ಥಿಯೊಬ್ಬ ಡಸ್ಟ್‌ಬಿನ್‌(Dustbin)ನಿಂದ ಹಲ್ಲೆಗೆ ಯತ್ನಿಸಿದ್ದಾನೆ. ನಂತರ ಶಿಕ್ಷಕರು ತರಗತಿಯಲ್ಲಿ ಪಾಠ ಮಾಡಲು ಪ್ರಾರಂಭಿಸುತ್ತಾರೆ. ಡಸ್ಟ್‌ಬಿನ್‌ ಡಬ್ಬವನ್ನು ಶಿಕ್ಷಕರ ತಲೆಯ ಮೇಲೆ ಇಡುತ್ತಾರೆ.

ಡಿಸೆಂಬರ್ 3ರಂದು ನಡೆದ ಘಟನೆ

ಡಿ.3ರಂದು ತರಗತಿಯಲ್ಲಿ (Classrooms) ಗುಟ್ಕಾ ಪೊಟ್ಟಣಗಳು (Gutka Packets) ಬಿದ್ದಿರುವುದು ಕಂಡು ಬಂದಿದ್ದು, ತರಗತಿಯಲ್ಲಿ ಕಸ ಹಾಕದಂತೆ ಹಾಗೂ ಶಿಸ್ತು ಕಾಪಾಡುವಂತೆ ವಿದ್ಯಾರ್ಥಿಗಳಿಗೆ ತಿಳಿಸಲಾಗಿತ್ತು. ಆದ್ರೆ ಕೆಲ ವಿದ್ಯಾರ್ಥಿಗಳು ನನ್ನ ಮೇಲೆಯೇ ಹಲ್ಲೆ ಮಾಡಲು ಮುಂದಾದ್ರೆ, ದೂರು ನೀಡಿದ್ರೆ ಮಕ್ಕಳ ಭವಿಷ್ಯಕ್ಕೆ ತೊಂದರೆ ಆಗಬಹುದು ಎಂದು ಸುಮ್ಮನಾದೆ ಎಂದು ಶಿಕ್ಷಕ ಪ್ರಕ್ಷ್ ಹೇಳುತ್ತಾರೆ.  ಈ ಎಲ್ಲ ದೃಶ್ಯಗಳನ್ನು ಕೆಲ ವಿದ್ಯಾರ್ಥಿಗಳು ಮೊಬೈಲ್ ನಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ವಿದ್ಯಾರ್ಥಿಗಳಿಂದ ಲಿಖಿತ ಪತ್ರ

ಈ ವಿಷಯ ತಿಳಿದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (MLA Madal Viruspakshappa), ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಆರ್.ತಿಪ್ಪೇಸ್ವಾಮಿ ಶಾಲೆಗೆ ಧಾವಿಸಿ ಸಿಬ್ಬಂದಿಯೊಂದಿಗೆ ಮಾತನಾಡಿ ಮಾಹಿತಿ ಕಲೆ ಹಾಕಿದ್ದಾರೆ. ನಂತರ ಮುಂದಿನ ದಿನಗಳಲ್ಲಿ ಈ ರೀತಿಯ ಕೃತ್ಯಗಳಲ್ಲಿ ತೊಡಗಿಕೊಳ್ಳಲ್ಲ ಎಂದು ವಿದ್ಯಾರ್ಥಿಗಳಿಂದ ಲಿಖಿತ ಪತ್ರವನ್ನು ಬರೆಸಿಕೊಳ್ಳಲಾಗಿದೆ.

ವಿದ್ಯಾರ್ಥಿಗಳ ವಿರುದ್ಧ ದೂರು ನೀಡುವಂತೆ ಒತ್ತಾಯ

ವಿದ್ಯಾರ್ಥಿಗಳ ಭವಿಷ್ಯವನ್ನು ಪರಿಗಣಿಸಿ, ಶಿಕ್ಷಕರು ಪೊಲೀಸರಿಗೆ ದೂರು ನೀಡದಿರಲು ನಿರ್ಧರಿಸಿದ್ದಾರೆ. ಇದೇ ವೇಳೆ ಕೃತ್ಯದಲ್ಲಿ ಭಾಗಿಯಾಗಿರುವ ವಿದ್ಯಾರ್ಥಿಗಳಿಗೆ ವರ್ಗಾವಣೆ ಪ್ರಮಾಣ ಪತ್ರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡುವಂತೆ ಒತ್ತಾಯಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪ್ರತಿಕ್ರಿಯೆ

ಘಟನೆ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮಹಾಂತೇಶ ಬಿಳಗಿ, ಸಾರ್ವಜನಿಕ ಸೂಚನಾ ಇಲಾಖೆಯ ಉಪನಿರ್ದೇಶಕರಿಂದ ವರದಿ ಸಂಗ್ರಹಿಸುವುದಾಗಿ ತಿಳಿಸಿದರು. ವರದಿ ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ನಾನು ಕೂಡ ಮಕ್ಕಳು ಶಿಕ್ಷಕರಿಗೆ ಕುಚೇಷ್ಟೆ ಮಾಡಿರೋ ವಿಡಿಯೋ ನೋಡಿದ್ದೇನೆ. ಗಲಾಟೆ ಮಾಡಿದ ಮಕ್ಕಳನ್ನ ಪತ್ತೆ ಮಾಡಿ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೇಳಿದ್ದೇನೆ. ನಾನು ಡಿಡಿಪಿಐ ಗೂ ಕೂಡ ಸ್ಥಳಕ್ಕೆ ಭೇಟಿ ನೀಡಲು ಹೇಳಿದ್ದೇನೆ ಡಿಡಿಪಿಐ ಕೂಡ ಅಲ್ಲಿದ್ದಾರೆ. ಅವರು ವರದಿ ಕೊಟ್ಟ ನಂತರ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪಾಲಕರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿ. ಅದನ್ನ ಬಿಟ್ಟು ದುಬಾರಿ ವಸ್ತುಗಳನ್ನ ಕೊಡಿಸಿ ಅವರ ಜೀವನ ನೀವೇ ಹಾಳು ಮಾಡಬೇಡಿ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ನೆಚ್ಚಿನ ಶಿಕ್ಷಕಿ ವರ್ಗಾವಣೆ ಆಗಿದ್ದಕ್ಕೆ ಕಣ್ಣೀರಿಟ್ಟ ಮಕ್ಕಳು

ತಮ್ಮ ನೆಚ್ಚಿನ ಶಿಕ್ಷಕಿ ವರ್ಗಾವಣೆಗೊಂಡು (Teacher Transfer) ಮತ್ತೊಂದು ಶಾಲೆಗೆ (School) ತೆರಳುತ್ತಿರುವ ಸಂದರ್ಭದಲ್ಲಿ ಮಕ್ಕಳು (Students) ಕಣ್ಣೀರು ಹಾಕಿರುವ ಘಟನೆಗೆ ವಿಜಯನಗರ (Vijayanagara) ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹೊಳಗುಂದಿ ಗ್ರಾಮದ ಸರ್ಕಾರಿ ಶಾಲೆ ಸಾಕ್ಷಿಯಾಗಿದೆ.

ಶಿಕ್ಷಕಿ ಅನುಸೂಯ ಅವರು ಕಳೆದ 18 ವರ್ಷಗಳಿಂದ ಹೊಳಗುಂದಿ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇದೀಗ ಹೂವಿನ ಹಡಗಲಿಗೆ ವರ್ಗಾವಣೆಯಾಗಿದೆ. ಈ ವಿಷಯ ತಿಳಿದು ವಿದ್ಯಾರ್ಥಿಗಳು, ನೀವೂ ಎಲ್ಲಿಯೂ ಹೋಗಬೇಡಿ ಎಂದು ಕಣ್ಣೀರು ಹಾಕಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *