Miss Universe 2021: ಭುವನ ಸುಂದರಿಯಾಗಿ ಹೊರಹೊಮ್ಮಿದ ಭಾರತದ ಹರ್ನಾಜ್ ಸಂಧು

Miss Universe Harnaaz Sandhu: 2021 ರ ಮಿಸ್​ ಯುನಿವರ್ಸ್​ ಸ್ಪರ್ಧೆಯ ವಿಜೇತೆಯಾಗಿ ಚಂಡೀಗಢ ಮೂಲದ ಹರ್ನಾಜ್​ ಸಂಧು ಆಯ್ಕೆಯಾಗಿದ್ದಾರೆ. ಇಸ್ರೇಲ್​ನ ಐಲಾಟ್​ನಲ್ಲಿ ನಡೆದ 70ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ 21 ವರ್ಷದ ಹರ್ನಾಜ್​ ಸಂಧು ಭುವನ ಸುಂದರಿಯಾಗಿ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ.  ಈ ಮೂಲಕ 21 ವರ್ಷಗಳ ಬಳಿಕ ಭಾರತಕ್ಕೆ ಮಿಸ್​ ಯುನಿವರ್ಸ್​ ಪಟ್ಟ ದೊರಕಿದೆ. 2000ರಲ್ಲಿ ಲಾರಾದತ್ತ ಭುವನ ಸುಂದರಿಯಾಗಿ ಹೊರಹೊಮ್ಮಿದ್ದರು. ಅವರ ಬಳಿಕ ಈಗ ಹರ್ನಾಜ್​ ಸಂಧು 2021ರ ವಿಶ್ವ ಸುಂದರಿಯಾಗಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಇಸ್ರೇಲ್​ನಲ್ಲಿ ನಡೆದ ಸ್ಪರ್ಧೆಯನ್ನು ಲೈವ್​ ಸ್ಟ್ರೀಮ್​ನಲ್ಲಿ ಟೆಲಿಕಾಸ್ಟ್​ ಮಾಡಲಾಗಿತ್ತು. ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ಹರ್ನಾಜ್​ ಸಂಧು ಅವರಿಗೆ ಮೆಕ್ಸಿಕೊದ 2020ರ ಮಾಜಿ ವಿಶ್ವ ಸುಂದರಿ ಆಂಡ್ರಿಯಾ ಮೆಜಾ ಅವರು ಕಿರೀಟವನ್ನು ತೊಡಿಸಿದ್ದಾರೆ.

ಪರಾಗ್ವೆಯ ನಾಡಿಯಾ ಫೆರಾರಾ ಮತ್ತು ದಕ್ಷಿಣ ಆಫ್ರಿಕಾದ ಲಾಲೆಲಾ ಮ್ಸಾವೆಎ ಅವರನ್ನು ಹಿಂದಿಕ್ಕಿ ಹರ್ನಾಜ್​ ಸಂಧು ವಿಶ್ವ ಸುಂದರಿ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ.  ಈಮೂಲಕ ಭಾರತಕ್ಕೆ ಮೂರನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಟ್ಟಿದ್ದಾರೆ. 1994ರಲ್ಲಿ ಸುಶ್ಮಿತಾ ಸೇನ್ ಮಿಸ್​ ಯುನಿವರ್ಸ್​ ಪಟ್ಟವನ್ನು ಹಾಗೂ 2000ರಲ್ಲಿ ಲಾರಾದತ್ತ ಮಿಸ್​ ಯುನಿವರ್ಸ್​ ಆಗಿ ಹೊರಹೊಮ್ಮಿದ್ದರು. ಅದರ ಬಳಿಕ ಈಗ ಹರ್ನಾಜ್​ ಸಂಧು ಭುವನಸುಂದರಿಯಾಗಿ ಹೊರಹೊಮ್ಮಿದ್ದಾರೆ.

ಹರ್ನಾಜ್​ ಸಂಧು ಅವರಿಗೆ ಸ್ಪರ್ಧೆಯಲ್ಲಿ ಮೊದಲ ಮೂರು ಸುತ್ತಿನ ಭಾಗವಾಗಿ ಇಂದು ಯುವತಿಯರು ಎದುರಿಸುತ್ತಿರುವ ಇತ್ತಡಗಳನ್ನು ಹೇಗೆ ಎದುರಿಸಬೇಕು? ಹಾಗೂ ನಿಮ್ಮ ಸಲಹೆಗಳೇನು ಎಂದು ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಹರ್ನಾಜ್​ ಸಂಧು ಇಂದಿನ ಯುವ ಜನತೆ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದರೆ ಅದು ಆತ್ಮವಿಶ್ವಾಸ ಅವರ ಅವರ ಮೇಲೆ ಇರುವ ನಂಬಿಕೆಯ ಕೊರತೆ. ಇತರರು ಏನೆಂದುಕೊಳ್ಳುತ್ತಾರೊ ಎನ್ನುವ ದುಗುಢ ಭಾವದಿಂದೇ ಇಂದಿಯ ಯುವಜನತೆ ತಾವು ಮಾಡುವ ಕೆಲಸದಿಂದ ವಿಮುಖರಾಗುತ್ತಿದ್ದಾರೆ ಎಂದರು. ಜತಗೆ ಸಲಹೆಯಾಗಿ  ಅದರ ಬದಲು ಬೇರೆಯವರೊಂದಿಗೆ ಹೊಂದಾಣಿಕೆ ಮಾಡುವುದನ್ನು ನಿಲ್ಲಿಸಿ, ನಿಮಗೇ ನಿಮ್ಮದೇ ಅದ ಜೀವನವಿದೆ, ಕನಸಿದೆ. ಅದರೆಡೆಗೆ ಗಮನ ನೀಡಿ. ಪ್ರಪಂಚದಲ್ಲಿ ಅನೇಕ ಸಂಗತಿಗಳು ನಡೆಯುತ್ತಿರುತ್ತವೆ. ಅದನ್ನು ಚರ್ಚಿಸಿ. ನಿಮ್ಮ ಕನಸಿಗೆ ನೀವೇ ಧ್ವನಿಯಾಗಬೇಕು.  ನನ್ನನ್ನು ನಾನು ಹೆಚ್ಚು ನಂಬುತ್ತೇನೆ ಅದರಿಂದಲೇ ನಾನು ಇಂದು ಈ ಸ್ಥಾನದಲ್ಲಿದ್ದೇನೆ ಎಂದು ಸಲಹೆ ನೀಡುವ ಮೂಲಕ ತೀರಪುಗಾರರ ಪ್ರಶ್ನೆಗೆ ಹರ್ನಾಜ್​ ಸಂಧು ಉತ್ತರಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *